Advertisement

Maharashtra Assembly Elections: ಮಹಾ ಚುನಾವಣಾ ಕಣದಲ್ಲಿ 150 ಬಂಡಾಯ ಸ್ಪರ್ಧಿಗಳು!

11:07 PM Oct 30, 2024 | Team Udayavani |

ಮುಂಬೈ: ಮಹಾರಾಷ್ಟ್ರದ ಚುನಾವಣಾ ಅಖಾಡದಲ್ಲಿ ಕುಸ್ತಿಗಿಳಿದಿರುವ ಘಟಾನುಘಟಿ ಮೈತ್ರಿ ಕೂಟಗಳಾದ ಮಹಾ ವಿಕಾಸ ಅಘಾಡಿ ಮತ್ತು ಮಹಾಯುತಿಗೆ ಇದೀಗ ಸರಿ ಸುಮಾರು 150 ಬಂಡಾಯ ಅಭ್ಯರ್ಥಿಗಳಿಂದಲೂ ಸವಾಲು ಎದುರಾಗಿದೆ.

Advertisement

ಬಂಡಾಯ ಅಭ್ಯರ್ಥಿಗಳನ್ನೂ ಮನವೊಲಿಸಿ ನಾಮಪತ್ರ ಹಿಂಪಡೆವಂತೆ ಮಾಡಲು 4 ದಿನಗಳ ಗಡುವಷ್ಟೇ ಇದೆ. ನಾಮಪತ್ರ ವಾಪಸ್‌ಗೆ ನ.4 ಕೊನೆ ದಿನ. ಆಡಳಿತಾರೂಢ ಮಹಾಯುತಿ ಒಕ್ಕೂಟ (ಬಿಜೆಪಿ, ಶಿಂಧೆ ಶಿವಸೇನೆ, ಅಜಿತ್‌ ಎನ್‌ಸಿಪಿ) ದಿಂದ ಬಂಡಾಯವೆದ್ದು ಹೊರ ಬಂದಿರುವ ಬರೋಬ್ಬರಿ 80 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಮಹಾ ವಿಕಾಸ ಅಘಾಡಿ (ಕಾಂಗ್ರೆಸ್‌, ಉದ್ಧವ್‌ ಶಿವಸೇನೆ, ಶರದ್‌ ಎನ್‌ಸಿಪಿ) ಒಕ್ಕೂಟ ವಿರೋಧಿಸುವ ಬಂಡಾಯ ಅಭ್ಯರ್ಥಿಗಳೂ ಸ್ಪರ್ಧೆಗಿಳಿದಿದ್ದಾರೆ. ಬಂಡಾಯ ನಾಯಕರಲ್ಲಿ ಗೋಪಾಲ ಶೆಟ್ಟಿ, ಎನ್‌ಸಿಪಿ ಸಚಿವ ಛಗನ್‌ ಭುಜ್‌ಬಲ ಅವರ ಅಳಿಯ ಸಮೀರ್‌ ಪ್ರಮುಖರು.

ನ.6ಕ್ಕೆ ಗ್ಯಾರಂಟಿ ಬಿಡುಗಡೆ: ನ.6ರಂದು ಮುಂಬೈನಲ್ಲಿ ಮಹಾ ವಿಕಾಸ ಅಘಾಡಿಯ ಜಂಟಿ ರ್ಯಾಲಿ ನಡೆಯಲಿದೆ. ಅದೇ ದಿನ ಚುನಾವಣಾ ಗ್ಯಾರಂಟಿ ಬಿಡುಗಡೆ ಮಾಡಲಾಗುತ್ತದೆ ಎಂದು ಶಾಸಕ ನಾನಾ ಪಟೋಲೆ ತಿಳಿಸಿದ್ದಾರೆ.

ಮುಂಬೈ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿ, ಮಾಜಿ ಸಚಿವ ಶರದ್‌ ಪವಾರ್‌, ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ. ನ.20ರಂದು ನಡೆಯಲಿರುವ ಚುನಾವಣೆಯಲ್ಲಿ 7995 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Advertisement

ನವಾಬ್‌ ಮಲಿಕ್‌ ಪರ ಪ್ರಚಾರ ಇಲ್ಲ: ಬಿಜೆಪಿ
ಅಜಿತ್‌ ಎನ್‌ಸಿಪಿ ಬಣದಿಂದ ಕಣಕ್ಕಿಳಿದಿರುವ ಶಾಸಕ ನವಾಬ್‌ ಮಲ್ಲಿಕ್‌ ಪರವಾಗಿ ಬಿಜೆಪಿ ಪ್ರಚಾರ ಮಾಡುವುದಿಲ್ಲ. ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಮತ್ತು ಆತನ ಸಹಚರರ ವಿರುದ್ಧ ನಮ್ಮ ನಿಲುವು ಬದಲಾಗುವುದಿಲ್ಲ ಎಂದು ಬಿಜೆಪಿ ಮುಂಬೈ ಘಟಕದ ಮುಖ್ಯಸ್ಥ ಆಶೀಶ್‌ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿದ ಮಲಿಕ್‌ “ಬಿಜೆಪಿಗೆ ನನ್ನ ಬಗ್ಗೆ ಏನು ದ್ವೇಷವಿದೆಯೋ ತಿಳಿದಿಲ್ಲ. ಬಹುಶಃ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next