ಕುಷ್ಟಗಿ: ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್ ಸಿ) ಮೂಲಕ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧಕರ ಮತ್ತು ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಯ ಕಲ್ಯಾಣ ಕರ್ನಾಟಕ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಒಟ್ಟು 6 ಅಭ್ಯರ್ಥಿಗಳ ಕಲಬುರಗಿ ಜಿಲ್ಲೆಯ ಮೂಲದ ಐವರು ಆಯ್ಕೆಯಾಗಿರುವುದು ಅನುಮಾನಕ್ಕೆ ಎಡೆಮಾಡಿದೆ.
ಒಟ್ಟು 54 ರ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕದ ಭಾಗದ 6 ಜನ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ. ಸದರಿ ಆಯ್ಕೆ ಪಟ್ಟಿಗೆ ಮೇ 5 ರ ಕೆಪಿಎಸ್ಸಿ ಕಾರ್ಯದರ್ಶಿ ಬಿ. ಸತ್ಯವತಿ ( ಪತ್ರಸಂಖ್ಯೆ (ಪಿಎಸ್ ಸಿ 65 ಇ(1)2022-23 ಪ್ರಕಟಣೆಯಲ್ಲಿ ಆಕ್ಷೇಪಣೆಗೆ 7 ದಿನದ ಕಾಲವಕಾಶ ನೀಡಲಾಗಿದೆ.
ಈ ಅಭ್ಯರ್ಥಿಗಳ ಪೈಕಿ, ನಾಲ್ವರು ಕಲಬುರಗಿ ಜಿಲ್ಲೆಯವ ಮೂಲದವರು, ಒಬ್ಬರು ಬಳ್ಳಾರಿ ಜಿಲ್ಲೆ ಯವರು, ಮತ್ತೊಬ್ಬರು ಬೆಂಗಳೂರಲ್ಲಿ ವಾಸವಿರುವ ಕಲ್ಯಾಣ ಕರ್ನಾಟಕ ಭಾಗದವರು ಆಯ್ಕೆಯಾಗಿದ್ದಾರೆ. ಕಳೆದ ಏ.28ರಂದು ನಡೆದ ಅಭ್ಯರ್ಥಿಗಳ ವ್ಯಕ್ತಿತ್ವ ಸಂದರ್ಶನ ಬಳಿಕ 14 ದಿನಗಳಲ್ಲಿ ಈ ತಾತ್ಕಾಲಿಕ ಅಭ್ಯರ್ಥಿಗಳ ಆಯ್ಕೆ ಬಿಡುಗಡೆಯಾಗಿದೆ. ಸದರಿ ಆಯ್ಕೆ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಕೆಪಿಎಸ್ ಸಿ ಕಾರ್ಯದರ್ಶಿ ಜಿ. ಸತ್ಯವತಿ ಅವರ ವರ್ಗಾವಣೆಯಾಗಿದೆ.
ಕುಷ್ಟಗಿ ಮೂಲದ ಅಭ್ಯರ್ಥಿ ಗಳ ಕಾಟಾಚಾರದ ಸಂದರ್ಶನ ನಡೆಸಿರುವ ಬೆಳವಣಿಗೆ ಗಮನಿಸಿ, ಪಿಎಸೈ ಅಕ್ರಮ ನೇಮಕಾತಿಯಂತೆ ಇಲ್ಲಿಯೂ ಹುದ್ದೆ ನೇಮಕಾತಿಯಲ್ಲಿ ಹಣದ ವ್ಯವಹಾರ ನಡೆದಿದ್ದು ಸಿಐಡಿ ವಶದಲ್ಲಿರುವ ಆರೋಪಿಗಳ ಕೈಚಳಕವಿದೆ. ಈ ಆರೋಪಿಗಳ ವ್ಯೂಹದ ಮೂಲಕವೇ ಓಎಂಆರ್ ಸೀಟ್ ನಲ್ಲಿ ಗುರುತು ಆಯ್ಕೆ ಅಂಕ ಹೆಚ್ಚಿಸಿಕೊಂಡಿರುವ ಅನುಮಾನವಿದೆ. ಈ ನಿಟ್ಟಿನಲ್ಲಿ ತನಿಖೆ ನಡೆಸಿ ಅರ್ಹರರಿಗೆ ನ್ಯಾಯ ಕಲ್ಪಿಸಬೇಕೆಂದು ಅಭ್ಯರ್ಥಿಯ ಸಹೋದರ ಶಶಿಕುಮಾರ ಕಾಮನೂರು ಒತ್ತಾಯಿಸಿದ್ದಾರೆ.