ಸಿದ್ದಾಪುರ: ಪಡೆದುಕೊಂಡಿದ್ದ ಸಾಲದ 10 ಸಾವಿರ ರೂ. ಮೊತ್ತದಲ್ಲಿ ಬಾಕಿ ಇರುವ 2 ಸಾವಿರ ರೂ. ಹಣಕ್ಕಾಗಿ ಉಳ್ಳೂರು-74 ಗ್ರಾಮದ ಸುರೇಶ ಶೆಟ್ಟಿ ಅವರು ಮನೆಯ ಒಳಗೆ ಆಕ್ರಮ ಪ್ರವೇಶ ಮಾಡಿ, ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಹೋಗಲು ಯತ್ನಿಸಿದರು. ಆ ಸಂದರ್ಭ ಹಣ ಹಿಂದಿರುಗಿಸುದ್ದಾಗಿ ಹೇಳಿದರೂ ಕೇಳದೆ ಕೈಯಿಂದ ಹಲ್ಲೆ ನಡೆಸಿದರು ಎಂದು ಕುಷ್ಠ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕುಷ್ಠ ನಾಯ್ಕ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement