Advertisement

Arrested: ರೌಡಿಶೀಟರ್‌ ಮೇಲೆ ಹಲ್ಲೆ; 9 ಮಂದಿ ಸೆರೆ

11:54 AM Aug 25, 2024 | Team Udayavani |

ಬೆಂಗಳೂರು: ಇತ್ತೀಚೆಗೆ ರೌಡಿಶೀಟರ್‌ ಮೇಲೆ ಹಲ್ಲೆ ನಡೆಸಿದ್ದ 9 ಮಂದಿ ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಡಿಗೇಹಳ್ಳಿ ನಿವಾಸಿಗಳಾದ ನಂದ, ಕಿರಣ್‌, ಶಿವು, ಮಾರುತಿ, ಸುನೀಲ್‌, ಶರತ್‌, ರಿತು ಹಾಗೂ ಮೂರ್ತಿ ಎಂಬುವ ರನ್ನು ಬಂಧಿಸಲಾಗಿದೆ.

Advertisement

ಆರೋಪಿಗಳೆಲ್ಲರೂ 25 ರಿಂದ 32 ವಯಸ್ಸಿನವರಾಗಿದ್ದಾರೆ. ಆ.22ರಂದು ಮುಂಜಾನೆ 5 ಗಂಟೆ ಸುಮಾರಿಗೆ ಮನೆ ಮುಂದೆ ವಾಯುವಿಹಾರ ಮಾಡುತ್ತಿದ್ದ ವಿಜಯ್‌ಕುಮಾರ್‌ ಮೇಲೆ ಮಾರಕಾಸ್ತ್ರ ಗಳಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ಆರೋಪಿ ಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಈ ಹಿಂದೆ ಆರೋಪಿ ಮೂರ್ತಿ ಬಳಿ ವಿಜಯ್‌ ಕುಮಾರ್‌ 5 ಸಾವಿರ ರೂ. ಸಾಲ ಪಡೆದುಕೊಂಡಿದ್ದ. ಇದುವರೆಗೂ ಹಣ ವಾಪಸ್‌ ಕೊಟ್ಟಿರಲಿಲ್ಲ. ಈ ಮಧ್ಯೆ ಕೆಲ ದಿನಗಳ ಹಿಂದೆ ಏರಿಯಾದಲ್ಲಿ ಅಣ್ಣಮ್ಮ ದೇವಿಯನ್ನು ಕೂರಿಸಲಾ ಗಿತ್ತು. ಆಗ ಮೂರ್ತಿ, ಎಲ್ಲರ ಎದುರು 5 ಸಾವಿರ ರೂ. ವಾಪಸ್‌ ಕೊಡುವಂತೆ ವಿಜಯ್‌ಗೆ ಕೇಳಿದ್ದಾನೆ. ಅದಕ್ಕೆ ಕೋಪಗೊಂಡ ವಿಜಯ್‌, ಮೂರ್ತಿ ಜತೆ ಜಗಳ ಮಾಡಿ ಕೊಂಡಿದ್ದ. ಜತೆಗೆ ಕೊಡಿಗೇಹಳ್ಳಿ ಠಾಣೆಯ ರೌಡಿಶೀಟರ್‌ ಆಗಿರುವ ವಿಜಯ್‌ ಕುಮಾರ್‌ ಏರಿಯಾದಲ್ಲಿ ತನ್ನ ಮಾತೆ ನಡೆಯಬೇಕೆಂದು ಯುವಕರಿಗೆ ಎಚ್ಚರಿಕೆ ನೀಡುತ್ತಿದ್ದ. ಈ ಎಲ್ಲಾ ವಿಚಾರಗಳಿಂದ ಬೇಸತ್ತಿದ್ದ ಆರೋಪಿಗಳು ದಾಳಿ ನಡೆಸಿ, ಪರಾರಿಯಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.