Advertisement

ಬಡ ವ್ಯಕ್ತಿಯ ಚಿಕಿತ್ಸೆಗೆ ನೆರವು: ಮನವಿ

11:42 PM Nov 07, 2019 | mahesh |

ಬೆಳ್ಳಾರೆ: ಬೆಳ್ಳಾರೆ ಗ್ರಾಮದ ಪುಡ್ಕಜೆಯ ಪೈಂಟರ್‌ ವೃತ್ತಿ ಮಾಡಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದ ಮಂಜು ನಾಥ ಎಂಬವರು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಯ ವೆಚ್ಚ ಭರಿಸಲು ಬಡ ಕುಟುಂಬವು ಪರದಾಡುತ್ತಿದ್ದು, ದಾನಿಗಳ ನೆರವಿಗೆ ಮನವಿ ಮಾಡಿದ್ದಾರೆ.

Advertisement

ಪೈಂಟರ್‌ ವೃತ್ತಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದ ಮಂಜುನಾಥ ಅವರಿಗೆ ಕಳೆದ ಮೂರು ತಿಂಗಳ ಹಿಂದೆ ಜಾಂಡಿಸ್‌ ಕಾಯಿಲೆ ಬಂದು ಮಂಗ ಳೂರಿನ ವೆನ್‌ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ವೈದ್ಯರು ಇವರಿಗೆ ಲಿವರ್‌ ಕ್ಯಾನ್ಸರ್‌ ಇರುವುದಾಗಿ ದೃಢಪಡಿಸಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಲು ಸೂಚಿಸಿದ್ದಾರೆ. ಆದರೆ ಚಿಕಿತ್ಸೆಗೆ ಸುಮಾರು 4.5 ಲಕ್ಷ ರೂ. ವೆಚ್ಚವಾಗಲಿದ್ದು, ಈಗಾಗಲೇ ಸಾವಿರಾರು ರೂಪಾಯಿ ಖರ್ಚು ಮಾಡಿರುವ ಬಡ ಕುಟುಂಬ ಹೆಚ್ಚಿನ ಹಣ ಹೊಂದಿಸಲಾಗದೆ ಅಸಹಾಯಕ ಆಗಿದೆ. ಮಂಜುನಾಥರ ಪತ್ನಿ ಕೂಲಿ ಕೆಲಸ ಮಾಡಿ ಜೀವನ ಸಾಗುಸುತ್ತಿದ್ದು, ಮಗ‌ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಮಂಜುನಾಥ ಅವರ ಅಜ್ಜಿಯೂ ಇದೇ ಮನೆಯಲ್ಲಿ ವಾಸವಾಗಿ ದ್ದಾರೆ. ಪುಡ್ಕಜೆ ಕಾಲನಿಯಲ್ಲಿ ವಾಸಿಸಲು ಸಣ್ಣ ಮನೆಯೊಂದನ್ನು ಹೊರತುಪಡಿಸಿ ಕುಟುಂಬಕ್ಕೆ ಇತರ ಆದಾಯದ ಮೂಲವಿಲ್ಲ. ಕೆ.ಎಂ.ಸಿ.ಯಲ್ಲಿ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದಾರಾದರೂ ಹಣ ಹೊಂದಿಸಲಾಗದೆ ಮಂಜುನಾಥ್‌ ದಾನಿಗಳು ನೆರವಿನ ನಿರಿಕ್ಷೆಯಲ್ಲಿ ಇದ್ದಾರೆ.

ನೆರವು ನೀಡಲಿಚ್ಛಿಸುವ ದಾನಿಗಳು ಮಂಜುನಾಥ ಅವರ ಪತ್ನಿ ಜಯಶ್ರೀ ಅವರ ಬ್ಯಾಂಕ್‌ ಆಫ್ ಬರೋಡಾ (ವಿಜಯಾ ಬ್ಯಾಂಕ್‌) ಬೆಳ್ಳಾರೆ ಶಾಖೆಯ ಖಾತೆ ಸಂಖ್ಯೆ 102601011000394, ಐಎಫ್ಎಸ್‌ಸಿ ಕೋಡ್‌ ವಿಐಜೆಬಿ0001026 ಸಂಖ್ಯೆಗೆ ಜಮೆ ಮಾಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next