Advertisement

ಸುವರ್ಣ ವಿಧಾನಸೌಧ: 2023-24ನೇ ಸಾಲಿನಲ್ಲಿ ಅನುಮೋದನೆ ಪಡೆದಿದ್ದ ಬಜೆಟ್‌ ಮೊತ್ತಕ್ಕಿಂತ ಹೆಚ್ಚುವರಿಯಾಗಿ ಖರ್ಚು ಮಾಡಿದ ಮತ್ತು ಮಾಡಬೇಕಾದ 3,542.10 ಕೋಟಿ ರೂ. ಪೂರಕ ಅಂದಾಜನ್ನು ವಿಧಾನಸಭೆಯಲ್ಲಿ ಸೋಮವಾರ ಮಂಡಿಸಲಾಯಿತು.

Advertisement

ಒಟ್ಟಾರೆ 3,542 ಕೋಟಿಯಲ್ಲಿ 684.28 ಕೋಟಿ ರೂ. ಕೇಂದ್ರ ಸಹಾಯಕ್ಕೆ ಸಂಬಂಧಿಸಿದ್ದ ಯೋಜನೆಗಳಿಗೆ ನೀಡಲಾಗಿದೆ. ಜತೆಗೆ ವಿವಿಧ ಇಲಾಖೆಗಳಲ್ಲಿನ ಪ.ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ) ಅಡಿ ಹೆಚ್ಚುವರಿ ಅನುದಾನ ಕಲ್ಪಿಸಲಾಗಿದೆ. ಇದಲ್ಲದೆ, ಕೃಷಿ ಮತ್ತು ತೋಟಗಾರಿಕೆ, ಶಿಕ್ಷಣ, ಮೂಲಸೌಕರ್ಯ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್‌, ಪಶುಸಂಗೋಪನೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗಳಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಿಗೆ ಹೆಚ್ಚುವರಿ ಮೊತ್ತ ನೀಡಲಾಗಿದೆ.

33 ಸಚಿವರು, ಮುಖ್ಯಮಂತ್ರಿ ದೆಹಲಿ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕೃತ ಉಪಯೋಗಕ್ಕಾಗಿ, ಶಾಸಕರು, ದೆಹಲಿಯ ಸರ್ಕಾರದ ವಿಶೇಷ ಪ್ರತಿನಿಧಿ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಮತ್ತು ಮುಖ್ಯ ಸಲಹೆಗಾರ, ಮೇಲ್ಮನೆ ಸದಸ್ಯರು ಸೇರಿ 38 ವಾಹನಗಳು ಸೇರಿ ಒಟ್ಟಾರೆ ವಾಹನಗಳ ಖರೀದಿಗೆ 9.10 ಕೋಟಿ ರೂ.

2022-23 ಮತ್ತು 2023-24ನೇ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ಪಾವತಿಸಲು 7.30 ಕೋಟಿ ರೂ.

ಧಾರವಾಡದ ಐಐಟಿ ಸಂಸ್ಥೆಗೆ ಭೂಸ್ವಾಧೀನ ಪ್ರಕ್ರಿಯೆಗೆ ತಗಲುವ ವೆಚ್ಚ ಮತ್ತು ಸೇವಾ ಶುಲ್ಕ ಸೇರಿ ಒಟ್ಟಾರೆ 4.72 ಕೋಟಿ ರೂ.

Advertisement

ವರ್ಲ್ಡ್ ಎಕನಾಮಿಕ್‌ ಫೋರಂನಲ್ಲಿ ಭಾಗವಹಿಸಲು ತೆರಳಿದ್ದ ಮುಖ್ಯಮಂತ್ರಿ ನೇತೃತ್ವದ ನಿಯೋಗದ ಅಮೆರಿಕದ ದಾವೋಸ್‌ ಪ್ರವಾಸಕ್ಕೆ 14.25 ಕೋಟಿ ರೂ.

ಮೈಸೂರು ದಸರಾ ಆಚರಣೆಗೆ ಹೆಚ್ಚುವರಿಯಾಗಿ ಒದಗಿಸಿದ್ದ 8.50 ಕೋಟಿ ರೂ.

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಾಕಿ ಬಿಲ್ಲುಗಳ ಪಾವತಿಗಾಗಿ 4.66 ಕೋಟಿ ರೂ.

ಕರ್ನಾಟಕ ಸಂಭ್ರಮ 50ರ ಆಚರಣೆಗಾಗಿ 5 ಕೋಟಿ ರೂ.

ವಿಧಾನಸಭಾ ಅಧ್ಯಕ್ಷರ ವಾಹನ ಖರೀದಿಗೆ ಹೆಚ್ಚುವರಿಯಾಗಿ 39 ಲಕ್ಷ ಹಾಗೂ ವಿಧಾನ ಪರಿಷತ್ತಿನ ಉಪ ಸಭಾಪತಿಗಳ ಹೊಸ ವಾಹನ ಖರೀದಿಗೆ ಹೆಚ್ಚುವರಿಯಾಗಿ 8 ಲಕ್ಷ ರೂ.

ದಸರಾ ಸಿಎಂ ಕಪ್‌ ಕ್ರೀಡಾಕೂಟಕ್ಕೆ ಹೆಚ್ಚುವರಿಯಾಗಿ 4.85 ಕೋಟಿ ರೂ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಆಯುಕ್ತರ ವೇತನ ಪಾವತಿಗೆ ಸಾಂಕೇತಿಕ ಅನುದಾನ 1 ಲಕ್ಷ ರೂ.

ರಾಜ್ಯದ ಕಾರಾಗೃಹಗಳಲ್ಲಿ ಅಸ್ವಾಭಾವಿಕ ಮರಣ ಹೊಂದಿದ ಬಂಧಿಗಳ ಪರಿಹಾರಕ್ಕೆ 1.50 ಕೋಟಿ ರೂ.

Advertisement

Udayavani is now on Telegram. Click here to join our channel and stay updated with the latest news.

Next