ವಿಧಾನಸಭೆ: ವಿಪಕ್ಷ ನಾಯಕ ಸಿದ್ದರಾಮಯ್ಯ ಪುತ್ರ ಡಾ.ಯತೀಂದ್ರ ಅವರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ತರಾಟೆ ತೆಗೆದುಕೊಂಡ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಗಂಗಾ ಕಲ್ಯಾಣ ಯೋಜನೆಗೆ ಸಂಬಂಧಪಟ್ಟಂತೆ ಪ್ರಶ್ನೋತ್ತರ ಕಲಾಪ ವೇಳೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ದೊಡ್ಡ ಧ್ವನಿಯಲ್ಲಿ ಮಾತನಾಡಿದರು. ಸಚಿವರ ಉತ್ತರವನ್ನೂ ಕೇಳಲಿಲ್ಲ. ಇದರಿಂದ ಬೇಸರಗೊಂಡ ಸ್ಪೀಕರ್, ನಾನು ಇಂದು ಇಲ್ಲಿಗೆ ಬಂದು ಕುಳಿತಿಲ್ಲ. ಸದನಕ್ಕೆ ಬಂದು ನಾಲ್ಕುವರೆ ವರ್ಷವಾಯ್ತು. ಆದರೂ ಹೇಗೆ ಉತ್ತರ ಕೇಳಬೇಕೆಂಬುದು ಗೊತ್ತಿಲ್ಲವೇ ? ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: ಜೆಡಿಎಸ್‌ಗೆ ಮೋದಿ ,ಅಮಿತ್ ಶಾ ವಿಚಾರ ಬಂದಾಗ ಮಾತ್ರ ಹಿಂದಿ ವಿರೋಧ ನೆನೆಪಾಗುತ್ತದೆ: ಸಿಟಿ ರವಿ
ಸರ್ಜಾರದ ಉತ್ತರದಿಂದ ಸಮಾಧಾನಗೊಳ್ಳದ ಕಾಂಗ್ರೆಸ್ ನ ಪ್ರಿಯಾಂಕ್ ಖರ್ಗೆ, ಭೀಮಾನಾಯಕ್, ಯತೀಂದ್ರ, ಅಜಯ್ ಸಿಂಗ್ ಬಾವಿಗಳಿದು ಪ್ರತಿಭಟನೆಸಿದರು.
ಆಗಲೂ ಸಿಟ್ಟಿಗೆದ್ದ ಸ್ಪೀಕರ್ ನೀವು ಹೀಗೆ ಒಟ್ಟಿಗೆ ನಿಂತುಕೊಂಡರೆ ಹೇಗೆ ?ಎಲ್ಲರಿಗೂ ಉಪಪ್ರಶ್ನೆ ಕೇಳಲು ಅವಕಾಶ ನೀಡಲು ಆಗುತ್ತಾ ? ಎಂದು ಪ್ರಶ್ನಿಸಿದರು.