Advertisement

ಹೈನುಗಾರರ ಆರ್ಥಿಕ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘ

12:24 AM Feb 25, 2020 | mahesh |

ಎಡಪದವು ಹಾಲು ಉತ್ಪಾದಕರ ಸಹಕಾರ ಸಂಘವು ಆರಂಭವಾಗಿ 35 ವರ್ಷಗಳೇ ಕಳೆದಿವೆ. ಆರಂಭ ಕಾಲದಿಂದಲೂ ಇಂದಿನವರೆಗೆ ಪ್ರದೇಶ ಹೈನುಗಾರರಿಗೆ ಮತ್ತು ಕೃಷಿಕರಿಗೆ ಸೊದ್ಯೋಗ ಒದಗಿಸುವುದರ ಜತೆಗೆ ಆರ್ಥಿಕ ಪುನಶ್ಚೇತನಕ್ಕೆ ಒತ್ತು ನೀಡಲಾಗುತ್ತಿದೆ. ಸಂಘವು ಸಾಮಾಜಿಕ ಕಾರ್ಯಚಟುವಟಿಕೆಗಳಿಂದ ವ್ಯಾಪ್ತಿಯಲ್ಲಿ ಗುರುತಿಸಿಕೊಂಡಿದೆ.

Advertisement

ಕೈಕಂಬ: ಎಡಪದವು ಹಾಲು ಉತ್ಪಾದಕರ ಸಹಕಾರ ಸಂಘ 1985ರಲ್ಲಿ ಸ್ಥಾಪನೆಗೊಂಡಿತು. ಬಡಗ ಎಡಪದವು, ತೆಂಕ ಎಡಪದವು ಗ್ರಾಮಗಳು ಈ ಸಂಘದ ಕಾರ್ಯಕ್ಷೇತ್ರ ವ್ಯಾಪ್ತಿಗೆ ಬರುತ್ತವೆ.

ಸದಸ್ಯರಿಂದ ಉತ್ತಮ ಗುಣಮಟ್ಟದ ಹಾಲನ್ನು ಯೋಗ್ಯ ಬೆಲೆಗೆ ಖರೀದಿಸಿ ಅದನ್ನು ಒಕ್ಕೂಟಕ್ಕೆ ಮಾರಾಟ ಮಾಡುವುದು, ಸದಸ್ಯರಿಗೆ ಹಾಲು ಉತ್ಪಾದನೆ ಹೆಚ್ಚಿಸುವುದು, ಸಮತೋಲನ ಪಶು ಆಹಾರ, ವೈದ್ಯಕೀಯ ಸೇವೆ ಒದಗಿಸುವುದು. ಸದಸ್ಯರು ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುವುದು. ಸದಸ್ಯರಿಗೆ ಸಮಯಕ್ಕೆ ಸರಿಯಾಗಿ ತರಬೇತಿ ಕಾರ್ಯಕ್ರಮ ನೀಡಿ ಉತ್ತಮ ಗುಣಮಟ್ಟದ ಹಾಲು ಉತ್ಪಾದಿಸಲು ಸಹಕರಿಸುವುದು ಸಂಘದ ಮುಖ್ಯ ಉದ್ದೇಶವಾಗಿದೆ.

ಸಂಘ ಆರಂಭದಿಂದಲೂ ತೆಂಕ ಎಡಪದವು ಗ್ರಾ.ಪಂ. ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತ ಬಂದಿದೆ. ಸ್ವಂತ ಕಟ್ಟಡ ನಿರ್ಮಾಣಕ್ಕೆ ಜಾಗದ ಬಗ್ಗೆ ಮನವಿಯನ್ನು ಸಲ್ಲಿಸಿದೆ.

ಈ ಸಂಘ 2017-18ರಲ್ಲಿ 3,86,416 ರೂ. ಲಾಭ ಗಳಿಸಿದ್ದು ಸದಸ್ಯ ರೈತರಿಗೆ 1,84,610 ರೂ. ಬೋನಸ್‌ ನೀಡಿದೆ. 2018-19ರಲ್ಲಿ 3,01,441 ರೂ. ಲಾಭ ಗಳಿಸಿದ್ದು ಸದಸ್ಯ ರೈತರಿಗೆ 1,44,014 ರೂ. ಬೋನಸ್‌ ನೀಡಿದೆ. ಕಳೆದ 2 ವರ್ಷಗಳಿಂದ ಸಂಘ ಕಂಪ್ಯೂಟರೀಕರಣಗೊಂಡಿದ್ದು ಹಾಲಿನ ಗುಣಮಟ್ಟವನ್ನು ಡಿಗ್ರಿ ಹಾಗೂ ಪ್ಯಾಟ್‌ನ್ನು ಮಾಪನ ಮಾಡಿ, ದರ ನಿಗದಿಗೊಳಿಸಲಾಗುತ್ತದೆ.

Advertisement

ಅಧ್ಯಕ್ಷರು
1985ರಿಂದ ಶ್ರೀಧರ್‌ ರಾವ್‌, 1998ರಿಂದ ಎಲ್‌.ಐ . ಸೋನ್ಸ್‌, ಶಿವ ಶೆಟ್ಟಿ, ವಾಸುದೇವ ನಾಯಕ್‌, ಆನಂದ ದೇವಾಡಿಗ, 2008ರಿಂದ ಆಲ್ವಿನ್‌ ಜೆ. ಪಿಂಟೋ, 2016ರಿಂದ ಮಾಧವ ದೇವಾಡಿಗ.

ಕಾರ್ಯದರ್ಶಿಗಳು
ಕಾರ್ಯದರ್ಶಿಗಳಾಗಿ 1985ರಿಂದ ಪಿ. ಜಯರಾಮ್‌, 2008 ರಿಂದ ನವೀನ ಕುಮಾರ್‌ ಮತ್ತು ತುಳಸಿ, 2016ರಿಂದ ಮನೋಜ್‌ ಕುಮಾರ್‌.

500 ಲೀ. ಹಾಲು ಉತ್ಪಾದನೆ
ಸಂಘವು ಸ್ಥಾಪನೆಯಾದ ಸಮಯದಲ್ಲಿ 57 ಸದಸ್ಯರನ್ನು ಹೊಂದಿದ್ದು, 1, 090ರೂ. ಪಾಲು ಬಂಡವಾಳದೊಂದಿಗೆ ಆರಂಭವಾಗಿತ್ತು. ದಿನಕ್ಕೆ 20ಲೀ. ಹಾಲು ಉತ್ಪಾದನೆಯಾಗಿತ್ತು. ಪ್ರಸ್ತುತ 25ಸಾವಿರ ರೂ. ಪಾಲು ಬಂಡವಾಳವನ್ನು ಹೊಂದಿದೆ. 226 ಸದಸ್ಯರನ್ನು ಹೊಂದಿದ್ದು ಇದರಲ್ಲಿ 53 ಮಹಿಳಾ ಸದಸ್ಯರನ್ನು ಹೊಂದಿದೆ. ಈ ಸಂಘ ದಿನಕ್ಕೆ 400ರಿಂದ 500ಲೀ. ಹಾಲನ್ನು ಉತ್ಪಾದಿಸುತ್ತಿದೆ.

ಆಧುನಿಕ ಹೈನುಗಾರಿಕೆ ತಂತ್ರಜ್ಞಾನ ಬಳಕೆ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮ , ರೈತರಿಗೆ ಕೃಷಿಯ ಜತೆ ಹೈನುಗಾರಿಕೆಗೆ ಪ್ರೋತ್ಸಾಹ, ಸರಕಾರದ ಸವಲತ್ತುಗಳ ಸದ್ಬಳಕೆ , ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚಿಸಿ ಅಧಿಕ ಲಾಭ ಗಳಿಸಿ, ಸದಸ್ಯರಿಗೆ ಇನ್ನಷ್ಟು ಸವಲತ್ತು ಹಾಗೂ ಸಹಕಾರ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ.
ಮಾಧವ ದೇವಾಡಿಗ,ಅಧ್ಯಕ್ಷರು, ಎಡಪದವು ಹಾಲು ಉತ್ಪಾದಕರ ಸಹಕಾರ ಸಂಘ

-  ಸುಬ್ರಾಯ ನಾಯಕ್‌, ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next