Advertisement
ಮೊದಲ ಪಟ್ಟಿಯಲ್ಲಿ ಪಟ್ಟಿಯಲ್ಲಿ ಹನ್ನೊಂದು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಿದ್ದು ಶಾಂತಿನಗರ ಸೇರಿ ಮೂರು ಕ್ಷೇತ್ರಗಳ ಟಿಕೆಟ್ ಘೊಷಿಸಿಲ್ಲ. ಶಾಮನೂರು ಶಿವಶಂಕರಪ್ಪ, ಕಾಗೋಡು ತಿಮ್ಮಪ್ಪ, ಅಂಬರೀಷ್, ಡಾ.ಮಾಲಕರೆಡ್ಡಿ ಅವರಿಗೆ ಗೆಲುವಿನ ಮಾನದಂಡ ಅನುಸರಿಸಿ ಟಿಕೆಟ್ ನೀಡಲಾಗಿದೆ.
Related Articles
Advertisement
ಅನಾರೋಗ್ಯದ ಹಿನ್ನೆಲೆಯಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಬಿ. ರಾಮಕೃಷ್ಣ ಅವರಿಗೆ ಟಿಕೆಟ್ ನಿರಾಕರಿಸಲಾಗಿದ್ದು, ಅವರ ಪುತ್ರನಿಗೆ ಟಿಕೆಟ್ ನೀಡಲಾಗಿದೆ. ಅಲ್ಲದೇ ಇತ್ತೀಚೆಗೆ ನಿಧನರಾಗಿದ್ದ ಕಲಬುರಗಿ ಉತ್ತರ ಕ್ಷೇತ್ರದಲ್ಲಿ ಅವರ ಖಮರುಲ್ ಇಸ್ಲಾಂ ಪತ್ನಿ ಫಾತಿಮಾ ಕೆ, ಬೇಲೂರು ಕ್ಷೇತ್ರದ ರುದ್ರೇಗೌಡ ಅವರ ಪತ್ನಿ ಕೀರ್ತನಾ ರುದ್ರೇಗೌಡ ಹಾಗೂ ಎಚ್.ಡಿ. ಕೋಟೆ ಶಾಸಕ ಚಿಕ್ಕಮಾದು ಪುತ್ರ ಸಿ.ಅನಿಲ್ ಕುಮಾರ್‌ಗೆ ಟಿಕೆಟ್ ನೀಡಲಾಗಿದೆ. ಮಹಿಳಾ ಆಕಾಂಕ್ಷಿಗಳಿಗೆ ಹೆಚ್ಚಿನ ಟಿಕೆಟ್ ನೀಡಿದ್ದು, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಸೇರಿದಂತೆ ಹದಿನೈದು ಮಹಿಳೆಯರಿಗೆ ಟಿಕೆಟ್ ನೀಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಡೆಸಿದ ಪ್ರತ್ಯೇಕ ಸಮೀಕ್ಷೆಗೆ ಬದಲಾಗಿ ಅಂತಿಮವಾಗಿ ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸೇರಿ ರಾಜ್ಯ ನಾಯಕರು ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ನಾಯಕರ ನಡುವೆ ಕ್ಷೇತ್ರ ಹೊಂದಾಣಿಕೆಯ ಮೇಲೆ ಟಿಕೆಟ್ ಹಂಚಿಕೆಯಾದಂತೆ ಕಂಡು ಬರುತ್ತಿದೆ.
ಪಕ್ಷದ ನಾಯಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದ್ದರೂ, ಬೇರೆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ಶಾಸಕರಿಗೆ ಟಿಕೆಟ್ ಕೊಡಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಆದರೆ, ತಮ್ಮ ಆಪ್ತ ಅಧಿಕಾರಿಗಳಾಗಿದ್ದ ಭೀಮಸೇನ್‌ರಾವ್ ಸಿಂಧೆ ಹಾಗೂ ಹೀರಾ ನಾಯ್ಕಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಅವರ ಹೊರತಾಗಿ ಹೊಳೆ ನರಸೀಪುರದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ. ಮಂಜೇಗೌಡ ಹಾಗೂ ಸಕಲೇಶಪುರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯಗೆ ಟಿಕೆಟ್ ಕೊಡಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿ ಸಂಸದ ಕೆ.ಎಚ್.ಮುನಿಯಪ್ಪ ಅವರು ಕೆಜಿಎಫ್ನಲ್ಲಿ ತಮ್ಮ ಮಗಳು ರೂಪಾ ಶಶಿಧರ್‌ಗೂ ಟಿಕೆಟ್ ಪಡೆಯುವಲ್ಲಿ ಮುನಿಯಪ್ಪ ಯಶಸ್ವಿಯಾಗಿದ್ದಾರೆ. ಜತೆಗೆ ಕೋಲಾರದಲ್ಲಿ ಜಮೀರ್‌ಪಾಷಾ, ಚಿಂತಾಮಣಿಯಲ್ಲಿ ವಾಣಿ ಕೃಷ್ಣಾರೆಡ್ಡಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಲಸಿಗರ ರಕ್ಷಿಸಿದ ಸಿಎಂಪಕ್ಷದ ನಾಯಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದ್ದರೂ, ಬೇರೆ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದ ಶಾಸಕರಿಗೆ ಟಿಕೆಟ್ ಕೊಡಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಪ್ರಮುಖವಾಗಿ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಶೋಕ್ ಖೇಣಿಗೆ ಟಿಕೆಟ್ ನೀಡದಂತೆ ಖಗೇì ಅವರೇ ಪಟ್ಟು ಹಿಡಿದಿದ್ದರೂ, ಸಿಎಂ ಟಿಕೆಟ್ ಕೊಡಿಸುವಲ್ಲಿ ಸಫಲರಾಗಿದ್ದಾರೆ. ಅದೇ ರೀತಿ ಜೆಡಿಎಸ್ ಬಂಡಾಯ ಶಾಸಕರಾಗಿದ್ದ ಏಳು ಜನಕ್ಕೆ ಟಿಕೆಟ್ ಸಿಕ್ಕಿದೆ. ಹಗರಿಬೊಮ್ಮನಹಳ್ಳಿಯ ಭೀಮಾ ನಾಯಕ್ ಹಾಗೂ ಪುಲಕೇಶಿ ನಗರದ ಅಖಂಡ ಶ್ರೀನಿವಾಸ್ ಹೆಸರಿಗೆ ಖರ್ಗೆ ಆಕ್ಷೇಪವೆತ್ತಿದ್ದರು. ಆದರೆ ಖರ್ಗೆ ಸೂಚಿಸಿದ್ದ ಛಲವಾದಿ ನಾರಾಯಣಸ್ವಾಮಿಗೆ ನೆಲಮಂಗಲದಲ್ಲಿ ಟಿಕೆಟ್ ನೀಡಿ ಅವರನ್ನು ಸಮಾಧಾನ ಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಬಳ್ಳಾರಿ ಜಿಲ್ಲೆಯ ಆನಂದ್‌ಸಿಂಗ್, ನಾಗೇಂದ್ರ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಹಿರಿಯರು ಸೇಫ್
ವಯಸ್ಸು ಹಾಗೂ ಆರೋಗ್ಯ ಸಮಸ್ಯೆ ಆಧಾರದಲ್ಲಿ ಹಿರಿಯ ನಾಯಕರಾಗಿರುವ ಕಾಗೋಡು ತಿಮ್ಮಪ್ಪ, ಶಾಮನೂರು ಶಿವಶಂಕರಪ್ಪ, ಕೆ.ಬಿ. ಕೋಳಿವಾಡ್ ಅವರಿಗೆ ಟಿಕೆಟ್ ಕೈತಪ್ಪಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ, ಗೆಲ್ಲುವ ಮಾನದಂಡ ಆಧರಿಸಿ ಹಿರಿಯರಿಗೂ ಟಿಕೆಟ್ ನೀಡಲಾಗಿದೆ. ವಿವಾದದಲ್ಲಿ ಸಿಲುಕಿದ್ದ ಮಾಜಿ ಸಚಿವ ಎಚ್.ವೈ ಮೇಟಿ ಹಾಗೂ ಹಡಗಲಿ ಶಾಸಕ ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯಕ್ ಅವರಿಗೂ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ನಿಪ್ಪಾಣಿ-ಕಾಕಾಸಾಹೇಬ್ ಪಾಟೀಲ್
ಚಿಕ್ಕೊಡಿ-ಗಣೇಶ್ ಹುಕ್ಕೇರಿ
ಅಥಣಿ-ಮಹೇಶ್ ಈರಣ್ಣಗೌಡ ಕುಮಟಳ್ಳಿ
ಕಾಗವಾಡ-ಶ್ರೀಮಂತ ಬಾಳಾಸಾಹೇಬ್ ಪಾಟೀಲ್
ಕುಡಚಿ- ಅಮಿತ್ ಶರ್ಮ ಗಟಗೆ
ರಾಯಬಾಗ್-ಪ್ರದೀಪ್ ಕುಮಾರ್ ಮಳಗಿ
ಹುಕ್ಕೇರಿ-ಎ.ಬಿ.ಪಾಟೀಲ್
ಅರಭಾವಿ- ಅರವಿಂದ ಮಹದೇವರಾವ್ ದಳವಾಯಿ
ಗೋಕಾಕ -ರಮೇಶ್ ಜಾರಕಿಹೊಳಿ
ಯಮಕನ ಮರಡಿ -ಸತೀಶ್ ಜಾರಕಿಹೊಳಿ
ಬೆಳಗಾವಿ ಉತ್ತರ- ಫೀರೋಜ್ ಸೇs…
ಬೆಳಗಾವಿ ದಕ್ಷಿಣ- ಎಂ.ಡಿ.ಲಕ್ಷ್ಮೀನಾರಾಯಣ
ಬೆಳಗಾವಿ ಗ್ರಾಮಾಂತರ- ಲಕ್ಷ್ಮೀ ರವೀಂದ್ರ ಹೆಬ್ಟಾಳ್ಕರ್
ಖಾನಪುರ- ಅಂಜಲಿ ನಿಂಬಾಳ್ಕರ್
ಬೈಲಹೊಂಗಲ- ಮಹಂತೇಶ್ ಎಸ್.ಕೌಜಲಗಿ
ಸವದತ್ತಿ ಯಲ್ಲಮ್ಮ- ವಿಶ್ವಾಸ್ ವಸಂತ ವೈದ್ಯ
ರಾಮದುರ್ಗ-ಪಿ.ಎಂ.ಅಶೋಕ್
ಮುಧೋಳ್- ಸತೀಶ್ ಚಿನ್ನಪ್ಪ ಬಂಡಿವಡ್ಡರ್
ತೇರದಾಳ-ಉಮಾಶ್ರೀ
ಜಮಖಂಡಿ-ಸಿದ್ದು ನ್ಯಾಮಗೌಡ
ಬೀಳಗಿ-ಜೆ.ಟಿ. ಪಾಟೀಲ
ಬಾದಮಿ-ಡಾ.ದೇವರಾಜ ಪಾಟೀಲ್
ಬಾಗಲಕೋಟೆ- ಎಚ್.ವೈ.ಮೇಟಿ
ಹುನಗುಂದ-ವಿಜಯಾನಂದ ಕಾಸಪ್ಪನವರ್
ಮುದ್ದೆಬಿಹಾಳ-ಅಪ್ಪಾಜಿ ನಾಡಗೌಡ
ದೇವರ ಹಿಪ್ಪರಗಿ- ಬಾಬುಗೌಡ ಎಸ್.ಪಾಟೀಲ್
ಬಸವನಬಾಗೇವಾಡಿ- ಶಿವಾನಂದ ಪಾಟೀಲ್
ಬಬಳೇಶ್ವರ-ಎಂ.ಬಿ.ಪಾಟೀಲ್
ಬಿಜಾಪುರ ನಗರ- ಅಬ್ದುಲ್ ಹಮೀದ್ ಮುಶ್ರೀಪ್
ಇಂಡಿ- ಯಶವಂತರಾಯಗೌಡ ಪಾಟೀಲ್
ಅಫಜಲ್‌ಪುರ-ಎಂ.ವೈ.ಪಾಟೀಲ್
ಜೇವರ್ಗಿ-ಡಾ.ಅಜಯ್ ಸಿಂಗ್
ಸುರಪುರ-ರಾಜವೆಂಕಟಪ್ಪ ನಾಯಕ್
ಶಹಪುರ-ಶರಣಪ್ಪ ಬಸಪ್ಪ ದರ್ಶನಪುರ
ಯಾದಗಿರಿ-ಡಾ.ಎ.ಬಿ.ಮಾಲಕರಡ್ಡಿ
ಗುರುಮಿಟಕಲ್-ಬಾಬುರಾವ್ ಸಿಂಚನಸೂರು
ಚಿತ್ತಾಪುರ- ಪ್ರಿಯಾಂಕ ಖರ್ಗೆ
ಸೇಡಂ-ಡಾ. ಶರಣ ಪ್ರಕಾಶ್ ಪಾಟೀಲ್
ಚಿಂಚೊಳ್ಳಿ-ಡಾ.ಉಮೇಶ್ ಜಾಧವ
ಗುಲ್ಬರ್ಗ ಗ್ರಾಮಾಂತರ-ರಾಮಕೃಷ್ಣ
ಗುಲ್ಬರ್ಗ ದಕ್ಷಿಣ-ಅಲ್ಲಂ ಪ್ರಭು ಪಾಟೀಲ್
ಗುಲ್ಬರ್ಗ ಉತ್ತರ-ಕೆ.ಫಾತೀಮಾ
ಅಳಂದ-ಬಿ.ಆರ್.ಪಾಟೀಲ್
ಬಸವಕಲ್ಯಾಣ-ಬಿ.ನಾರಾಯಣರಾವ್
ಹುಮ್ನಬಾದ್-ರಾಜಶೇಖರ್ ಬಿ.ಪಾಟೀಲ್
ಬೀದರ್ ದಕ್ಷಿಣ- ಅಶೋಕ್ ಖೇಣಿ
ಬೀದರ್-ರಹೀಂಖಾನ್
ಭಾಲ್ಕಿ-ಈಶ್ವರ ಖಂಡ್ರೆ
ಔರದ್-ವಿಜಯ ಕುಮಾರ್
ರಾಯಚೂರು ಗ್ರಾಮಾಂತರ- ಬಸನಗೌಡ
ಮಾನ್ವಿ-ಜಿ.ಹಂಪಯ್ಯ ನಾಯಕ್
ದೇವದುರ್ಗ-ರಾಜಶೇಖರ್ ನಾಯಕ್
ಲಿಂಗಸಗೂರು-ದುರ್ಗಪ್ಪ ಹೊಳಗೆರೆ
ಸಿಂಧನೂರು-ಹಂಪನಗೌಡ ಬದರಲಿ
ಮಸ್ಕಿ- ಪ್ರತಾಪಗೌಡ ಪಾಟೀಲ್
ಕುಷ್ಠಗಿ- ಅಮರೇಗೌಡ ಎಲ್.ಪಾಟೀಲ್
ಕನಕಗಿರಿ-ಶಿವರಾಜ ತಂಗಡಗಿ
ಗಂಗಾವತಿ-ಇಕ್ಬಾಲ್ ಅನ್ಸಾರಿ
ಯಲ್ಬರ್ಗಿ-ಬಸವರಾಜ ರಾಯರಡ್ಡಿ
ಕೊಪ್ಪಳ-ರಾಘವೇಂದ್ರ ಹಿಟ್ನಾಳ್
ಶಿರಾಹಟ್ಟಿ-ದೊಡ್ಡಮಣಿ ರಾಮಕೃಷ್ಣ ಸಿದ್ದಲಿಂಗಪ್ಪ
ಗದಗ-ಎಚ್.ಕೆ. ಪಾಟೀಲ್
ರೋಣ-ಜಿ.ಎಸ್. ಪಾಟೀಲ್
ನರಗುಂದ-ಬಸವರಡ್ಡಿ ಯಾವಗಲ್ಲ
ನವಲಗುಂದ-ವಿನೋದ್ ಕೆ.ಅಸೋಟಿ
ಕುಂದಗೋಳ-ಚೆನ್ನಬಸಪ್ಪ ಶಿವಳ್ಳಿ
ಧಾರವಾಡ ಗ್ರಾಮೀಣ-ವಿನಯ ಕುಲಕರ್ಣಿ
ಹುಬ್ಬಳ್ಳಿ ಧಾರವಾಡ ಪೂರ್ವ-ಪ್ರಸಾದ್ ಅಬ್ಬಯ್ಯ
ಹುಬ್ಬಳ್ಳಿ ಧಾರವಾಡ ಕೇಂದ್ರ-ಡಾ.ಮಹೇಶ್ ಸಿ.ನಲ್ವಾಡ್
ಹುಬ್ಬಳ್ಳಿ ಧಾರವಾಡ ಪಶ್ಚಿಮ- ಇಸ್ಮಾಯಿಲ್ ತಮಟಗಾರ್
ಕಲಘಟಗಿ-ಸಂತೋಷ ಲಾಡ್
ಹಳಿಯಾಳ- ಆರ್.ವಿ.ದೇಶಪಾಂಡೆ
ಕಾರವಾರ-ಸತೀಶ್ ಶೈಲ್
ಕುಮಟಾ-ಶಾರದಾ ಮೋಹನ ಶೆಟ್ಟಿ
ಭಟ್ಕಳ-ಮಂಕಾಳ್ ವೈದ್ಯ
ಶಿರಸಿ-ಭೀಮಣ್ಣ ನಾಯಕ್
ಯಲ್ಲಾಪುರ-ಶಿವರಾಮ್ ಹೆಬ್ಟಾರ
ಹಾನಗಲ್-ಶ್ರೀನಿವಾಸ್ ಮಾನೆ
ಶಿಗ್ಗಾವ್-ಸಯ್ಯದ್ ಅಜ್ಜಂಪೀರ್ ಖಾದ್ರಿ
ಹಾವೇರಿ- ರುದ್ರಪ್ಪ ಮಾನಪ್ಪ ಲಮಾಣಿ
ಬ್ಯಾಡಗಿ-ಎಸ್.ಆರ್.ಪಾಟೀಲ್
ಹಿರಿಕೇರೂರು-ಬಿ.ಸಿ.ಪಾಟೀಲ್
ರಾಣೇಬೆನ್ನೂರು-ಕೆ.ಬಿ.ಕೋಳಿವಾಡ
ಹಡಗಲಿ-ಪರಮೇಶ್ವ ನಾಯಕ್
ಹಗರಿಬೊಮ್ಮನಹಳ್ಳಿ- ಭೀಮಾನಾಯಕ್
ವಿಜಯನಗರ-ಆನಂದ್‌ಸಿಂಗ್
ಕಂಪ್ಲಿ-ಜೆ.ಎನ್.ಗಣೇಶ್
ಸಿರುಗುಪ್ಪ-ಮುರಳಿಕೃಷ್ಣ
ಬಳ್ಳಾರಿ-ಬಿ.ನಾಗೇಂದ್ರ
ಬಳ್ಳಾರಿ ನಗರ-ಅನಿಲ್ ಲಾಡ್
ಸಂಡೂರ್- ತುಕರಾಮ್
ಕೂಡ್ಲಗಿ- ರಘುಗುಜ್ಜಾಲ್
ಮೊಳಕಾಲ್ಮೂರು-ಡಾ.ಬಿ.ಯೋಗೇಶ್ ಬಾಬು
ಚಳ್ಕೆàರೆ-ಟಿ.ರಘುಮೂರ್ತಿ
ಚಿತ್ರದುರ್ಗ-ಡಾ.ಎಚ್.ಎ.ಷಣ್ಮುಖಪ್ಪ
ಹಿರಿಯೂರು-ಡಾ.ಸುಧಾಕರ್
ಹೊಸದುರ್ಗ-ಬಿ.ಜಿ.ಗೋವಿಂದಪ್ಪ
ಹೊಳ್ಕೆರೆ-ಎಚ್.ಆಂಜನೇಯ
ಜಳಗೂರು-ಎ.ಎಲ್.ಪುಷ್ಪ
ಹರಪ್ಪನಹಳ್ಳಿ-ಎಂ.ಪಿ.ರವೀಂದ್ರ
ಹರಿಹರ-ಎಸ್.ರಾಮಪ್ಪ
ದಾವಣಗೆರೆ ಉತ್ತರ-ಎಸ್.ಎಸ್. ಮಲ್ಲಿಕಾರ್ಜುನ
ದಾವಣಗೆರೆ ದಕ್ಷಿಣ-ಶಾಮನೂರು ಶಿವಶಂಕಪ್ಪ
ಮಾಯಕೊಂಡ-ಕೆ.ಎಸ್.ಬಸವರಾಜ
ಚನ್ನಗಿರಿ-ವಡ್ನಾಳ್ ರಾಜಣ್ಣ
ಹೊನ್ನಳ್ಳಿ- ಡಿ.ಜಿ.ಶಾಂತನಗೌಡ
ಶಿವಮೊಗ್ಗ ಗ್ರಾಮಾಂತರ-ಡಾ.ಎಸ್.ಕೆ.ಶ್ರೀನಿವಾಸ್ ಕರಿಯಣ್ಣ
ಭದ್ರಾವತಿ-ಬಿ.ಕೆ.ಸಂಗಮೇಶ್ವರ
ಶಿವಮೊಗ್ಗ-ಕೆ.ಬಿ. ಪ್ರಸನ್ನಕುಮಾರ್
ತೀರ್ಥಹಳ್ಳಿ-ಕಿಮ್ಮನೆ ರತ್ನಾಕರ
ಶಿಕಾರಿಪುರ-ಜಿ.ಬಿ.ಮಾಲತೇಶ್
ಸೊರಬ-ರಾಜು ಎಂ.ತಳ್ಳೂರು
ಸಾಗರ-ಕಾಗೋಡು ತಿಮ್ಮಪ್ಪ
ಬೈಂದೂರು-ಕೆ.ಗೋಪಾಲ ಪೂಜಾರಿ
ಕುಂದಾಪುರ- ರಾಕೇಶ್ ಮಲ್ಲಿ
ಉಡುಪಿ-ಪ್ರಮೋದ್ ಮಧ್ವರಾಜ್
ಕಾಪು- ವಿನಯ್ ಕುಮಾರ್ ಸೊರಕೆ
ಕಾರ್ಕಳ-ಎಚ್.ಗೋಪಾಲ್ ಭಂಡಾರಿ
ಶೃಂಗೇರಿ-ಟಿ.ಡಿ.ರಾಜೇಗೌಡ
ಮುಡಗೆರೆ-ಮೊಟಮ್ಮ
ಚಿಕ್ಕಮಗಳೂರು-ಬಿ.ಎಲ್.ಶಂಕರ್
ತರಿಕೆರೆ-ಎಸ್.ಎಂ.ನಾಗರಾಜ್
ಕಡೂರು- ಕೆ.ಎಸ್.ಆನಂದ್
ಚಿಕ್ಕನಾಯಕನಹಳ್ಳಿ- ಸಂತೋಷ್ ಜಯಚಂದ್ರ
ತಿಪಟೂರು-ಬಿ.ನಂಜಮರಿ
ತುರುವೆಕೆರೆ-ರಂಜಪ್ಪ ಟಿ.ಚೌಧರಿ
ಕುಣಿಗಲ್-ಡಾ.ಎಚ್.ಡಿ.ರಂಗನಾಥ
ತುಮಕೂರು ಸಿಟಿ-ರಫೀಕ್ ಅಹಮ್ಮದ್
ತುಮಕೂರು ಗ್ರಾಮಾಂತರ- ಆರ್.ಎಸ್.ರವಿಕುಮಾರ್
ಕೊರಗೇರಿ-ಡಾ.ಜಿ.ಪರಮೇಶ್ವರ
ಗುಬ್ಬಿ-ಕುಮಾರ್ ಕೆ.
ಶಿರಾ-ಟಿ.ಬಿ.ಜಯಚಂದ್ರ
ಪಾವಗಡ-ವೆಂಕಟರಮಣಪ್ಪ
ಮಧುಗಿರಿ-ಕೆ.ಎನ್.ರಾಜಣ್ಣ
ಗೌರಿಬೀದನೂರು-ಎನ್.ಎಚ್.ಶಿವಶಂಕರ್ ರೆಡ್ಡಿ
ಬಾಗೇಪಲ್ಲಿ-ಎಸ್.ಎನ್.ಸುಬ್ಟಾರೆಡ್ಡಿ
ಚಿಕ್ಕಬಳ್ಳಾಪುರ-ಡಾ.ಕೆ.ಸುಧಾಕರ
ಶಿಡ್ಲಘಟ್ಟ-ವಿ.ಮುನಿಯಪ್ಪ
ಚಿಂತಾಮಣಿ-ವಾಣಿ ಕೃಷ್ಣರೆಡ್ಡಿ
ಶ್ರೀನಿವಾಸಪುರ-ಕೆ.ಆರ್.ರಮೇಶ್‌ಕುಮಾರ್
ಮುಳಬಾಗಿಲು-ಜಿ.ಮಂಜುನಾಥ್
ಕೋಲಾರ ಗೋಲ್ಡ್ ಫಿಲ್ಡ್(ಕೆಜಿಎಫ್)-ರೂಪಾ ಶಶಿಧರ್
ಬಂಗಾರಪೇಟೆ-ಕೆ.ಎಂ.ನಾರಾಯಣಸ್ವಾಮಿ
ಕೋಲಾರ- ಸೈಯದ್ ಜಮೀರ್ ಪಾಷಾ
ಮಾಲೂರು-ಕೆ.ವೈ.ನಂಜೇಗೌಡ
ಯಲಹಂಕ-ಎಂ.ಎನ್.ಗೋಪಾಲಕೃಷ್ಣ
ಕೆ.ಆರ್.ಪುರ- ಬೈರತ್ತಿ ಬಸವರಾಜು
ಬ್ಯಾಟರಾಯನಪುರ-ಕೃಷ್ಣಬೈರೇಗೌಡ
ಯಶವಂತಪುರ-ಎಸ್.ಟಿ.ಸೋಮಶೇಖರ್
ರಾಜರಾಜೇಶ್ವರಿ ನಗರ- ಮುನಿರತ್ನ
ದಾಸರಹಳ್ಳಿ-ಪಿ.ಎನ್.ಕೃಷ್ಣಮೂರ್ತಿ
ಮಹಾಲಕ್ಷ್ಮೀ ಲೇಔಟ್-ಎಚ್.ಎಸ್.ಮಂಜುನಾಥ್
ಮಲ್ಲೇಶ್ವರ- ಎಂ.ಆರ್.ಸೀತಾರಾಮ್
ಹೆಬ್ಟಾಳ-ಬೈರತಿ ಸುರೇಶ್
ಪುಲಿಕೇಶಿ ನಗರ-ಅಖಂಡಶ್ರೀನಿವಾಸ ಮೂರ್ತಿ
ಸರ್ವಜ್ಞ ನಗರ- ಕೆ.ಜೆ.ಜಾರ್ಜ್
ಸಿ.ವಿ.ರಾಮನ್ ನಗರ- ಸಂಪತ್ ರಾಜ್
ಶಿವಾಜಿನಗರ- ಆರ್.ರೋಷನ್ ಬೇಗ್
ಗಾಂಧಿನಗರ- ದಿನೇಶ್ ಗುಂಡೂರಾವ್
ರಾಜಾಜಿನಗರ- ಜಿ.ಪದ್ಮಾವತಿ
ಗೋವಿಂದರಾಜ ನಗರ- ಪ್ರಿಯಾಕೃಷ್ಣ
ವಿಜಯನಗರ-ಎಂ.ಕೃಷ್ಣಪ್ಪ
ಚಾಮರಾಜಪೇಟೆ-ಜಮೀರ್ ಅಹ್ಮದ್ ಖಾನ್
ಚಿಕ್ಕಪೇಟೆ-ಆರ್.ವಿ.ದೇವರಾಜ್
ಬಸವನಗುಡಿ-ಎಂ.ಬೊರೇಗೌಡ
ಪದ್ಮನಾಭನಗರ-ಬಿ.ಗುರಪ್ಪನಾಯ್ಡು
ಬಿಟಿಎಂ ಬಡಾವಣೆ-ರಾಮಲಿಂಗಾರೆಡ್ಡಿ
ಜಯನಗರ-ಸೌಮ್ಯರೆಡ್ಡಿ
ಮಹದೇವಪುರ-ಎ.ಸಿ.ಶ್ರೀನಿವಾಸ್
ಬೊಮ್ಮನಹಳ್ಳಿ-ಸುಷ್ಮಾ ರಾಜಗೋಪಾಲ ರೆಡ್ಡಿ
ಬೆಂಗಳೂರು ದಕ್ಷಿಣ-ಆರ್.ಕೆ.ರಮೇಶ್
ಆನೇಕಲ್-ಬಿ.ಶಿವಣ್ಣ
ಹೊಸಕೋಟೆ-ಎನ್.ನಾಗರಾಜ(ಎಂಟಿಬಿ ನಾಗರಾಜ)
ದೇವನಹಳ್ಳಿ-ವೆಂಕಟಸ್ವಾಮಿ
ದೊಡ್ಡಬಳ್ಳಾಪುರ-ಟಿ.ವೆಂಕಟರಮಣಯ್ಯ
ನೆಲಮಂಗಲ-ಆರ್.ನಾರಾಯಣಸ್ವಾಮಿ
ಮಾಗಡಿ-ಎಚ್.ಸಿ.ಬಾಲಕೃಷ್ಣ
ರಾಮನಗರ-ಎಚ್.ಎ.ಇಕ್ಬಾಲ್ ಹುಸೇನ್
ಕನಕಪುರ-ಡಿ.ಕೆ.ಶಿವಕುಮಾರ್
ಚನ್ನಪಟ್ಟಣ-ಎಚ್.ಎಂ.ರೇವಣ್ಣ
ಮಳವಳ್ಳಿ-ಪಿ.ಎಂ.ನರೇಂದ್ರಸ್ವಾಮಿ
ಮದ್ದೂರು-ಜಿ.ಎಂ.ಮಧು
ಮಂಡ್ಯ- ಅಂಬರೀಷ್
ಶ್ರಿರಂಗಪಟ್ಟಣ-ರಮೇಶ್ ಬಾಬು ಬಂಡಿಸಿದ್ದೇಗೌಡ
ನಾಗಮಂಗಲ-ಚಲವರಾಯ ಸ್ವಾಮಿ
ಕೆ.ಆರ್.ಪೇಟೆ-ಕೆ.ಬಿ.ಚಂದ್ರಶೇಖರ್
ಶ್ರವಣಬೆಳಗೊಳ-ಸಿ.ಎಸ್.ಪುಟ್ಟೇಗೌಡ
ಅರಸಿಕೆರೆ-ಜಿ.ಬಿ.ಶಶಿಧರ
ಬೇಲೂರು-ಕೀರ್ತಿನ ರುದ್ರಗೌಡ
ಹಾಸನ-ಮಹೇಶ್ ಎಚ್.ಕೆ.
ಹೊಳೆನರಸಿಪುರ-ಮಂಜೇಗೌಡ
ಅರಕಲಗೂಡು-ಎ.ಮಂಜು
ಸಕಲೇಶಪುರ-ಸಿದ್ದಯ್ಯ
ಬೆಳ್ತಂಗಡಿ-ಕೆ.ವಸಂತ್ ಬಂಗೇರ್
ಮೂಡಬಿದರೆ-ಕೆ.ಅಭಯ್ ಚಂದ್ರಜೈನ್
ಮಂಗಳೂರು ನಗರ ಉತ್ತರ-ಮೊಯುದ್ದೀನ್ ಬಾವಾ
ಮಂಗಳೂರು ನಗರ ದಕ್ಷಿಣ- ಜೆ.ಆರ್.ಲೋಬೊ
ಮಂಗಳೂರು- ಯು.ಟಿ.ಖಾದರ್
ಬಂಟ್ವಾಳ-ಬಿ.ರಮನಾಥ ರೈ
ಪುತ್ತೂರು-ಶಕುಂತಲ ಶೆಟ್ಟಿ
ಸುಳ್ಯ-ಡಾ.ಬಿ.ರಘು
ಮಡಿಕೇರಿ-ಎಚ್.ಎಸ್.ಚಂದ್ರಮೌಳಿ
ವಿರಾಜಪೇಟೆ-ಸಿ.ಎಸ್.ಅರುಣ್ ಮಾಚಯ್ಯ
ಪಿರಿಯಾಪಟ್ಟಣ-ಕೆ.ವೆಂಕಟೇಶ್
ಕೃಷ್ಣರಾಜ ನಗರ-ಡಾ.ರವಿಶಂಕರ್
ಹುಣಸೂರು-ಎಚ್.ಪಿ.ಮಂಜುನಾಥ್
ಎಚ್.ಡಿ.ಕೋಟೆ-ಅನಿಲ್ ಕುಮಾರ್ ಸಿ.
ನಂಜನಗೂಡು- ಕಳಲೆ ಕೇಶವ ಮೂರ್ತಿ
ಚಾಮುಂಡೇಶ್ವರಿ-ಸಿದ್ದರಾಮಯ್ಯ
ಕೃಷ್ಣರಾಜ-ಎಂ.ಕೆ.ಸೋಮಶೇಖರ್
ಚಾಮರಾಜ-ವಾಸು
ನರಸಿಂರಾಜ-ತನ್ವೀರ್ ಸೇs…
ವರುಣ-ಡಾ.ಯತೀಂದ್ರ
ಟಿ.ನರಸಿಪುರ-ಎಚ್.ಸಿ.ಮಹದೇವಪ್ಪ
ಹನೂರು-ಆರ್.ನರೇಂದ್ರ
ಕೊಳ್ಳೇಗಾಲ-ಎ.ಆರ್.ಕೃಷ್ಣಮೂರ್ತಿ
ಚಾಮರಾಜನಗರ-ಪುಟ್ಟರಂಗ ಶೆಟ್ಟಿ ಸಿ.
ಗುಂಡ್ಲುಪೇಟೆ-ಡಾ.ಎಂ.ಸಿ.ಮೋಹನ ಕುಮಾರಿ(ಗೀತಾ ಮಹದೇವ್ ಪ್ರಸಾದ್)