Advertisement

Assembly Session: ಶೀಘ್ರ ಕೆಎಸ್ಸಾರ್ಟಿಸಿಗೆ 408 ಬಸ್‌ಗಳ ಸೇರ್ಪಡೆ: ಸಚಿವ ರೆಡ್ಡಿ

12:47 AM Jul 16, 2024 | Team Udayavani |

ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ ಪಲ್ಲಕ್ಕಿ, ಹವಾನಿಯಂತ್ರಿತ ಬಸ್‌ ಸೇರಿ ಒಟ್ಟು 408 ಬಸ್‌ಗಳನ್ನು ಖರೀದಿಸಲಾಗುತ್ತಿದ್ದು ಶೀಘ್ರದಲ್ಲೇ ಸಾರಿಗೆ ನಿಗಮಗಳಿಗೆ 408 ಬಸ್‌ಗಳ ಸೇರ್ಪಡೆಯಾಗಲಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Advertisement

ಹಂಪನಗೌಡ ಬಾದರ್ಲಿ ಹಾಗೂ ಮಹಾಂತೇಶ್‌ ಕೌಜಲಗಿ ಪ್ರಶ್ನೆಗೆ ಉತ್ತರಿಸಿದ ಅವರು, 2019ರಿಂದ 2023ರ ವರೆಗೆ ಒಂದೇ ಒಂದು ಬಸ್‌ ಖರೀದಿ ಆಗಿರಲಿಲ್ಲ. 2023-24ರಲ್ಲಿ 425 ಬಸ್‌ ಖರೀದಿ ಮಾಡಲಾಗಿದ್ದು, 408 ಬಸ್‌ಗಳು ಈ ಸಾಲಿನಿಂದಲೇ ಸಾರಿಗೆ ನಿಗಮಗಳ ಸೇವೆಗೆ ಸೇರ್ಪಡೆಗೊಳ್ಳಲಿವೆ ಎಂದರು.

ಸಚಿವರು, ಅಧಿಕಾರಿಗಳ ಹಾಜರಿ ಕಡ್ಡಾಯ: ಹೊರಟ್ಟಿ ಎಚ್ಚರಿಕೆ
ವಿಧಾನ ಪರಿಷತ್‌ನಲ್ಲಿ ಕಲಾಪ ನಡೆಯುವಾಗ ಸಂಬಂಧಪಟ್ಟ ಸಚಿವರು ಮತ್ತು ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು ಎಂದು ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಸೂಚಿಸಿದ್ದಾರೆ.

ಕಲಾಪ ನಡೆಯುವಾಗ ಸಚಿವರು, ಅಧಿಕಾರಿಗಳ ಗೈರು ನನ್ನ ಗಮನಕ್ಕೆ ಹಲವು ಬಾರಿ ಬಂದಿದೆ. ಈ ಬಾರಿ ಇಂತಹದ್ದನ್ನು ನಾನು ಸಹಿಸುವ ಪ್ರಶ್ನೆಯೇ ಇಲ್ಲ. ಈ ನಿಟ್ಟಿನಲ್ಲಿ ಗಮನ ಹರಿಸಿ ಎಂದು ಸಭಾನಾಯಕ, ಸಣ್ಣನೀರಾವರಿ ಸಚಿವ ಎಸ್‌. ಎನ್‌. ಭೋಸರಾಜು ಅವರಿಗೆ ಖಡಕ್‌ ಸೂಚನೆ ನೀಡಿದ್ದಾರೆ. ಒಂದು ವೇಳೆ ಅಧಿಕಾರಿಗಳು ಗೈರಾದರೆ ಠರಾವು ಪಾಸ್‌ ಮಾಡಲು ಹಿಂಜರಿಯುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next