Advertisement

ಅಪಘಾತ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಿ: ಸುಪ್ರೀಂ ಕೋರ್ಟ್

04:21 PM Sep 21, 2020 | Nagendra Trasi |

ದೆಹಲಿ: ಅಪಘಾತದಲ್ಲಿ ಗಂಭೀರ ಗಾಯಗೊಂಡು, ಅಂಗಾಂಗ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್‌, ಮೋಟಾರ್‌ ಅಪಘಾತ ನ್ಯಾಯಮಂಡಳಿ ಮತ್ತು ಹೈಕೋರ್ಟ್‌ಗಳಿಗೆ ಸೂಚಿಸಿದೆ.

Advertisement

ನ್ಯಾ. ಎಲ್‌. ನಾಗೇಶ್ವರ ರಾವ್‌ ನೇತೃತ್ವದ ಪೀಠ, “ವಾಹನ ಗಳಿಂದ ಅಪಘಾತ ಕ್ಕೀಡಾಗಿ ಗಂಭೀರ ಗಾಯಗೊಂಡವರು ಕೇವಲ ದೈಹಿಕವಾಗಿಯಷ್ಟೇ ವಿಕಲಾಂಗರಾಗುವುದಿಲ್ಲ. ಮಾನಸಿಕವಾಗಿಯೂ ಆಘಾತ ಅನುಭವಿಸುತ್ತಾರೆ. ಅಪಘಾತ ಅವರ ಬದುಕಿಗೆ ಕಪ್ಪು ಚುಕ್ಕೆಯಾಗಿಯೇ ಉಳಿಯುತ್ತದೆ.

ಅಪಘಾತಗಳು ಸಂತ್ರಸ್ತ ರನ್ನು ಶಾಶ್ವತ ವಿಕಲಾಂಗ ಜಗತ್ತಿಗೆ ತಳ್ಳುತ್ತವೆ. ನ್ಯಾಯಾಲಯಗಳು ಅಪಘಾತ ಸಂತ್ರಸ್ತರಿಗೆ ಪರಿಹಾರ ನೀಡುವಾಗ, ಅವರ ಬದುಕು- ಭವಿಷ್ಯದ ಬಗ್ಗೆಯೂ ಗಮನ ಹರಿಸಬೇಕು’ ಎಂದು ನ್ಯಾ. ಎಸ್‌. ರವೀಂದ್ರ ಭಟ್‌ ಬರೆದ ತೀರ್ಪನ್ನು ಪ್ರಸ್ತಾಪಿಸಿದೆ.

ಅಪಘಾತದಲ್ಲಿ ಕೈ ಕಳೆದುಕೊಂಡ 20 ವರ್ಷದ ದೆಹಲಿಯ ಡೇಟಾ ಎಂಟ್ರಿ ಆಪರೇಟರ್‌ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ದೆಹಲಿ ಹೈಕೋರ್ಟ್‌ ಸಂತ್ರಸ್ತನ ಜೀವನೋಪಾಯಕ್ಕಾಗಿ ಕೇವಲ 7.7 ಲಕ್ಷ ರೂ. ಪರಿಹಾರ ತೀರ್ಪು ಘೋಷಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಹೀಗೆ ಖಡಕ್ಕಾಗಿ ಆದೇಶಿಸಿದೆ.

ಪಿಎಂಸಿ ಹಗರಣ: 100 ಕೋಟಿಯ 3 ಹೋಟೆಲ್‌ ಜಪ್ತಿ
ಪಿಎಂಸಿ ಬ್ಯಾಂಕ್‌ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿರುವ 100 ಕೋಟಿ ರೂ. ಮೌಲ್ಯದ ಮೂರು ಹೋಟೆಲ್‌ಗ‌ಳನ್ನು ಜಾರಿ ನಿರ್ದೇಶನಾಲಯ ಶುಕ್ರವಾರ ಜಪ್ತಿ ಮಾಡಿದೆ.

Advertisement

ಫ್ಯಾಬ್‌ ಹೋಟೆಲ್‌ ಸಮೂಹಕ್ಕೆ ಸೇರಿರುವ ಈ ಹೋಟೆಲ್‌ಗ‌ಳು ದೆಹಲಿಯ ಕೈಲಾಶ್‌ ಕಾಲೊನಿ, ಈಸ್ಟ್‌ ಆಫ್ ಕೈಲಾಶ್‌ ಮತ್ತು ಕಲ್ಕಾಜಿ ಪ್ರದೇಶದಲ್ಲಿವೆ. ಇವು ಲಿಬ್ರಾ ರಿಯಾಲ್ಟರ್ಸ್‌ ಪ್ರೈ.ಲಿ., ದೀವಾನ್‌ ರಿಯಾಲ್ಟರ್ಸ್‌, ರಾಕೇಶ್‌ ಕುಮಾರ್‌ ವಾಧ್ವಾನ್‌, ರೋಮಿ ಮೆಹ್ರಾ, ಲಿಬ್ರಾ ಹೋಟೆಲ್ಸ್‌ ಮತ್ತು ಅದರ ನಿರ್ದೇಶಕರ ಮಾಲೀಕತ್ವವನ್ನು ಹೊಂದಿವೆ. ಈ ಮೂರೂ ಹೋಟೆಲ್‌ಗ‌ಳ ಮಾರುಕಟ್ಟೆ ಮೌಲ್ಯ 100 ಕೋಟಿ ರೂ. ಎಂದು ಇ.ಡಿ. ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next