Advertisement

ಐದು ವರ್ಷಗಳಲ್ಲಿ ಯಡಿಯೂರಪ್ಪ ಹೊಸ ಸ್ಥಿರಾಸ್ತಿಯನ್ನೇ ಮಾಡಿಲ್ಲ

06:05 AM Apr 20, 2018 | |

ಶಿವಮೊಗ್ಗ: ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಕಳೆದ ಐದು ವರ್ಷದಲ್ಲಿ ಯಾವುದೇ ಹೊಸ ಸ್ಥಿರಾಸ್ತಿ ಖರೀದಿ ಮಾಡಿಲ್ಲ.

Advertisement

ಯಡಿಯೂರಪ್ಪ ಅವರು ಐದು ವರ್ಷಗಳ ಹಿಂದೆ ಅಂದರೆ 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿದ್ದಾಗ 5.65 ಕೋಟಿ ರೂ.ಮೌಲ್ಯದ ಆಸ್ತಿ ಹೊಂದಿದ್ದರು. ಈಗಲೂ ಅಷ್ಟೆ ಆಸ್ತಿ ಇದೆ. ಆದರೆ, ಅದರ ಮೌಲ್ಯ ಹೆಚ್ಚಾಗಿದೆ. 6.65 ಕೋಟಿ ಚರಾಸ್ತಿಯ ಮೌಲ್ಯವಾಗಿದ್ದರೆ, ಸ್ಥಿರಾಸ್ತಿಯ ಮೌಲ್ಯ 4.85 ಕೋಟಿ ರೂ. ಆಗಿದೆ. ಜತೆಗೆ, 2.69 ಕೆಜಿ ಬಂಗಾರ, 84.80 ಕೆಜಿ ಬೆಳ್ಳಿ, ಟಯೋಟಾ ಫಾಚ್ಯುìನರ್‌, ದ್ವಿಚಕ್ರ ವಾಹನ ಹೊಂದಿದ್ದಾರೆ. ಚನ್ನಳ್ಳಿ ಗ್ರಾಮದಲ್ಲಿ 13.21 ಎಕರೆ ಜಮೀನು, ಬೆಂಗಳೂರಿನ ಆರ್‌ ಎಂವಿ ನಗರದಲ್ಲಿ ಬಂಗಲೆ, ಶಿಕಾರಿಪುರ ಮಾಳೇರಕೇರಿಯಲ್ಲಿ ಮನೆ ಹೊಂದಿದ್ದಾರೆ.

ಶಿರಾಳಕೊಪ್ಪದಲ್ಲಿ 18.15 ಲಕ್ಷ ರೂ ಮೌಲ್ಯದ ನಿವೇಶನ, ಬೆಂಗಳೂರಿನ ಗೆದ್ದಲಹಳ್ಳಿಯಲ್ಲಿ 6 ಲಕ್ಷ ರೂ. ಮೌಲ್ಯದ ನಿವೇಶನ, ಶಿಕಾರಿಪುರದಲ್ಲಿ 68.78 ಲಕ್ಷ ರೂ. ಮೌಲ್ಯದ ಎರಡು ವಾಣಿಜ್ಯ ಕಟ್ಟಡ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next