Advertisement

ಶಾಸಕರಿಂದ ನಿಯೋಜಿತ ಬಿಷಪ್‌ ಭೇಟಿ

12:30 PM Aug 31, 2018 | |

ಮಹಾನಗರ: ಶಾಸಕ ವೇದವ್ಯಾಸ ಕಾಮತ್‌ ಅವರು ತಮ್ಮ ಕ್ಷೇತ್ರದಲ್ಲಿರುವ ಬಿಷಪ್‌ ಹೌಸ್‌ಗೆ ಭೇಟಿ ನೀಡಿ ನಿಯೋಜಿತ ಬಿಷಪ್‌ ವಂ| ಪೀಟರ್‌ ಪೌಲ್‌ ಸಲ್ಡಾನ ಅವರನ್ನು ತಮ್ಮ ಕ್ಷೇತ್ರದ ಜನರ ಪರವಾಗಿ ಸ್ವಾಗತಿಸಿ, ಅಭಿನಂದಿಸಿದರು. ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸನ್ನು ಕಾಣಬೇಕಾದರೆ ಧರ್ಮಗುರುಗಳ ಆಶೀರ್ವಾದ ಮತ್ತು ಸಹಕಾರ ಅತಿ ಅಗತ್ಯ. ತಾನು ಎಲ್ಲ ವಿಚಾರಗಳಲ್ಲೂ ನಿಯೋಜಿತ ಬಿಷಪ್‌ ಅವರಿಗೆ ಸಹಕಾರ ನೀಡುವುದಾಗಿ ಭರವಸೆ ಇತ್ತರು, ಮಾತ್ರವಲ್ಲದೇ ಕ್ಷೇತ್ರದಲ್ಲಿ ಆಗುವ ಕೆಲಸ ಕಾರ್ಯಗಳಿಗೆ ನೂತನ ಬಿಷಪರ ಆಶೀರ್ವಾದ ಮತ್ತು ಸಹಕಾರವನ್ನು ಕೋರಿದರು. ನಿವೃತ್ತಿ ಆಗಲಿರುವ ಅತೀ ವಂದನೀಯ ಬಿಷಪ್‌ ಅಲೋಶಿಯಸ್‌ ಪೌಲ್‌ ಡಿ’ಸೋಜಾ ಅವರಿಗೆ ಪುಷ್ಪಗುತ್ಛ ನೀಡಿ, ಅವರ ಪ್ರೀತಿ ಮತ್ತು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. 

Advertisement

ಬಿಜೆಪಿ ಅಲ್ಪಸಂಖ್ಯಾಕ ವಿಭಾಗದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಜೋಯ್ಲಸ್‌ ಡಿ’ಸೋಜಾ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಂ| ವಿಕ್ಟರ್‌ ವಿಜಯ್‌ ಲೋಬೋ, ಎಪಿಸ್ಕೋಪಲ್‌ ಆರ್ಡಿನೇಶನ್‌ ಕಾರ್ಯಕ್ರಮದ ಮುಖ್ಯ ಸಂಯೋಜಕ ವಂ| ಜೆ.ಬಿ. ಕ್ರಾಸ್ತ, ಕೆನರಾ ಕಮ್ಯೂನಿಕೇಶನ್‌ನ ನಿರ್ದೇಶಕ ಫಾದರ್‌ ರಿಚರ್ಡ್‌ ಡಿ’ಸೋಜಾ, ಮಂಗಳೂರು ವಿಶ್ವವಿದ್ಯಾನಿಲಯದ ಅಕಾಡಮಿಕ್‌ ಕೌನ್ಸೆಲ್‌ ಸದಸ್ಯ, ವಕೀಲ ಎಂ.ಪಿ. ನೊರೊನ್ಹಾ, ಬಿಜೆಪಿ ಅಲ್ಪಸಂಖ್ಯಾಕ ವಿಭಾಗದ ಮಂಗಳೂರು ನಗರದ ಅಧ್ಯಕ್ಷ ಗ್ಲ್ಯಾಡ್ವಿನ್‌ ಡಿಸಿಲ್ಲ, ಮಾಜಿ ಕಾರ್ಪೊರೇಟರ್‌ ರಂಗನಾಥ್‌ ಕಿಣಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ವಸಂತ್‌ ಪೂಜಾರಿ, ಬಿಜೆಪಿ ಕದ್ರಿ ವಾರ್ಡ್‌ನ ಅಧ್ಯಕ್ಷ ಫೆಡ್ರಿಕ್‌, ಮಂಗಳೂರು ನಗರ ದಕ್ಷಿಣದ ಬಿಜೆಪಿ ಅಲ್ಪಸಂಖ್ಯಾಕ ವಿಭಾಗದ ಉಪ ನಿರ್ದೇಶಕ ಎಡ್ವಿನ್‌ ಗೊನ್ಸಾಲ್ವೆಸ್‌, ಮಂಗಳೂರು ನಗರ ದಕ್ಷಿಣದ ಬಿಜೆಪಿ ಅಲ್ಪಸಂಖ್ಯಾಕ ವಿಭಾಗ ಮುಖ್ಯ ಕಾರ್ಯದರ್ಶಿ ಬೆನೆಡಿಕ್ಟ್ ವಿಜಯ್‌, ಬಿಜೆಪಿ ಜಿಲ್ಲಾ ಕೋಶಾಧಿಕಾರಿ ಸಂಜಯ್‌ ಪ್ರಭು, ಫೆಲಿಕ್ಸ್‌ ಅಲುºಕರ್ಕ್‌ ಮತ್ತಿತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next