ಉಳ್ಳಾಲ: ಭೌತಿಕ ಲೋಕದ ಪ್ರೀತಿಯಿಂದ ಸಮಸ್ತ ಕೇರಳ ಜಮಿಯುತ್ತಲ್ ಉಲಮಾ ಸಂಘಟನೆ ಸ್ಥಾಪಿಸಿಲ್ಲ, ಧಾರ್ಮಿಕವಾಗಿ ಜಾಗೃತಿ ಮೂಡಿಸಿ ಧಾರ್ಮಿಕತೆ ಉಳಿಸುವ ನಿಟ್ಟಿನಲ್ಲಿ ಸಂಘಟನೆ ಕಾರ್ಯಚರಿಸುತ್ತಿದೆ ಎಂದು ಸಮಸ್ತ ಕೇರಳ ಜಮ್-ಇಯತ್ತುಲ್ ಉಲಮಾದ ಅಧ್ಯಕ್ಷ ಸಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು.
ಮುಹಿಯ್ಯುದ್ದೀನ್ ಜುಮಾ ಮಸೀದಿ (ಹೊಸಪಳ್ಳಿ) ಮೇಲಂಗಡಿ ಆಶ್ರಯದಲ್ಲಿ ಹೊಸಪಳ್ಳಿ ಆಡಳಿತ ಸಮಿತಿ ಹಾಗೂ ದಾನಿಗಳ ಸಹಾಯ ದಿಂದ ನಿರ್ಮಿಸಲಾದ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಹಿಂದೆ ಯಾವುದೇ ವ್ಯವಸ್ಥೆ ಇಲ್ಲದೆ, ಎಲ್ಲ ಕಷ್ಟಗಳನ್ನು ಸಹಿಸಿ ಧಾರ್ಮಿಕ ಬೋಧನೆ ಮೂಲಕ ಪ್ರಚಾರ ಪಡಿಸಿದ್ದಾರೆ. ಇಂದು ಮೂಲಸೌಕರ್ಯ, ಸಂಪತ್ತು, ಆಹಾರ ವ್ಯವಸ್ಥೆ ಎಲ್ಲವೂ ಅಭಿವೃದ್ಧಿ ಹೊಂದಿದೆ. ಧಾರ್ಮಿಕ ಕೇಂದ್ರಗಳಿಗೆ ಆದಾಯವೂ ಹೆಚ್ಚಿದ್ದು, ಅಭಿವೃದ್ಧಿ ಸಾಧ್ಯವಾಗಿದೆ ಎಂದರು.
ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾಹಿ, ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಖತೀಬ್ ಶಮೀಮ್ ಸಖಾಫಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ ಕೆ. ಅಶ್ರಫ್, ಸಯ್ಯದ್ ಮದನಿ ಚಾರಿಟೆಬಲ್ ಟ್ರಸ್ಟ್ ಉಪಾಧ್ಯಕ್ಷ ಮುಸ್ತಾಫ ಅಬ್ದುಲ್ಲ, ಮುಹಿಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಬಾವಾ ಫಕೀರ್ ಸಾಹೇಬ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹರೇಕಳ, ಸಯ್ಯದ್ ಮದನಿ ಅರೆಬಿಕ್ ಟ್ರಸ್ಟ್ ಕಾರ್ಯದರ್ಶಿ ಆಸಿಫ್ ಅಬ್ದುಲ್ಲ, ಸದಸ್ಯರಾದ ಜಮಾಲ್ ಬಾರ್ಲಿ, ಪ್ರಮುಖರಾದ ಅಕºರ್ ಉಳ್ಳಾಲ್, ಇಬ್ರಾಹಿಂ ಕೊಣಾಜೆ, ಉದ್ಯಮಿ ಸಂಶುದ್ದೀನ್ ಕುದ್ರೋಳಿ, ಪತ್ರಕರ್ತ ಹಮೀದ್ ಪತ್ತಿಕಲ್, ನೌಷಾದ್ ಅಬೂಬಕ್ಕರ್, ಖಾಲಿದ್ ಆಲಿಯಬ್ಬ, ಸಂಶುಲ್ ಉಲಮಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್, ಮಸೀದಿಯ ಪದಾಧಿಕಾರಿ ಬಶೀರ್ ಗುಂಡಿಹಿತ್ತಿಲು, ಅಬ್ದುಲ್ ಲತೀಫ್, ಯು.ಪಿ. ಹಸನಬ್ಬ, ಬಶೀರ್ ಇಸ್ಮಾಯಿಲ್, ಸಯ್ಯದ್ ಇಬ್ರಾಹಿಂ ತಂಙಳ್, ಕುಂಞಿಬಾವಾ ಮೊದಲಾದವರು ಉಪಸ್ಥಿತರಿದ್ದರು.
ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಫಾರೂಕ್ ಉಳ್ಳಾಲ್ ಪ್ರಾಸ್ತಾ ವಿಕವಾಗಿ ಮಾತನಾಡಿ, ವ್ಯವಸ್ಥಾಪಕ ರಹೀಂ ಮುಟ್ಟಿಕ್ಕಲ್ ನಿರ್ವಹಿಸಿದರು.