Advertisement

ನಿರ್ಗತಿಕರಿಗೆ ಪ್ರಜಾ ಟ್ರಸ್ಟ್‌ನಿಂದ ನೆರವು

05:33 PM May 30, 2021 | Team Udayavani |

ಕೆಂಗೇರಿ: ರಸ್ತೆ ಬದಿಯಲ್ಲಿ ವಾಸಿಸುವವಸತಿ ರಹಿತರು, ಭಿಕ್ಷುಕರು, ಒಂಟಿಯಾಗಿಗುಡಿಸಲುಗಳಲ್ಲಿ ವಾಸಿಸುವ ಹಿರಿಯನಾಗರಿಕರಿಗೆ “”ಪ್ರಜಾ ಟ್ರಸ್ಟ್‌””ನ ಸಂಸ್ಥಾಪಕಅಧ್ಯಕ್ಷ ಮೋಹನ್‌ ಅವರಿಂದ ಕೊರೊನಾಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಹಾರವಿತರಿಸಲಾಯಿತು.

Advertisement

ಮೋಹನ್‌ ಅವರು, ನಿತ್ಯ ನಾಗರಬಾವಿ 8 ನೇ ಬ್ಲಾಕ್‌, ಸುಮನಹಳ್ಳಿ, ರಾಜ್‌ಕುಮಾರ್‌ ಸಮಾಧಿ, ಟಿ.ವಿ.ಎಸ್‌. ಕ್ರಾಸ್‌,ಟಿ.ದಾಸರಹಳ್ಳಿ, 8ನೇ ಮೈಲಿ, ಜಾಲಹಳ್ಳಿಕ್ರಾಸ್‌, ಗೊರಗುಂಟೆಪಾಳ್ಯ, ಆರ್‌.ಎಮ್‌.ಸಿ. ಬಡಾವಣೆ, ಯಶವಂತಪುರ,ನವರಂಗ್‌ ವೃತ್ತ, ರಾಮಮಂದಿರ, ಭಾಷ್ಯಂವೃತ್ತ, ಮಾಗಡಿ ರಸ್ತೆ ಟೋಲ್‌ಗೇಟ್‌,ವಿಜಯನಗರ, ಮೈಸೂರು ರಸ್ತೆ ಗಾಳಿಆಂಜನೇಯ ಸ್ವಾಮಿ ದೇವಸ್ಥಾನ, ಕೆ.ಆರ್‌.ಮಾರ್ಕೆಟ್‌, ಕಲಾಸಿಪಾಳ್ಯ, ಬಸವನಗುಡಿ,ಗಿರಿನಗರ ಹೊಸಕೆರೆಹಳ್ಳಿ ಸೇರಿದಂತೆಸುತ್ತಮುತ್ತಲಿನ ಪ್ರದೇಶದಲ್ಲಿ ವಸತಿ ರಹಿತಒಂಟಿಯಾಗಿ ವಾಸಿಸುವ ನಾಗರಿಕರಿಗೆಆಹಾರದ ಪೊಟ್ಟಣ ವಿತರಿಸುತ್ತಿದ್ದಾರೆಎಂದರು.

ಟ್ರಸ್ಟ್‌ನ ಅಧ್ಯಕ್ಷ ಮೋಹನ್‌ ಮಾತನಾಡಿ,2021ರ ಕೊರೊನಾ ಸೋಂಕಿನ ಸಂಕಷ್ಟದಈ ಸಂದರ್ಭದಲ್ಲಿ ಸುಮಾರು ಒಂದುತಿಂಗಳಿನಿಂದ ನಿತ್ಯ 150 ಜನರಿಗೆ ಮನೆಯಲ್ಲಿಯೇ ಆಹಾರವನ್ನು ತಯಾರಿಸಿ ಸ್ವಂತವಾಹನದಲ್ಲಿ ಬೆಂಗಳೂರಿನ ವಿವಿಧಕಡೆಗಳಲ್ಲಿ ಕಂಡು ಬರುವ ನಿರ್ಗತಿಕರಿಗೆಒಂಟಿಯಾಗಿ ಬಸ್‌ ನಿಲ್ದಾಣಗಳಲ್ಲಿ ಇರುವಜನರಿಗೆ ಆಹಾರದ ಪೊಟ್ಟಣವನ್ನುವಿತರಿಸಲಾಗುತ್ತಿದೆ. ಪ್ರತಿ ಭಾನುವಾರಮತ್ತು ಬುಧವಾರ ಊಟದ ಜೊತೆ ಮೊಟ್ಟೆಹಾಗೂ ಗುರುವಾರ ಸಿಹಿ ತಿಂಡಿವಿತರಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next