Advertisement

ಆ್ಯಂಬುಲೆನ್ಸ್ ಒಳಗೆ ಚಿಕಿತ್ಸೆ ನೀಡುತ್ತಿದ್ದ ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಾಯಾಳು!

09:40 AM Nov 16, 2019 | Team Udayavani |

ಲಂಡನ್: ಅಪಘಾತದಲ್ಲಿ ಗಾಯಗೊಂಡವರು, ಹೊಡೆದಾಟದಲ್ಲಿ ಗಾಯಗೊಂಡು ತುರ್ತು ಚಿಕಿತ್ಸೆ ಪಡೆಯುವ ರೋಗಿಗಳು ನರ್ಸ್ ಗಳ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಲಿಝೈ ಸ್ಮಿತ್ ತಮಗಾದ ಕಹಿ ಅನುಭವನ್ನು ಬಹಿರಂಗಗೊಳಿಸಿರುವುದಾಗಿ ದ ಸನ್ ಪತ್ರಿಕೆ ವರದಿ ಮಾಡಿದೆ.

Advertisement

ಆ್ಯಂಬುಲೆನ್ಸ್ ನೊಳಗೆ ಗಾಯಗೊಂಡ ವ್ಯಕ್ತಿಗೆ ವೈದ್ಯಕೀಯ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಹುಡುಕಾಡುತ್ತಿದ್ದಾಗ ರೋಗಿ ಹಿಂಬದಿಯಿಂದ ಆಕೆಯನ್ನು ಹಿಡಿದುಕೊಂಡು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಆರೋಪಿಸಿದ್ದಾರೆ.

ನಾನು ಮೆಡಿಕಲ್ ಕಿಟ್ ತೆಗೆಯಲು ಕೆಳಗೆ ಬಗ್ಗಿದಾಗ ಗಾಯಗೊಂಡ ವ್ಯಕ್ತಿ ನನ್ನ ಹಿಂಭಾಗವನ್ನು ಬಲವಾಗಿ ಹಿಡಿದುಕೊಂಡು ಬಿಟ್ಟಿದ್ದ. ನಾನು ಆಗ ಆಘಾತಕ್ಕೊಳಗಾಗಿಬಿಟ್ಟೆ, ಆದರೆ ಧೈರ್ಯ ಕಳೆದುಕೊಳ್ಳದೆ ಕೂಡಲೇ ಹಿಂದಕ್ಕೆ ಸರಿದೆ ಎಂದ ಲಿಝೈ ಈ ಬಗ್ಗೆ ಹೆಚ್ಚಿನ ವಿವರ ನೀಡಲು ಅವರು ನಿರಾಕರಿಸಿದ್ದಾರೆ.

ಇತ್ತೀಚೆಗೆ ಯುನೈಟೆಡ್ ಕಿಂಗ್ ಡಮ್ ನಲ್ಲಿ ಆ್ಯಂಬುಲೆನ್ಸ್ ನಲ್ಲಿ ತುರ್ತು ಚಿಕಿತ್ಸೆ ನೀಡುವ ವೈದ್ಯಕೀಯ ಸಹಾಯಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯದ ಪ್ರಮಾಣ ಹೆಚ್ಚಳವಾಗಿದೆ ಎಂದು ವರದಿ ವಿವರಿಸಿದೆ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವವರ ಮೇಲೆ ಹಿಂಸಾತ್ಮಕ ರೀತಿಯಲ್ಲಿ ದೌರ್ಜನ್ಯ ನಡೆಯುತ್ತಿರುವುದು ಕಳವಳ ಎಂದು ವರದಿ ತಿಳಿಸಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next