Advertisement
ಕಳೆದ ಬಾರಿ ಪುರಸಭೆಯಾಗಿದ್ದ ನಂಜನಗೂಡು ಎರಡು ವರ್ಷಗಳ ಹಿಂದೆ ನಗರಸಭೆಯಾಗಿ ಭಡ್ತಿ ಹೊಂದಿದ್ದು, ಇದೇ ನಗರಸಭೆಯ ಪ್ರಥಮ ಚುನಾವಣೆಯಾಗಿದೆ. ಅಂದು 28 ಸ್ಥಾನಗಳಿದ್ದು, ಈಗ ಮೂರು ಸ್ಥಾನಗಳ ಹೆಚ್ಚಳದೊಂದಿಗೆ 31 ಜನ ಪ್ರತಿನಿಧಿಗಳಾಗಲು ಅವಕಾಶ ಲಭ್ಯವಾಗಿದೆ.
Related Articles
Advertisement
ಅಂದು ಕಾಂಗ್ರೆಸ್ ಹಾಗೂ ಬಿಜೆಪಿ ಗೆ ವಿರುದ್ಧವಾಗಿ ಜೆಡಿಎಸ್ ಪಕ್ಷವನ್ನು ಮುನ್ನಡೆಸಿದ್ದ ಕಳಲೆಕೇಶವಮೂರ್ತಿ ಬದಲಾದ ರಾಜಕೀಯದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರಿ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ನಂತರ ಸೋತು ಮಾಜಿ ಶಾಸಕರಾಗಿ ಈಗ ಸಂಸದ ಆರ್ ಧ್ರುವನಾರಾಯಣರೊಂದಿಗೆ ಕೈ ಪಕ್ಷವನ್ನು ಸಂಘಟಿಸುವ ಸಿದ್ಧತೆಯಲ್ಲಿದ್ದಾರೆ.
ಅಂದು ಕೈ ಪಕ್ಷದ ಸವೊìಚ್ಚ ನಾಯಕರಂತಿದ್ದ ಶ್ರೀನಿವಾಸ್ ಪ್ರಸಾದ ಇಂದು ಬಿಜೆಪಿಯನ್ನು ಗೆಲ್ಲಿಸಿಕೊಳ್ಳುವ ತವಕದಲ್ಲಿದ್ದು ಜೆಡಿಎಸ್ ಮಾತ್ರ ಜಿಲ್ಲಾದ್ಯಕ್ಷ ಎನ್ ನರಸಿಂಹಸ್ವಾಮಿಯವರ ಮನೆ ಬಾಗಿಲಿನಲ್ಲಿ ನಿಂತು ಹೋರಾಡುವ ಸ್ಥಿತಿಗೆ ತಲುಪಿದೆ.
ಕರಿ ನೆರಳಿನಲ್ಲಿ ಚುನಾವಣೆ: ನಂಜನಗೂಡು ನಗರಸಭೆಯ ಪ್ರಥಮ ಚುನಾವಣೆಯು ಲೋಕಸಭಾ ಚುನಾವಣೆಯ ಕರಿ ನೆರಳಿನಲ್ಲಿ ನಡೆಯುವಂತಾಗಿದೆ. ಈ ಭಾಗದ ಟಿಕೆಟ್ ಹಂಚಿಕೆಯ ಹೊಣೆಗಾರಿಕೆ ಇರುವ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ಹಾಲಿ ಸಂಸದ ಆರ್. ಧ್ರುವನಾರಾಯಣರಿಬ್ಬರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ನಡೆಸಿದ್ದು ಯಾರಿಗೆ ನಂಜುಂಡೇಶ್ವರನ ಪ್ರಸಾದ ಎಂಬ ಮತದಾರರ ಗುಟ್ಟು ರಟ್ಟಾಗುವ ಮುಂಚೆಯೇ ನಗರಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು
ಫಲಿತಾಂಶದ ಕರಿ ನೆರಳು ಈ ಚುನಾವಣೆಯ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ ಎನ್ನಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ಸಾಕಷ್ಟು ಬಿರುಸಿನ ಸ್ಪರ್ಧೆ ನಡೆದರೆ ಜೆಡಿಎಸ್ ಮಾತ್ರ ಹಲವಡೆ ಏರಡೂ ಪಕ್ಷಗಳ ಅತೃಪ್ತರಿಗಾಗಿ ಕಾಯುವಂತಾಗಿದೆ.
ಶ್ರೀನಿವಾಸ ಪ್ರಸಾದ್ ಮತ್ತೂ ಧ್ರುವನಾರಾಯಣರ ಕ್ರಪೆ ಇದ್ದವರಿಗೆ ಆಯಾ ಪಕ್ಷದ ಬಿ ಫಾರಂ ಖಂಡಿತವಾಗಲಿದ್ದು ಅದಕ್ಕಾಗಿ ಆಕಾಂಕ್ಷಿಗಳು ಇಂದಿನಿಂದಲೇ ಅವರಿಬ್ಬರ ನಿವಾಸದತ್ತ ತೆರಳಿದ್ದಾರೆ.