Advertisement

ಅಗಲಿದ ಗಣ್ಯರಿಗೆ ವಿಧಾನಸಭೆಯಲ್ಲಿ ಸಂತಾಪ

11:41 PM Jul 12, 2019 | Lakshmi GovindaRaj |

ಬೆಂಗಳೂರು: ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌. ಶಿವಳ್ಳಿ, ಕೇಂದ್ರದ ಮಾಜಿ ಸಚಿವ ವಿ. ಧನಂಜಯ ಕುಮಾರ್‌, ಸಾಹಿತಿ ಗಿರೀಶ್‌ ಕಾರ್ನಾಡ್‌ ಸೇರಿ ಇತ್ತೀಚೆಗೆ ಅಗಲಿದ ಗಣ್ಯರಿಗೆ ವಿಧಾನ ಮಂಡಲದ ಎರಡೂ ಸದನಗಳಲ್ಲಿ ಸಂತಾಪ ಸೂಚಿಸಲಾಯಿತು.

Advertisement

ವಿಧಾನಸಭೆಯಲ್ಲಿ ಸಭಾಧ್ಯಕ್ಷ ರಮೇಶ್‌ ಕುಮಾರ್‌ ಸಂತಾಪ ಸೂಚನೆ ಮಂಡಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದರು. ಮೃತರ ಗೌರವಾರ್ಥ ಒಂದು ನಿಮಿಷ ಮೌನಾಚರಣೆ ನಡೆಸಲಾಯಿತು.

ಮಂಕಾಗಿ ಕುಳಿತಿದ್ದ ಕುಸುಮಾವತಿ: ಪತಿಯ ನಿಧನದ ನಂತರ ಚುನಾವಣೆಯಲ್ಲಿ ಗೆದ್ದು, ವಿಧಾನಸಭೆ ಕಲಾಪಕ್ಕೆ ಮೊದಲ ಬಾರಿಗೆ ಆಗಮಿಸಿ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಕುಸುಮಾವತಿ ಶಿವಳ್ಳಿ ತಮ್ಮ ಪತಿಯ ಬಗ್ಗೆ ಸಂತಾಪ ಸೂಚನೆಯ ಮೇಲೆ ನಾಯಕರು ಮಾತನಾಡುತ್ತಿರುವುದನ್ನು ಭಾವುಕರಾಗಿ ತದೇಕ ಚಿತ್ತದಿಂದ ಕೇಳುತ್ತಿದ್ದರು. ನಾಯಕರು ಶಿವಳ್ಳಿ ವ್ಯಕ್ತಿತ್ವದ ಬಗ್ಗೆ ಸದನದಲ್ಲಿ ಗುಣಗಾನ ಮಾಡುತ್ತಿದ್ದಾಗ ಕುಸುಮಾವತಿ ತಮ್ಮ ಪತಿಯನ್ನು ನೆನೆದು ಕಣ್ಣಂಚಲ್ಲಿ ನೀರು ತುಂಬಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next