Advertisement

ನಿರುಪಯೋಗಿ ರಾಜ್ಯ ವಿಕಲಾಂಗ ಕ್ಷೇಮ ನಿಗಮ ಸಹಾಯಕ ತಂತ್ರಜ್ಞಾನ ಕೇಂದ್ರ!

10:00 PM Dec 29, 2019 | mahesh |

ಕುಂಬಳೆ: ಮಂಗಲ್ಪಾಡಿ ಗ್ರಾ. ಪಂ. ವತಿಯಿಂದ ನಯಾಬಜಾರಿನಲ್ಲಿ ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯ ಮುಂಭಾಗ ಹೆದ್ದಾರಿ ಪಕ್ಕದಲ್ಲಿ ಲೈಬ್ರೆರಿ ಮತ್ತು ವಾಚನಾಲಯ ಕಟ್ಟಡಕ್ಕೆ 1988ರ ಆ. 6ರಂದು ಮಾನ್ಯ ಶಾಸಕ ಚೆರ್ಕಳಂ ಅಬ್ದುಲ್ಲ ಶಿಲಾನ್ಯಾಸಗೈದರು. ಈ ಕಟ್ಟಡಕ್ಕೆ ಸಾಂಸೃತಿಕ ನಿಲಯ ಎಂಬುದಾಗಿ ನಾಮಕರಣ ಮಾಡಿ ಕಟ್ಟಡವನ್ನು 1990ರ ಡಿ. 6ರಂದು ಕಾಸರಗೋಡು ಜಿಲ್ಲಾಧಿಕಾರಿ ಜಿ.ಸುಧಾಕರನ್‌ ಉದ್ಘಾಟಿಸಿದ್ದರು.ಕ್ಷೇತ್ರದ ಶಾಸಕ ಚೆರ್ಕಳಂ ಅಬ್ದುಲ್ಲ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉದ್ಘಾಟನೆಯ ಬಳಿಕ ಈ ಕಟ್ಟಡದಲ್ಲಿ ಸಾಂಸೃತಿಕ ಚಟುವಟಿಕೆಗಳು ಅಷ್ಟೊಂದು ಯಶಸ್ವಿ ಯಾಗಿ ನಡೆಯದೆ ಇದರ ಬಾಗಿಲು ಮುಚ್ಚುವಂತಾಯಿತು.

Advertisement

ಬಳಿಕ ಈ ಕಟ್ಟಡದಲ್ಲಿ ಕೇರಳ ರಾಜ್ಯ ವಿಕಲಾಂಗ ಕ್ಷೇಮ ನಿಗಮದ ಸಹಾಯಕ ತಂತ್ರಜ್ಞಾನ ಕೇಂದ್ರವನ್ನು 2005ರಲ್ಲಿ ಶಾಸಕ ಚೆರ್ಕಳಂ ಅಬ್ದುಲ್ಲ ಉದ್ಘಾಟಿಸಿದರು. ಶಾಸಕರ ವಿಶೇಷ ಆಸಕ್ತಿಯಿಂದ ಇಲ್ಲಿ ತೆರೆದ ಕಚೇರಿಯ ಅಂದಿನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶಾಸಕರು ಜಿಲ್ಲೆಯ ವಿಕಲಾಂಗರ ಸಹಾಯ ಉಪಕರಣಗಳನ್ನು ಇಲ್ಲಿಂದಲೇ ವಿತರಿಸುವುದಾಗಿ ಹೇಳಿದ್ದರು. ಆ ಬಳಿಕ ಕೆಲವು ಉಪಕರಣಗಳನ್ನು ತಂದು ಈ ಕಟ್ಟಡದೊಳಗೆ ಶೇಖರಿಸಲಾಗಿತ್ತು. ಆದರೆ ಇದು ಹಲವು ವರ್ಷಗಳ ಕಾಲ ಇಲ್ಲೇ ಉಳಿದು ಕೊನೆಗೆ ತುಕ್ಕು ಹಿಡಿದು ಹೆಚ್ಚಿನವುಗಳು ಮಾಯವಾಗಿದ್ದು ಉಳಿದ ಕೆಲವನ್ನು ಮಾತ್ರ ಕಾಣಬಹುದಾಗಿದೆ.

ಈ ಕಟ್ಟಡವನ್ನು ಕಾಸರಗೋಡು ಜಿಲ್ಲಾ ಪಂಚಾಯತ್‌ನ ಸುಪ‌ರ್ದಿಗೆ ನೀಸುವ ಮೂಲಕ ಕೇಂದ್ರ ಸರಕಾರದ ದೇಶೀಯ ವಿಕಲಾಂಗ ಪುನರ್ವಸತಿ (ಎನ್‌ಪಿಆರ್‌ಪಿಡಿ)ಯೋಜನೆಯಲ್ಲಿ ಕೆಲವೊಂದು ವಸ್ತುಗಳನ್ನು ಇರಿಸಲು ಜಿ.ಪಂ. ಈ ಕಟ್ಟಡವನ್ನು ಬಳಸಿ ಯೋಜನೆ ಮೊಟಕುಗೊಂಡಾಗ ಕಟ್ಟಡದ ಬಾಗಿಲು ಮುಚ್ಚಲಾಗಿತ್ತು. ಬಳಿಕ ಇದರ ಬಾಗಿಲು ಈ ತನಕ ಶಾಶ್ವತವಾಗಿ ಮುಚ್ಚಿಯೇ ಇದೆ. ಸಮಾಜದ್ರೋಹಿಗಳು ಕಟ್ಟಡದ ಬಾಗಿಲು ಮುರಿದು ಈ ಕಟ್ಟಡವನ್ನು ಅಕ್ರಮವಾಗಿ ಪ್ರವೇಶಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ನಿರತರಾದುದನ್ನು ಕಂಡು ಸ್ಥಳೀಯಾಡಳಿತವು ಈ ಕಟ್ಟಡದ ಹೊರಗಿನ ಗ್ರಿಲ್‌ ಬಾಗಿಲಿಗೆ ಸಣ್ಣದೊಂದು ಬೀಗ ಜಡಿದಿದೆ.ಪ್ರಕೃತ ಕಟ್ಟಡದ ಸುತ್ತ ಪೊದೆಗಳಿಂದ ಆವರಿಸಿದೆ.ಕಸಕಡ್ಡಿ ತುಂಬಿ ವಾತಾವರಣ ಮಲಿನವಾಗಿದೆ.

ಈ ಮಧ್ಯೆ ಮಂಜೇಶ್ವರ ತಾಲೂಕು ಸಪೈ ಕಚೇರಿ ಬಂದೋಡಿನಲ್ಲಿ ಅವ್ಯಸ್ಥಿತ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವುದನ್ನು ಮನಗಂಡು ತಾಲೂಕು ಪಡಿತರ ಕಚೇರಿಯನ್ನು ಈಕಟ್ಟಡದಲ್ಲಿ ತೆರೆಯಲು ಇದನ್ನು ತಮಗೆ ಮರಳಿಸಬೇಕೆಂಬುದಾಗಿ ಮಂಗಲ್ಪಾಡಿ ಗ್ರಾಮ ಪಂಚಾಯತ್‌ ಜಿಲ್ಲಾ ಪಂಚಾಯತ್‌ಗೆ ಮನವಿ ಮಾಡಿತು.ಇದರಂತೆ ಕಳೆದ 2018 ಅಗಸ್ಟ್‌ ತಿಂಗಳ ಜಿ.ಪಂ. ಮಾಸಿಕ ಸಭೆಯಲ್ಲಿ ಕಟ್ಟಡವನ್ನು ಮರಳಿ ಮಂಗಲ್ಪಾಡಿ ಗ್ರಾ.ಪಂ.ಆಡಳಿತಕ್ಕೆ ಒಪ್ಪಿಸಲು ನಿರ್ಣಯ ಕೈಗೊಳ್ಳಲಾಯಿತು.ಆದರೆ ನಿರ್ಣಯ ಕೈಗೊಂಡು 1 ವರ್ಷ 5 ತಿಂಗಳು ಸಂದರೂ ಈ ಕಟ್ಟಡದಲ್ಲಿ ತಾಲೂಕು ಸಪೈÉ ಕಚೇರಿ ಆರಂಭಗೊಂಡಿಲ್ಲವೆಂಬ ಆರೋಪ ಸಾರ್ವಜನಿಕರದು. ಸಾಮಾಜಿಕ ನೀತಿ ಇಲಾಖೆಯ ಅಧಿಕಾರಿಗಳಲ್ಲಿ ಈ ಕಟ್ಟದೊಳಗಿನ ಸಾಮಗ್ರಿಗಳನ್ನು ತೆರವುಗೊಳಿಸಿ ಪಡಿತರ ಕೇಂದ್ರ ತೆರೆಯಲು ಅವಕಾಶ ಮಾಡಬೇಕೆಂಬುದಾಗಿ ಜಿ.ಪಂ.ಆದೇಶ ನೀಡಿದರೂ ಅಧಿಕಾರಿಯವರು ಯಾವುದೇ ಕ್ರಮ ಕೈಗೊಂಡಿಲ್ಲವೆಂಬ ಆರೋಪ ಜಿಲ್ಲಾ ಪಂಚಾಯತ್‌ ಆಡಳಿತದ್ದು. ಆದುದರಿಂದ ಈ ಅಧಿಕಾರಿಯ ವಿರುದ್ಧ 2019 ಅ.ತಿಂಗಳ ಜಿ.ಪಂ. ಸಭೆಯಲ್ಲಿ ಶೋ ಕಾಸ್‌ ನೋಟೀಸು ನೀಡಲು ನಿರ್ಣಯ ಕೈಗೊಳ್ಳಲಾಗಿದೆ ಎಂಬುದಾಗಿ ಜಿಲ್ಲಾ ಪಂಚಾಯತ್‌ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್‌ ತಿಳಿಸಿದ್ದಾರೆ.

ತಾಲೂಕು ಸಪ್ಲೈ ಕಚೇರಿ
ಕಟ್ಟಡವನ್ನು ನಮಗೆ ಹಸ್ತಾಂತರಿಸಿದ ಬಳಿಕ ಕಟ್ಟಡದೊಳಗಿನ ಕೆಲವೊಂದು ಸಾಮಗ್ರಿಗಳನ್ನು ಖಾಲಿಮಾಡಲು ಕುಟುಂಬಶ್ರೀ ಗ್ರಾ.ಪಂ.ಘಟಕಕ್ಕೆ ನಿರ್ದೇಶಿಸಲಾಗಿದೆ. ಸಾಮಗ್ರಿಗಳ ತೆರವಿನ ಬಳಿಕ ಕಟ್ಟಡವನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಅನುಕೂಲಕ್ಕಾಗಿ ಇದರಲ್ಲಿ ಮಂಜೇಶ್ವರ ತಾಲೂಕು ಸಪ್ಲೆ„ಕಚೇರಿಯನ್ನು ಆರಂಭಿಸಲಾಗುವುದು.
-ಶಾಹುಲ್‌ ಹಮೀದ್‌ ಬಂದ್ಯೋಡು. ಮಂಗಲ್ಪಾಡಿ ಗ್ರಾ.ಪಂ.ಅಧ್ಯಕ್ಷರು.

Advertisement

ವರ್ಗಾವಣೆ ವಿಳಂಬ
ಗ್ರಾ.ಪಂ.ಆಡಳಿತದೊಂದಿಗೆ ನಿಕಟ ಸಂಪರ್ಕವಿರುವ ಓರ್ವ ಗುತ್ತಿಗೆದಾರ ಮತ್ತು ಪ್ರಭಾವಿ ರಾಜಕೀಯ ನಾಯಕರಾಗಿರುವುದ ರಿಂದ ಕಚೇರಿ ವರ್ಗಾವಣೆಗೆ ವಿಳಂಬ ವಾಗುತ್ತಿರುವ ಆರೋಪ ಕೇಳಿ ಬರುತ್ತಿದೆ. ಆದುದರಿಂದ ತಾಲೂಕು ಪಡಿತರ ಕಚೇರಿಯನ್ನು ಬಾಡಿಗೆ ಕಟ್ಟಡದಿಂದ ತೆರವುಗೊಳಿಸಿ ಗ್ರಾ.ಪಂ.ಅಧೀನದ ಈ ಕಟ್ಟಡಕ್ಕೆ ಬದಲಾಯಿಸಬೇಕಾಗಿದೆ.
-ಅಹಮ್ಮದ್‌ ಪಿಎಂ. ನಯಾಬಜಾರ್‌, ಓರ್ವ ನಾಗರಿಕ

Advertisement

Udayavani is now on Telegram. Click here to join our channel and stay updated with the latest news.

Next