Advertisement

ಆಯುಷ್ಮಾನ್‌ನಿಂದ ಕೋಟ್ಯಂತರ ಜನರಿಗೆ ನೆರವು

07:41 AM Mar 11, 2019 | Team Udayavani |

ನಂಜನಗೂಡು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಐದು ವರ್ಷಗಳ ಅವಧಿಯಲ್ಲಿ ಉಜ್ವಲ, ಆಯುಷ್ಮಾನ್‌ ಭಾರತ ಆರೋಗ್ಯ, ಜನಧನ, ಜನೌಷಧ ಮತ್ತಿತರ ಜನಪರ ಯೋಜನೆಗಳನ್ನು ಜಾರಿಗೊಳಿಸಿ ಶ್ರೇಷ್ಠ ಆಡಳಿತ ನೀಡಿದೆ ಎಂದು ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಸುರೇಶ್‌ ಕುಮಾರ್‌ ತಿಳಿಸಿದರು.

Advertisement

ನಗರದ ರಥ ಬೀದಿಯ ನಂಜುಂಡೇ ಶ್ವರ ಭವನದಲ್ಲಿ ಭಾನುವಾರ ಆಯೋಜಿ ಸಿದ್ದ ಪ್ರಬುದ್ಧರೊಂದಿಗೆ ಗೋಷ್ಠಿ ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಲಾಲ್ ಬಹದ್ದೂರ್‌ ಶಾಸ್ತ್ರಿ ನಂತರ ಭಾರತೀಯರ ಪೂರ್ಣ ವಿಶ್ವಾಸ ಹಾಗೂ ನಂಬಿಕೆಗಳನ್ನು ಪಡೆದವರು ನರೇಂದ್ರ ಮೋದಿ. ವಿಭಿನ್ನ ಕಾರ್ಯಕ್ರಮಗಳ ಮೂಲಕ ಪಾರದರ್ಶಕ ಆಡಳಿತ ನೀಡಿದ್ದಾರೆ ಎಂದು ಬಣ್ಣಿಸಿದರು.

ಉಜ್ವಲ ಯೋಜನೆ ಮೂಲಕ ದೇಶದ 5 ಕೋಟಿಗೂ ಅಧಿಕ ಮಂದಿಗೆ ರಿಯಾಯಿತಿ ದರದಲ್ಲಿ ಅಡುಗೆ ಅನಿಲ ನೀಡಿ, ಹೊಗೆ ಮುಕ್ತ ದೇಶಕ್ಕೆ ಬಿಜೆಪಿ ಸರ್ಕಾರ ಶ್ರಮಿಸಿದೆ. ಆಯುಷ್ಮಾನ್‌ ಯೋಜನೆಯಡಿ ಪ್ರತಿಯೊಬ್ಬರೂ ಉಚಿತವಾಗಿ ಐದು ಲಕ್ಷ ರೂ.ವೆಚ್ಚದಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೇ ರಿಯಾಯಿತಿ ದರದಲ್ಲಿ ನೀಡುತ್ತಿರುವ ಜನೌಷಧದಿಂದ ಲಕ್ಷಾಂತರ ಬಡವರಿಗೆ ಅನುಕೂಲವಾಗಿದೆ ಎಂದರು.

ಸಂವಿಧಾನ: ಸಂವಿಧಾನ ತಿದ್ದುಪಡಿ ಕುರಿತು ಪ್ರತಿಕ್ರಿಯಿಸಿದ ಸುರೇಶ್‌ ಕುಮಾರ್‌, ಸಂವಿಧಾನ ಬದಲಾವಣೆ ಸಾಧ್ಯವೇ ಇಲ್ಲ. ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರವು ಅಂಬೇಡ್ಕರ್‌ ಬಗ್ಗೆ ಅತಿ ಹೆಚ್ಚು ಗೌರವವಿಟ್ಟುಕೊಂಡಿದೆ. ಸಂವಿಧಾನವೇ ತಮಗೆ ಅತಿ ಶ್ರೇಷ್ಠವಾದ ಗ್ರಂಥ ಎಂದರು.

ಷಡ್ಯಂತ್ರ: ಅಂಬೇಡ್ಕರ್‌ ಹಾಗೂ ಸಂವಿಧಾನದ ಮೇಲಿನ ಕಾಂಗ್ರೆಸ್‌ ಪ್ರೀತಿ ನಾಟಕೀಯವಾದದ್ದು, ಅತಿ ಹೆಚ್ಚು ಬಾರಿ ಸಂವಿಧಾನ ತಿದ್ದುಪಡಿ ಮಾಡಿದ್ದು ಹಾಗೂ ಅದನ್ನು ಉಲ್ಲಂಘಿಸಿದ್ದು ಕಾಂಗ್ರೆಸ್‌ ಪಕ್ಷವಾಗಿದೆ. ಅಲ್ಲದೇ ಅಂಬೇಡ್ಕರ್‌ ಅವರನ್ನು ಮೂಲೆಗುಂಪು ಮಾಡಲು ಷಡ್ಯಂತ್ರ ರೂಪಿಸಿದ್ದು ಕೂಡ ಕಾಂಗ್ರೆಸ್‌ನವರು ಎಂದು ದೂರಿದರು.

Advertisement

ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ತಡೆಗೆ ನೋಟ್ ಬ್ಯಾನ್‌ ಅನಿವಾರ್ಯ ವಾಗಿತ್ತು. ಇದರಿಂದ ಕಾಶ್ಮೀರದಲ್ಲಿ ಯುವಕರ ಕಲ್ಲು ತೂರಾಟ ಕಡಿಮೆ ಯಾಗಿದೆ. ಅಲ್ಲದೇ ಜಿಎಸ್‌ಟಿ ಜಾರಿಗೊಳಿಸಿ ಪಾರದರ್ಶಕ ಹಾಗೂ ಪ್ರಾಮಾಣಿಕ ಆಡಳಿತ ನೀಡಲಾಗಿದೆ. ಸೋರಿಕೆಯನ್ನು ತಡೆಯಲಾಗಿದೆ ಎಂದು ತಿಳಿಸಿದರು.

ಮತ್ತೂಮ್ಮೆ ಮೋದಿ: ಶಾಸಕ ಹರ್ಷವರ್ಧನ ಮಾತನಾಡಿ, ಲೋಕ ಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವುದರ ಮೂಲಕ ನರೇಂದ್ರ ಮೋದಿ ಮತ್ತೂಮ್ಮೆ ಪ್ರಧಾನಿಯಾಗ ಲಿದ್ದಾರೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಯಾರೇ ಬಿಜೆಪಿ ಅಭ್ಯರ್ಥಿ ಯಾದರೂ ಅವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮಿಸಬೇಕು ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ರಾಮ್‌ ಮೋಹನ್‌, ವಕೀಲ ಮಹೇಶ ಬಾಬು, ಸತೀಶ್‌, ಅನಿಲ್ ಕುಮಾರ್‌, ನಂದಿನಿ, ಚಿಕ್ಕರಂಗ ನಾಯಕ, ಶಂಕರ್‌, ಮಹೇಶ, ಬಿಜೆಪಿ ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next