ಅಶೋಕ್ ಅವರ ಹಿನ್ನೆಲೆ
Advertisement
ಆರ್.ಅಶೋಕ್ ಅವರು 1957ರ ಜು.1ರಂದು ರಾಮಯ್ಯ-ಆಂಜಿನಮ್ಮ ಅವರ ಪುತ್ರರಾಗಿ ಜನಿಸಿದರು. ಪ್ರಾಥ ಮಿಕ ವಿದ್ಯಾಭ್ಯಾಸವನ್ನು ಹುಟ್ಟೂರಾದ ಜಾಲಹಳ್ಳಿಯಲ್ಲಿ ಪೂರೈಸಿ, ವಿವಿ ಪುರಂ ಕಾಲೇಜಿನಲ್ಲಿ ಬಿಎಸ್‌ಸಿ ಪದವಿ ಪಡೆದರು. 10ನೇ ವಯಸ್ಸಿನಲ್ಲಿ ಆರೆಸ್ಸೆಸ್ ಸೇರಿ ಅದರ ನೆರಳಿನಲ್ಲೇ ಬೆಳೆದು ಬಂದರು. 1975-77ರ ತುರ್ತು ಪರಿಸ್ಥಿತಿ ವಿರುದ್ಧ ಹೋರಾಡಿ ಎಲ್.ಕೆ. ಅಡ್ವಾಣಿ ಅವರೊಂದಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ 1 ತಿಂಗಳ ಸೆರೆವಾಸ ಅನುಭವಿಸಿದ್ದರು.
Related Articles
Advertisement
2019ರಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದರಲ್ಲದೆ, ಬಸವರಾಜ ಬೊಮ್ಮಾಯಿ ಸಂಪುಟದಲ್ಲೂ ಅದೇ ಖಾತೆಯನ್ನು ನಿಭಾಯಿಸಿ ಹಲವಾರು ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿ ಸಿದ ಕೀರ್ತಿ ಇದೆ. ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆಗೆ ಎನ್ನುವ ವಿನೂತನ ಕಾರ್ಯಕ್ರಮದ ಮೂಲಕ ಕಂದಾಯ ಇಲಾಖೆಯ ಹಲವು ಸೇವೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಿದರು.
ಹಟ್ಟಿ, ತಾಂಡಾಗಳಿಗೆ ಕಂದಾಯ ಗ್ರಾಮದ ಮಾನ್ಯತೆ ಆರ್.ಅಶೋಕ್ ಅವರು ಕಂದಾಯ ಸಚಿವರಾಗಿದ್ದಾಗ ಕಲಬುರಗಿ ಜಿಲ್ಲೆ ಸೇಡಂ ತಾಲೂಕು ಮಳಖೇಡ ಗ್ರಾಮದ ಸುಮಾರು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಮ್ಮೆಲೆ ಹಕ್ಕುಪತ್ರ ವಿತರಿಸಿ, ಹಟ್ಟಿ, ತಾಂಡಗಳಿಗೆ ಕಂದಾಯ ಗ್ರಾಮದ ಮಾನ್ಯತೆ ನೀಡಿ ಸರಕಾರದ ಸವಲತ್ತುಗಳ ವಿತರಣೆ ಮಾಡಿದ್ದರು. ಇದು ವಿಶ್ವ ದಾಖಲೆ ಬರೆದದ್ದು ಸ್ಮರಣೀಯ. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟವರ ಅಸ್ಥಿ ವಿಸರ್ಜನೆ ನೆರವೇರಿಸುವ ಮೂಲಕ ವಾರಸುದಾರರಿಲ್ಲದ ಅಸ್ಥಿ, ಚಿತಾಭಸ್ಮಕ್ಕೆ ಮುಕ್ತಿ ನೀಡಿದ್ದರು. ಪಕ್ಷ ವಹಿಸಿದ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಾ 2023ರ ಚುನಾವಣೆಯಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ 55,175 ಮತಗಳ ಅಂತರದಿಂದ ದಿಗ್ವಿಜಯ ಸಾಧಿಸಿದ್ದು, ಬೆಂಗಳೂರಿನ ಶಾಸಕರೊಬ್ಬರಿಗೆ ವಿಪಕ್ಷ ನಾಯಕ ಸ್ಥಾನ ಸಿಕ್ಕಿರುವುದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಸುಮಾರು 45 ವರ್ಷಗಳ ರಾಜಕೀಯ ಜೀವನಾನುಭವ ಬಳಸಿಕೊಂಡು ವಿಪಕ್ಷ ನಾಯಕ ಸ್ಥಾನ ನಿರ್ವಹಿಸುವ ಶಪಥಗೈದಿದ್ದಾರೆ. ಒಬ್ಬ ಸೈನಿಕ ಯಾವುದಕ್ಕೂ ದೂರುತ್ತಾ ಕೂರುವುದಾಗಲಿ, ವಿಷಾದಿಸುವುದಾಗಲಿ ಮಾಡುವುದಿಲ್ಲ. ಅವನ ಜೀವನ ಕೊನೆಯಿಲ್ಲದ ಸವಾಲುಗಳು ಮತ್ತು ಈ ಸವಾಲುಗಳು ಒಳ್ಳೆಯದು ಅಥವಾ ಕೆಟ್ಟದೇ ಆಗಿರಬೇಕಿಲ್ಲ. ಸವಾಲುಗಳೆಂದರೆ ಸವಾಲುಗಳಷ್ಟೆ.
– ಬಸನಗೌಡ ಪಾಟೀಲ್ ಯತ್ನಾಳ್, ಶಾಸಕ ಅಶೋಕ್ ಅವರಿಗೆ ಹೃತೂ³ರ್ವಕ ಅಭಿನಂದನೆಗಳು. ಸದನದ ಒಳಗೆ ಹಾಗೂ ಹೊರಗೆ ಸರಕಾರವನ್ನು ಸಮರ್ಥವಾಗಿ ಎದುರಿಸುವ ಮೂಲಕ ಈ ನಾಡಿನ ಜನತೆಯ ಹಿತಾಸಕ್ತಿಯನ್ನು ಎತ್ತಿ ಹಿಡಿಯುವಂತಾಗಲಿ ಎಂದು ಶುಭ ಹಾರೈಸುವೆ. -ಡಾ| ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಅಶೋಕ್‌ಗೆ ಅಭಿನಂದನೆಗಳು, ಅವರ ನೇತೃತ್ವದಲ್ಲಿ ನಾಡಿನ ಜನತೆಯ ಧ್ವನಿಯಾಗಿ ಸರಕಾರದ ವೈಫಲ್ಯಗಳ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ. ಶುಭವಾಗಲಿ. –ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ ಕರ್ನಾಟಕ ವಿಧಾನಸಭೆಯಲ್ಲಿ ವಿಪಕ್ಷದ ನಾಯಕರಾಗಿ ಆಯ್ಕೆಯಾಗಿರುವ ಅಶೋಕ್ ಅವರಿಗೆ ಹೃತೂ³ರ್ವಕ ಅಭಿನಂದನೆಗಳು.
-ಬಿ. ಎಲ್. ಸಂತೋಷ್, ಪಕ್ಷದ ರಾಷ್ಟ್ರೀಯ ಸಂಘಟನ ಪ್ರ.ಕಾರ್ಯದರ್ಶಿ ವಿಧಾನಸಭೆಯ ವಿಪಕ್ಷ ನಾಯಕರಾಗಿ ಆಯ್ಕೆಯಾದ ಅಶೋಕ್‌ಗೆ ಅಭಿನಂದನೆಗಳು. ನಿಮ್ಮ ಅವಧಿಯಲ್ಲಿ ಸದನದ ಒಳಗೆ ಹಾಗೂ ಹೊರಗೆ ಸರಕಾರವನ್ನು ಸಮರ್ಥವಾಗಿ ಎದುರಿಸಿ, ಪಕ್ಷವನ್ನು ಮತ್ತೂಮ್ಮೆ ಅಧಿಕಾರಕ್ಕೆ ತರುವ ಹಾದಿ ನಿಮ್ಮದಾಗಲಿ ಎಂದು ಹಾರೈಸುತ್ತೇನೆ.
– ಸುನೀಲ್ ಕುಮಾರ್, ಮಾಜಿ ಸಚಿವ ಅಶೋಕ್ ಅವರಿಗೆ ಆತ್ಮೀಯ ಅಭಿನಂ ದನೆಗಳು. ತಮ್ಮ ಹಿರಿತನ, ಸುದೀರ್ಘ ಅನುಭವ ಹಾಗೂ ಹೋರಾಟದ ಹಿನ್ನೆಲೆಯಲ್ಲಿ ಜನರ ದನಿಯಾಗಿ ಸರಕಾರದ ಜನ ವಿರೋಧಿ ನಿಲುವುಗಳ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಸಮರ್ಥವಾಗಿ ಹೋರಾಡುವ ಶಕ್ತಿ ನಿಮಗೆ ಲಭಿಸಲೆಂದು ಹಾರೈಸುತ್ತೇನೆ.
-ಬಿ.ವೈ.ವಿಜಯೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಸದನದಲ್ಲಿ ರಾಜ್ಯದ ಜನರ ಆಶೋತ್ತರಗಳಿಗೆ ದನಿಯಾಗಿ ಸಮರ್ಥವಾಗಿ ಕೆಲಸ ಮಾಡಲಿ ಎಂದು ಶುಭ ಹಾರೈಸುತ್ತೇನೆ.
-ನಳಿನ್ ಕುಮಾರ್ ಕಟೀಲು,ಬಿಜೆಪಿ ಮಾಜಿ ಅಧ್ಯಕ್ಷ ವಿಧಾನಸಭೆಯ ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಅಶೋಕ್ ಅವರಿಗೆ ಅಭಿನಂದನೆಗಳು.
-ಅರವಿಂದ ಬೆಲ್ಲದ್, ಶಾಸಕ ವಿಧಾನಸಭೆಯಲ್ಲಿ ರಾಜ್ಯದ ಜನತೆಯ ಪ್ರಬಲ ಧ್ವನಿಯಾಗಿ, ಜನರ ಆಶೋತ್ತರಗಳಿಗೆ ಪೂರಕವಾಗಿ ಅವರ ನೇತೃತ್ವದಲ್ಲಿ ಪಕ್ಷವು ಕಾರ್ಯ ನಿರ್ವಹಿಸಲಿದೆ. ಶುಭಾಶಯಗಳು.
– ತೇಜಸ್ವಿ ಸೂರ್ಯ, ಸಂಸದ ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಈಗ ವಿಪಕ್ಷದ ನಾಯಕ! ವಿಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲದ ನಕಲಿ ಸಾಮ್ರಾಟನೇ ಕೊನೆಯ ಆಯ್ಕೆಯಾಗಿದ್ದು ಬಿಜೆಪಿ ನಾಯಕರ ಬರಗಾಲ ಎದುರಿಸುತ್ತಿರುವುದಕ್ಕೆ ನಿದರ್ಶನ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಂತಹ ನಾಯಕರೆದುರು ತರಗೆಲೆಯಂತಹ ವ್ಯಕ್ತಿಯನ್ನು ತಂದು ಕೂರಿಸಿದೆ ಬಿಜೆಪಿ! ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ರಾಜಕಾರಣ ಮಾಡಿದ್ದೇ ಬಿಜೆಪಿಯ ವಿಪಕ್ಷದ ನಾಯಕನ ಆಯ್ಕೆಗೆ ಅರ್ಹತೆಯೇ? ಈ ಆಯ್ಕೆ ಕುಮಾರಸ್ವಾಮಿಯವರ ನಿರ್ದೇಶನದ ಮೇರೆಗೆ ಆಗಿದ್ದೋ, ಜೆಡಿಎಸ್ ಶಾಸಕರ ಅಭಿಪ್ರಾಯದ ಆಧಾರದಲ್ಲಿ ಆಗಿದ್ದೋ, ಬಿಜೆಪಿ ಶಾಸಕರ ಅಭಿಪ್ರಾಯದಿಂದ ಆಗಿದ್ದೋ? – ಕರ್ನಾಟಕ ಕಾಂಗ್ರೆಸ್ ಟ್ವೀಟ್