Advertisement

Bangalore: ಲಿವ್‌ಇನ್‌ ರಿಲೇಶನ್‌ಶಿಪ್‌ ಸಮಸ್ಯೆ ಇತ್ಯರ್ಥ ನೆಪದಲ್ಲಿ ಲೈಂಗಿಕ ದೌರ್ಜನ್ಯ  

03:05 PM Jan 23, 2024 | Team Udayavani |

ಬೆಂಗಳೂರು: ಲಿವ್‌ ಇನ್‌ ರಿಲೇಶನ್‌ಶಿಪ್‌ನಿಂದ ಪ್ರತ್ಯೇಕವಾದ ನಂತರ ಸಮಸ್ಯೆ ಬಗೆಹರಿಸಿಕೊಳ್ಳಲು ಕರೆಸಿಯಿಸಿದ್ದ ಸ್ನೇಹಿತ ಲೈಂಗಿಕ ಕಿರುಕುಳ ಕೊಟ್ಟಿದ್ದಾನೆ ಎಂದು ಆರೋಪಿಸಿ ಯುವತಿಯೊಬ್ಬಳು ಹೈಗ್ರೌಂಡ್ಸ್‌ ಠಾಣೆ ಪೊಲೀಸರಿಗೆ ದೂರು ನೀಡಿದ್ದಾಳೆ.

Advertisement

ಸದ್ದುಗುಂಟೆಪಾಳ್ಯದ 22 ವರ್ಷದ ಯುವತಿ ಕೊಟ್ಟ ದೂರಿನ ಆಧಾರದ ಮೇಲೆ ವಸಂತನಗರದ ನಿವಾಸಿ ದಿಗ್ವಿಜಯಸಿಂಗ್‌ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ದೂರುದಾರ ಯುವತಿಯು 2022 ಸೆಪ್ಟೆಂಬರ್‌ನಿಂದ ದಿಗ್ವಿಜಯ್‌ಸಿಂಗ್‌ ಜೊತೆಗೆ ಲಿವ್‌ ಇನ್‌ ರಿಲೇಶನ್‌ಶಿಪ್‌ನಲ್ಲಿದ್ದಳು. ನಂತರ ಇಬ್ಬರ ನಡುವೆ ಮನಸ್ತಾಪ ಬಂದು ದೂರವಾಗಿದ್ದಳು. ಜ.19ರಂದು ರಾತ್ರಿ ದಿಗ್ವಿಜಯ್‌ಸಿಂಗ್‌ ದೂರುದಾರ ಯುವತಿಗೆ ಕರೆ ಮಾಡಿ ನಮ್ಮ ನಡುವಿನ ಮನಸ್ತಾಪ ಬಗೆಹರಿಸೋಣ ಎಂದು ಹೇಳಿ ವಸಂತನಗರದಲ್ಲಿರುವ ಮನೆಗೆ ಕರೆಯಿಸಿಕೊಂಡಿದ್ದ. ಇಬ್ಬರೂ ಮನಸ್ತಾಪದ ಬಗ್ಗೆ ಮಾತನಾಡುತ್ತಿದ್ದಾಗ ಸಿಂಗ್‌ ಯುವತಿಗೆ ಹಲ್ಲೆ ನಡೆಸಿ ಕಚ್ಚಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿದ್ದಾಳೆ.

 

Advertisement

Udayavani is now on Telegram. Click here to join our channel and stay updated with the latest news.

Next