Advertisement

ಗಣಿ ಇಲಾಖಾಧಿಕಾರಿಗಳಿಂದ ಕೋರೆಗಳಿಗೆ ದಾಳಿ

10:27 PM Feb 03, 2020 | Sriram |

ಕಾರ್ಕಳ: ಗಣಿ ಇಲಾಖಾಧಿಕಾರಿಗಳ ತಂಡ ಸೋಮವಾರ ಬೆಳಗ್ಗೆ ಕುಕ್ಕುಂದೂರು ಗ್ರಾಮದ ನಕ್ರೆ ಪಡ್ಯ ಎಂಬಲ್ಲಿಯ ಕೋರೆಗೆ ದಿಢೀರ್‌ ಆಗಿ ದಾಳಿ ನಡೆಸಿ ಕೋರೆ ಕಾರ್ಯಕ್ಕೆ ಬಳಸುತ್ತಿದ್ದ ಟ್ರ್ಯಾಕ್ಟರ್‌ ವಶಕ್ಕೆ ಪಡೆದಿದೆ.

Advertisement

ಬಳಿಕ ಕಂಪ್ರಸರ್‌-ಟ್ರ್ಯಾಕ್ಟರ್‌ ಅನ್ನು ಕಾರ್ಕಳ ಪೊಲೀಸ್‌ ಠಾಣೆಗೆ ಹಸ್ತಾಂತರಿಸಲಾಗಿದೆ. ಗಣಿ ಇಲಾಖೆ ಹಿರಿಯ ಭೂ ವಿಜ್ಞಾನಿ ರಾಂಜಿ ನಾಯಕ್‌ ನೇತೃತ್ವದ ತಂಡ ದಾಳಿ ನಡೆಸಿದ್ದು, ಭೂ ವಿಜ್ಞಾನಿಗಳಾದ ಗೌತಮ್‌ ಶಾಸಿŒ. ಮಹೇಶ್‌, ಸಂಧ್ಯಾ, ಕುಕ್ಕುಂದೂರು ಗ್ರಾಮ ಕರಣಿಕ ತಂಡದಲ್ಲಿದ್ದರು.

ಪಿಸಿಆರ್‌ ದಾಖಲು
ಕೋರೆ ದಾಳಿ ನಡೆಸಿದ ಗಣಿ ಅಧಿಕಾರಿಗಳು ಕಲ್ಲು ಒಡೆಯಲು ಬಳಸುತ್ತಿದ್ದ ಸಲಕರಣೆ ವಶಕ್ಕೆ ಪಡೆದು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿರುತ್ತಾರೆ.

ಲಾರಿ ವಶಕ್ಕೆ
ಮಧ್ಯಾಹ್ನ ಎರ್ಲಪ್ಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಜಾರ್ಕಳದ ಸರಕಾರಿ ಜಾಗದಲ್ಲಿ ನಡೆಯುತ್ತಿದ್ದ ಕೋರೆಗೆ ದಾಳಿ ನಡೆಸಿದ ಗಣಿ ಅಧಿಕಾರಿಗಳು ಕಲ್ಲು ತುಂಬಿದ ಲಾರಿ ವಶಕ್ಕೆ ಪಡೆದು ದೂರು ದಾಖಲಿಸಿಕೊಂಡಿರುತ್ತಾರೆ.

ಉದಯವಾಣಿ ವರದಿ
ಜ. 28ರಂದು ಉದಯವಾಣಿ ಅನಧಿಕೃತ ಕೋರೆ ಕುರಿತು ತಾಲೂಕಿನಾದ್ಯಂತ ಅನಧಿಕೃತ ಕಲ್ಲಿನ ಕೋರೆ ಶೀರ್ಷಿಕೆಯಲ್ಲಿ ವರದಿ ಪ್ರಕಟಿಸಿತ್ತು. ಅನಧಿಕೃತವಾಗಿ ಕೋರೆ ನಡೆಸುವುದು ಮಾತ್ರವಲ್ಲದೇ ವ್ಯಾಪಕವಾಗಿ ಸ್ಫೋಟಕ ಬಳಸಲಾಗುತ್ತಿರುವ ಬಗೆಗೆ ವರದಿಯಲ್ಲಿ ಉಲ್ಲೇಖೀಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next