ದೊಡ್ಡಬಳ್ಳಾಪುರ:ಈಗ ಮುಂಗಾರು ಕೃಷಿ ಚಟುವಟಿಕೆಗಳು ಆರಂಭವಾಗಿದ್ದು, ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿರುವ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಬ್ಯಾಂಕಿನ ತಾಲೂಕು ಘಟಕದ ಮೇಲುಸ್ತುವಾರಿ ಅಧಿಕಾರಿ ರಾಘವೇಂದ್ರ ಹೇಳಿದರು.
ತಾಲೂಕಿನ ಕಂಟನಕುಂಟೆ ವ್ಯವಸಾಯ ಸೇವಾ ಸಹಕಾರ ಸಂಘದಿಂದ 180 ರೈತರಿಗೆ 1 ಕೋಟಿಸಾಲವಿತರಣೆಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿಕರ ನೆರವಿಗಾಗಿ ಸಹಕಾರ ಸಂಘಗಳ ಮೂಲಕ ನೀಡುವ ಸಾಲವನ್ನು ಸೂಕ್ತ ರೀತಿಯಲ್ಲಿ ಬಳಕೆ ಮಾಡಿಕೊಂಡಾಗ ಮಾತ್ರ ರೈತರು ಖಾಸಗಿ ವ್ಯಕ್ತಿಗಳಲ್ಲಿ ಸಾಲ ಪಡೆಯುವುದು ತಪ್ಪಲಿದೆ ಎಂದರು.
ನಿಗದಿತ ಸಮಯಕ್ಕೆ ಸಾಲ ಪಾವತಿಸಿ: ನಿಗದಿತ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿದಾಗ ಮಾತ್ರ ಸಂಘವು ಆರ್ಥಿಕ ಸದೃಢ ಹಾಗೂ ಗ್ರಾಮದ ಇತರೆ ರೈತರಿಗೂ ಸಾಲ ಸೌಲಭ್ಯಗಳು ನೀಡಲು ಸಹಕಾರಿಯಾಗಲಿದೆ. ಗ್ರಾಮ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಸೇವಾ ಸಹಕಾರ ಸಂಘಗ ಳು ಇತರೆ ಬ್ಯಾಂಕಿಗ್ ವ್ಯವಸ್ಥೆಗಿಂತಲು ರೈತರಿಗೆ ಹತ್ತಿರ ಇರುವ ಸಂಸ್ಥೆಯಾಗಿದೆ. ಆಡಳಿತ ಮಂಡಳಿಗೆ ರೈತರೇ ಆಯ್ಕೆಯಾಗುವುದು ವಿಶೇಷ ವಾಗಿದೆ ಎಂದು ಹೇಳಿದರು.
ಕಂಟನಕುಂಟೆ ವಿಎಸ್‌ಎಸ್‌ಎನ್‌ಗೆ 1 ಕೋಟಿ ರೂ. ಸಾಲ ಮಂಜೂರು ಮಾಡಿಸಿದ ಬಿಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಜಿ. ಚುಂಚೇಗೌಡ ಅವರನ್ನು ಅಭಿನಂದಿಸಲಾಯಿತು.ಸಮಾರಂಭದಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಆರ್.ಜಯಚಂದ್ರ ವಹಿಸಿದ್ದರು. ಉಪಾಧ್ಯಕ್ಷ ಟಿ.ನಾಗರಾಜ, ಕಂಟನಕುಂಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭಾ ರಾಜಗೋಪಾಲ್,
ಜೆಡಿಎಸ್ ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿ ರವಿ, ಮುಖಂಡರಾದ ಕೆ.ಎಂ. ಕೃಷ್ಣಮೂರ್ತಿ, ವಿ.ಎಸ್.ರಮೇಶ್, ಆನಂದ್ ಕುಮಾರ್, ವಿ.ಎಸ್.ಸುರೇಶ್, ಶ್ರೀನಿವಾಸ್, ರಮೇಶ್ ಶೆಣೈ, ನಾಗರಾಜ್, ರಾಜಗೋಪಾಲ್ ಸಂಘದ ಸಿಇಒ ರಾಮಮೂರ್ತಿ, ಕಾರ್ಯದರ್ಶಿ ರಂಗನಾಥ್ ಹಾಜರಿದ್ದರು.