Advertisement

Bangalore: ಪತ್ನಿಯ ಶೀಲ ಶಂಕಿಸಿ ನಡುರಸ್ತೆಯಲ್ಲೇ ಹಲ್ಲೆ

12:19 PM Feb 21, 2024 | Team Udayavani |

ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯನ್ನು ನಡುರಸ್ತೆಯಲ್ಲಿ ಅಟ್ಟಾಡಿಸಿ ಮಾರ ಕಾಸ್ತ್ರದಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿರುವ ಘಟನೆ ಜೀವನ್‌ಭೀಮಾನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಸಂಬಂಧ ಆರೋಪಿ ಪತಿಯನ್ನು ಬಂಧಿಸಲಾಗಿದೆ.

Advertisement

ಆರ್‌. ಟಿ.ನಗರ ನಿವಾಸಿ ನಿಗರ್‌ (28) ಹಲ್ಲೆಗೊಳಗಾದವರು. ಕೃತ್ಯ ಎಸ ಗಿದ ಆಕೆಯ ಪತಿ ಶೇಕ್‌ ಮುಜೀಬ್‌(35) ಎಂಬಾತನನ್ನು ಬಂಧಿಸಲಾ ಗಿದೆ. ಸೋಮವಾರ ರಾತ್ರಿ 7 ಗಂಟೆಗೆ ಜೀವನಭೀಮಾ ನಗರ ಮುರಗೇಶ ಪಾಳ್ಯದ ವಿಂಡ್‌ ಟನಲ್‌ ರಸ್ತೆಯಲ್ಲಿ ಘಟನೆ ನಡೆದಿದೆ.

ಏನಿದು ಘಟನೆ?: ಆರೋಪಿ ಶೇಕ್‌ ಮುಜೀಬ್‌ ಮತ್ತು ನಿಗರ್‌ 6 ವರ್ಷ ಹಿಂದೆ ವಿವಾಹವಾಗಿದ್ದರು. ಆರ್‌.ಟಿ.  ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿ ದ್ದರು. ವೃತ್ತಿಯಲ್ಲಿ ಚಾಲಕ ನಾಗಿರುವ ಶೇಕ್‌ ಮುಜೀಬ್‌ಗ, ಪತ್ನಿ ನಿಗರ್‌ಗೆ ಸಲೀಂ ಎಂಬಾತನ ಜತೆಗೆ ಅನೈತಿಕ ಸಂಬಂಧ ಇರುವ ಬಗ್ಗೆ ಅನುಮಾ ನವಿತ್ತು. ಈ ವಿಚಾರವಾಗಿ ದಂಪತಿ ನಡುವೆ ಪದೇ ಪದೆ ಮನೆಯಲ್ಲಿ ಗಲಾಟೆ ಆಗುತ್ತಿತ್ತು. ಅದರಿಂದ ಮನನೊಂದಿದ್ದ ನಿಗರ್‌ ಪತಿ ಯಿಂದ ಪ್ರತ್ಯೇಕಗೊಂಡು ಪೇಯಿಂಗ್‌ ಗೆಸ್ಟ್‌ನಲ್ಲಿ ವಾಸವಾ ಗಿದ್ದು, ಊಬರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದರು.

ನಿಗರ್‌ ಪ್ರತ್ಯೇಕವಾಗಿ ವಾಸವಾಗಿದ್ದರೂ ಶೇಕ್‌ ಮುಜೀಬ್‌ಗ ಆಕೆ ಮೇಲೆ ಕೋಪವಿತ್ತು. ಹೀಗಾಗಿ ನಿಗರ್‌ ಉಳಿದುಕೊಂಡಿದ್ದ ಪೇಯಿಂಗ್‌ ಗೆಸ್ಟ್‌ ಬಳಿ ಸೋಮ ವಾರ ಸಂಜೆ ಹುಡುಕಿಕೊಂಡು ಬಂದಿದ್ದ ಆರೋಪಿ, ಆಕೆ ಇನ್ನು ಪೇಯಿಂಗ್‌ ಗೆಸ್ಟ್‌ಗೆ ಬಂದಿಲ್ಲ ಎಂದು ತಿಳಿದು, ಸಮೀಪದಲ್ಲೇ ಕಾದುಕುಳಿತ್ತಿದ್ದ. ಸಂಜೆ 7 ಗಂಟೆಗೆ ಪತ್ನಿ ನಿಗರ್‌ ಪೇಯಿಂಗ್‌ ಗೆಸ್ಟ್‌ ಬಳಿ ಬರುವುದನ್ನು ಕಂಡ ಕೂಡಲೇ ಏಕಾಏಕಿ ಆಕೆಯ ಮೇಲೆ ಎರಗಿದ್ದಾನೆ. ಆಕೆ ತಪ್ಪಿಸಿಕೊಂಡು ರಸ್ತೆಯಲ್ಲಿ ಓಡು ವಾಗ ಅಟ್ಟಾಡಿಸಿ ಕೊಂಡು ಮಾರಕಾಸ್ತ್ರ ದಿಂದ ಮನಸೋಇಚ್ಛೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆ ಯನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿ ಸಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೈಬೆರಳು ಕತ್ತರಿಸಲು ಆಗದೇ 20ಕ್ಕೂ ಹೆಚ್ಚು ಕಡೆ ಹಲ್ಲೆ :

Advertisement

ದಂಪತಿ ನಡುವೆ ಗಲಾಟೆ ನಡೆಯುವಾಗ, ಪತ್ನಿ ನಿಗರ್‌ ನಾನು ದುಡಿಯುತ್ತಿದ್ದೇನೆ. ನನ್ನದೇ ಸಂಪಾದನೆಯಲ್ಲಿ ಬದುಕುತ್ತಿದ್ದೇನೆ ಎಂದು ಹೇಳಿದ್ದಳು ಎನ್ನಲಾಗಿದೆ. ಅದರಿಂದ ಆಕ್ರೋಶಗೊಂಡಿದ್ದ ಆರೋಪಿ ಆಕೆಯ ಕೈ ಬೆರಳುಗಳನ್ನು ಕತ್ತರಿಸಲು ನಿರ್ಧರಿಸಿದ್ದ. ಕೈ ಬೆರಳು ಇದ್ದರೆ ದುಡಿಯುತ್ತಾಳೆ. ಕೈ ಬೆರಳುಗಳೇ ಇಲ್ಲವಾದರೆ, ನಾನು ಹೇಳಿದ ಹಾಗೆ ಕೇಳಿಕೊಂಡು ಮನೆಯಲ್ಲೇ ಇರುತ್ತಾಳೆ ಎಂದು ಭಾವಿಸಿದ್ದ ಆರೋಪಿ, ಆಕೆಯ ಮೇಲೆ ಹಲ್ಲೆಗೆ ಮುಂದಾಗಿದ್ದ. ಆದರೆ, ಕೈ ಬೆರಳುಗಳ ಕತ್ತರಿಸಲು ಸಾಧ್ಯವಾಗದೆ, ಆಕೆಯ ತಲೆ ಮತ್ತು ದೇಹದ 20 ಕಡೆಗಳ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

 

 

Advertisement

Udayavani is now on Telegram. Click here to join our channel and stay updated with the latest news.

Next