Advertisement
ಬಿಜೆಪಿಗೆ ಬೆಲೆ ಏರಿಕೆ ಬಿಸಿ :
Related Articles
Advertisement
2016ರ ಬಲಾಬಲ :
ಎಲ್‌ಡಿಎಫ್ 91
ಯುಡಿಎಫ್ 47
ಬಿಜೆಪಿ+ಇತರ 02
ಒಟ್ಟು ಸ್ಥಾನಗಳು : 140
ತಮಿಳುನಾಡು :
ಮಾಜಿ ಮುಖ್ಯಮಂತ್ರಿಗಳಾದ ದಿ| ಎಂ. ಕರುಣಾನಿಧಿ ಮತ್ತು ದಿ| ಜೆ. ಜಯಲಲಿತಾ ಅವರ ಅನುಪಸ್ಥಿತಿಯಲ್ಲಿ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಈ ಬಾರಿ ಚುನಾವಣೆಯನ್ನು ಎದುರಿಸುತ್ತಿವೆ. ಕರುಣಾನಿಧಿ ಅವರ ಪುತ್ರ ಸ್ಟಾಲಿನ್ ಡಿಎಂಕೆಯನ್ನು ಮುನ್ನಡೆಸಲಿದ್ದಾರೆ. ಆದರೆ ಎಐಎಡಿಎಂಕೆ ಮಾತ್ರ ನಾಯಕತ್ವ ಗೊಂದಲವನ್ನು ಎದುರಿ ಸುತ್ತಿದೆ. ಜೈಲಿನಿಂದ ಹೊರ ಬಂದಿ ರುವ ಶಶಿಕಲಾ, ಸಿಎಂ ಪಳನಿ ಸ್ವಾಮಿ ಮತ್ತು ಡಿಸಿಎಂ ಒ. ಪನ್ನೀರ್ ಸೆಲ್ವಂ ಅವರ ನಡುವೆ ಪೈಪೋಟಿ ಏರ್ಪಟ್ಟಿದೆ. ಟಿಟಿವಿ ದಿನಕರನ್ ಮತ್ತೆ ಮಾತೃ ಪಕ್ಷಕ್ಕೆ ವಾಪಸಾಗುವ ಸಾಧ್ಯತೆಯೂ ಇದೆ. ಎಐಎಡಿಎಂಕೆ ಯ ಈ ಎಲ್ಲ ಗೊಂದಲಗಳು ಡಿಎಂಕೆ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ವರದಾನ ವಾಗುವ ಸಾಧ್ಯತೆ ಇದೆ. ಬಿಜೆಪಿ ತನ್ನ ಖಾತೆಯನ್ನು ತೆರೆಯುವ ಲೆಕ್ಕಾಚಾರ ದಲ್ಲಿದೆ. ಕರ್ನಾಟಕದಲ್ಲಿ ಖಡಕ್ ಐಪಿಎಸ್ ಅಧಿಕಾರಿ ಎಂದು ಗುರುತಿಸಿ ಕೊಂಡಿದ್ದ ಅಣ್ಣಾಮಲೈ ಅವರು ತಮ್ಮ ತವರು ರಾಜ್ಯವಾದ ದ್ರಾವಿಡ ನಾಡಿನಲ್ಲಿ ಕಮಲ ಅರಳಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ನಟ ಕಮಲ್ ಹಾಸನ್ ಈ ಚುನಾವಣೆಯಲ್ಲಿ ಸಕ್ರಿಯರಾಗಿದ್ದರೆ, ತಲೈವಾ ರಜನಿಕಾಂತ್ ಅನಾರೋಗ್ಯದ ಕಾರಣ ಚುನಾವಣ ರಾಜಕೀಯದಿಂದ ಹಿಂದೆ ಸರಿದಿದ್ದಾರೆ.
ಎಐಎಡಿಎಂಕೆ 136
ಡಿಎಂಕೆ 89
ಕಾಂಗ್ರೆಸ್ 08
nಇತರ 01
ಬಿಜೆಪಿ 00
ಒಟ್ಟು ಸ್ಥಾನಗಳು : 234
ಪಶ್ಚಿಮ ಬಂಗಾಲ :
ಕೇಂದ್ರದ ವಿರುದ್ಧ ಸತತವಾಗಿ ಸಮರ ಸಾರುತ್ತಾ ಬಂದಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟಿಎಂಸಿಯನ್ನು ಮತ್ತೆ ಅಧಿಕಾರದ ಗದ್ದುಗೆಯಲ್ಲಿ ಕುಳ್ಳಿರಿಸಲು ಹೋರಾಡುತ್ತಿದ್ದಾರೆ. ಪಕ್ಷದ ಕೆಲವು ನಾಯಕರು ಬಿಜೆಪಿ ತೆಕ್ಕೆಗೆ ಜಾರಿದ್ದು ಸಹಜವಾಗಿ ಪಕ್ಷಕ್ಕೆ ಹಿನ್ನಡೆ ಯಾಗಿದೆ. ಕಳೆದ ಲೋಕಸಭಾ ಚುನಾವಣೆ ಯಲ್ಲೂ ಬಿಜೆಪಿ ರಾಜ್ಯ ದಲ್ಲಿ ಹೆಚ್ಚಿನ ಸೀಟುಗಳನ್ನು ಗಳಿಸಿತ್ತು. ಹೀಗಾಗಿ ಬಿಜೆಪಿ ಭಾರೀ ಆತ್ಮವಿಶ್ವಾಸ ದಲ್ಲಿದ್ದು, ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಲದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಕಳೆದೊಂದು ವರ್ಷದಿಂದ ಚುನಾ ವಣೆಗಾಗಿ ಭರದ ಸಿದ್ಧತೆಯಲ್ಲಿ ತೊಡಗಿರುವ ಬಿಜೆಪಿ ಆಡಳಿತಾ ರೂಢ ತೃಣಮೂಲ ಕಾಂಗ್ರೆಸ್‌ಗೆ ಸಡ್ಡು ಹೊಡೆದಿದೆ. ಈಗಾಗಲೇ ಮೋದಿ, ಶಾ ಹಾಗೂ ನಡ್ಡಾ ಪ್ರತೀ ವಾರ ಎಂಬಂತೆ ರಾಜ್ಯದಲ್ಲಿ ರ್ಯಾಲಿ ಸಂಘಟಿಸುತ್ತಿ ದ್ದಾರೆ. ಬಿಜೆಪಿ ಮೇಲ್ನೋಟಕ್ಕೆ ಬಲಿಷ್ಠವಾಗಿರುವುದರಿಂದ ಆ ಪಕ್ಷವನ್ನು ಅಧಿಕಾರದಿಂದ ದೂರವಿರಿಸಲು ಟಿಎಂಸಿ ಕಾಂಗ್ರೆಸ್ ಜತೆ ಮೈತ್ರಿಗೆ ಮುಂದಾಗಿದೆ. ಟಿಎಂಸಿಯಿಂದ ಹೊರ ಬಂದಿರುವ ದೀದಿ ಆಪ್ತ ಸುವೇಂದು ಅಧಿಕಾರಿ ಸಹಿತ ನಾಯಕರೆಲ್ಲರೂ ದೀದಿಯ ಸರ್ವಾಧಿಕಾರಿ ಧೋರಣೆ ಯತ್ತಲೇ ಬೆಟ್ಟು ಮಾಡಿದ್ದು ಇದು ಬಿಜೆಪಿ ಬತ್ತಳಿಕೆಗೆ ಇನ್ನೊಂದು ಅಸ್ತ್ರ ಸೇರಿಸಿದಂತಾಗಿದೆ.
ಇನ್ನು ಎರಡೂವರೆ ದಶಕಗಳ ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಎಡಪಕ್ಷಗಳು ಚುನಾವಣೆಯಲ್ಲಿ ಪೈಪೋಟಿ ನೀಡಲು ಸಜ್ಜಾಗಿವೆ. ಆದರೆ ದೀದಿ-ಬಿಜೆಪಿ ಅಬ್ಬರದ ನಡುವೆ ಇವುಗಳ ಸದ್ದೇ ಅಡಗಿಹೋಗಿದೆ.
ಟಿಎಂಸಿ 211
ಕಾಂಗ್ರೆಸ್ 44
ಸಿಪಿಎಂ 26
ಬಿಜೆಪಿ 03
ಇತರ 10
ಒಟ್ಟು ಸ್ಥಾನಗಳು : 294
ಅಸ್ಸಾಂ :
ಅಸ್ಸಾಂನಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮರಳಿ ಆಡಳಿತದ ಚುಕ್ಕಾಣಿ ಹಿಡಿಯುವ ಇರಾದೆಯಲ್ಲಿದೆ.ಆದರೆ ಈ ಬಾರಿ ಅಲ್ಲಿನ ಟ್ರೆಂಡ್ ಬದಲಾವಣೆಯಾಗುವ ಸಾಧ್ಯತೆ ಇದೆ. ವಿಪಕ್ಷಗಳು ಸಿಎಎ ಅನ್ನು ಇಟ್ಟು ಕೊಂಡು ಬಿಜೆಪಿಯನ್ನು ಹಣೆ ಯಲು ಮುಂದಾಗಿದೆ. ಸಿಎಎ ಕಾಯ್ದೆ ಜಾರಿ ಪ್ರಮುಖ ಚುನಾವಣ ವಿಷಯವಾಗಲಿದೆ.
ಬಿಜೆಪಿ 60
ಎಜಿಪಿ 14
ಬಿಪಿಎಫ್ 12
ಕಾಂಗ್ರೆಸ್ 26
ಎಐಯುಡಿಎಫ್ 13
ಇತರ 1
ಒಟ್ಟು ಸ್ಥಾನಗಳು : 126
ಪುದುಚೇರಿ :
ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ರಾಜಕೀಯ ಚಿತ್ರಣ ಕಳೆದೊಂದು ವಾರದ ಅವಧಿಯಲ್ಲಿ ಬದಲಾಗಿದೆ. ಆಧಿಕಾರದಲ್ಲಿದ್ದ ಕಾಂಗ್ರೆಸ್ ಸರಕಾರ ಚುನಾವಣೆಗೆ ದಿನಾಂಕ ಘೋಷಣೆ ಯಾಗಲು ಇನ್ನೇನು ಕೆಲವೇ ದಿನಗ ಳಿರುವಂತೆ ಪತನವಾಗಿತ್ತು. ದ್ರಾವಿಡ ಪಕ್ಷಗಳ ಜತೆಯಲ್ಲಿ ಬಿಜೆಪಿಯೂ ಚುನಾವಣೆಯ ಮೇಲೆ ಕಣ್ಣಿಟ್ಟಿದೆ.
ಕಾಂಗ್ರೆಸ್ 15
ಎಐಎನ್‌ಆರ್‌ಸಿ 08
ಇತರ- 07
ಒಟ್ಟು ಸ್ಥಾನಗಳು : 30
ಕಾಂಗ್ರೆಸ್‌ಗೆ ನಾಯಕತ್ವದ ಕೊರತೆ :
ಆಡಳಿತಾರೂಢ ಬಿಜೆಪಿಯ ಜನ ವಿರೋಧಿ ನೀತಿಗಳನ್ನು ವಿರೋಧಿಸಿ, ಪ್ರತಿಭಟಿಸುವಲ್ಲಿಯೂ ವಿಪಕ್ಷ ಕಾಂಗ್ರೆಸ್ ವಿಫಲವಾಗಿದೆ. ಸಮರ್ಪಕ ನಾಯಕತ್ವ ಇಲ್ಲದೇ ಇರುವುದು ಪಕ್ಷದ ಕಾರ್ಯಕರ್ತರನ್ನು ಚಿಂತೆಗೀಡು ಮಾಡಿದೆ. ಕೇವಲ ರಾಜ್ಯಗಳಲ್ಲಿ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲೂ ಪಕ್ಷ ನಾಯಕತ್ವ ಕೊರತೆ ಎದುರಿಸುತ್ತಿದ್ದು ಆಡಳಿತಾರೂಢ ಪಕ್ಷದ ವಿರುದ್ಧ ಸಮರ್ಥವಾಗಿ ದನಿ ಎತ್ತಲೂ ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ.