Advertisement

ಆತಂಕದ ನಡುವೆ ಇಂದಿನಿಂದ ಅಧಿವೇಶನ : 70 ಮಂದಿ ಶಾಸಕರಿಗೆ ಕೋವಿಡ್ ಸೋಂಕು?

01:05 AM Sep 21, 2020 | Hari Prasad |

ಬೆಂಗಳೂರು: ಕೋವಿಡ್ 19 ಆತಂಕದ ನಡುವೆ ಸೋಮವಾರ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗಲಿದ್ದು, ಸರಕಾರವು ಸಾಕಷ್ಟು ಮುಂಜಾಗ್ರತೆ ಕೈಗೊಂಡಿದೆ.

Advertisement

ಸೋಂಕು ಹೆಚ್ಚುತ್ತಿರುವುದರಿಂದ ಎಷ್ಟು ದಿನ ಸದನ ನಡೆಯಬೇಕು ಎನ್ನುವುದು ಸೋಮವಾರ ಸದನ ಸಮಿತಿ ಸಭೆಯಲ್ಲಿ ನಿರ್ಧಾರವಾಗಲಿದೆ.

ಡಿಸಿಎಂ ಡಾ| ಅಶ್ವತ್ಥನಾರಾಯಣ ಮತ್ತು ಸಚಿವರಾದ ಬಸವರಾಜ ಬೊಮ್ಮಾಯಿ, ಬೈರತಿ ಬಸವರಾಜ್‌, ಕೆ. ಗೋಪಾಲಯ್ಯ, ಸಚಿವ ಪ್ರಭು ಚವ್ಹಾಣ್‌ ಕೋವಿಡ್ 19 ಸೋಂಕಿನಿಂದ ಹೋಮ್‌ ಕ್ವಾರಂಟೈನ್‌ ಆಗಿದ್ದಾರೆ. ಸುಮಾರು 70 ಶಾಸಕರಿಗೆ ಕೋವಿಡ್ 19 ಸೋಂಕು ತಗಲಿದೆ ಎಂಬ ಮಾಹಿತಿಯಿದೆ.

ವಿಧಾನ ಸಭೆಯ ಹಾಲ್‌ನಲ್ಲಿ 300 ಆಸನಗಳಿದ್ದು, 269 ಆಸನಗಳಿಗೆ ಮೈಕ್‌ ವ್ಯವಸ್ಥೆ ಕಲ್ಪಿಸಲಾಗಿದೆ. ದಿನವೂ ಸ್ಯಾನಿಟೈಸೇಶನ್‌, ಶಾಸಕರು-ಸಚಿವರಿಗೆ ಉಷ್ಣಾಂಶ ಪರೀಕ್ಷೆ, ಆಸನಗಳ ಮಧ್ಯೆ ಶೀಲ್ಡ್‌ , ನಡುವೆ ಅಂತರ, 20 ಅಧಿಕಾರಿಗಳಿಗೆ ಮಾತ್ರ ಹಾಜರಾಗಲು ಅವಕಾಶ ಇತ್ಯಾದಿಯಾಗಿ ಸಾಕಷ್ಟು ಮುಂಜಾಗ್ರತೆ ಕ್ರಮಗಳನ್ನು ಸುಗಮ ಅಧಿವೇಶನಕ್ಕಾಗಿ ಕೈಗೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next