Advertisement

ನಗರಸಭಾ ಸದಸ್ಯನಿಂದ ಅಧಿಕಾರಿಗೆ ಹಲ್ಲೆ

10:31 AM Jul 17, 2019 | Team Udayavani |

ಉಡುಪಿ: ನಗರ ಸಭೆಯ ಸಹಾಯಕ ಆರೋಗ್ಯ ನಿರೀಕ್ಷಕ ಎ.ಜೆ.ಪ್ರಸನ್ನ ಕುಮಾರ್‌(30) ಅವರಿಗೆ ವಡಭಾಂಡೇಶ್ವರ ವಾರ್ಡ್‌ ಸದಸ್ಯ ಯೋಗೀಶ್‌ ಸಾಲ್ಯಾನ್‌ ಅವರು ಜು.16ರಂದು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.

Advertisement

ಬೆಳಗ್ಗೆ 11.15ರ ವೇಳೆಗೆ ನಗರಸಭೆ ಕಚೇರಿಗೆ ಆಗಮಿಸಿದ ಯೋಗೀಶ್‌ ಸಾಲ್ಯಾನ್‌ ಏಕಾಏಕಿ ಕೈ ಮುಷ್ಠಿಯಿಂದ ಬಲಕಣ್ಣಿಗೆ ಹೊಡೆದಿ ದ್ದಾರೆ ಎಂದು ಪ್ರಸನ್ನ ದೂರಿನಲ್ಲಿ ತಿಳಿಸಿದ್ದಾರೆ.

ಒಳಚರಂಡಿ ವಿಚಾರ

ವಡಭಾಂಡೇಶ್ವರದಲ್ಲಿ ಕೆಲವು ದಿನಗಳಿಂದ ಒಳಚರಂಡಿ ಸಮಸ್ಯೆ ಇದ್ದು, ಇದೇ ವಿಚಾರವಾಗಿ ಕೆಲವು ದಿನ ಗಳಿಂದ ಮೊಬೈಲ್ನಲ್ಲಿ ಮಾತುಕತೆ ಯಾಗಿ ಮಂಗಳವಾರ ಇದು ಹಲ್ಲೆ ಹಂತಕ್ಕೆ ತಲುಪಿದೆ ಎನ್ನಲಾಗಿದೆ.

‘ನಾನು ಇನ್ನೊಂದು ಕಡೆ ಕಾರ್ಮಿಕ ರಿಂದ ಕೆಲಸ ಮಾಡಿಸುತ್ತಿದ್ದಾಗ ಯೋಗೀಶ್‌ ಸಾಲ್ಯಾನ್‌ ಕರೆ ಮಾಡಿ ದ್ದರು. ನಾನು ಕಚೇರಿಗೆ ಬರುತ್ತೇನೆ ಎಂದು ಹೇಳಿ ಕಚೇರಿಗೆ ಬಂದೆ. ಅವರು ಕಚೇರಿಗೆ ಬಂದು ಏಕಾಏಕಿ ಹಲ್ಲೆ ನಡೆಸಿದ್ದಾರೆ’ ಎಂದು ಪ್ರಸನ್ನ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿ ಹಲ್ಲೆ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿರುವ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪ್ರಸನ್ನ ಕುಮಾರ್‌ ಅವರ ಬಲಕಣ್ಣಿಗೆ ಪೆಟ್ಟು ಬಿದ್ದಿದ್ದು, ಅವರು ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ಖಂಡನೆ

ಆಸ್ಪತ್ರೆಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿ ಸಾಂತ್ವನ ಹೇಳಿ ಘಟನೆಯನ್ನು ಖಂಡಿಸಿದರು. ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಅವರು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಎಸ್‌ಪಿ ಜತೆ ಮಾತ ನಾಡಿರುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್‌ ನಿಯೋಗವೊಂದು ಎಸ್‌ಪಿ ಅವರಿಗೆ ಮನವಿ ಸಲ್ಲಿಸಿದೆ.

‘ಇಂಥ ಘಟನೆ ಖಂಡನೀಯ. ಯಾವುದೇ ಕಾರಣಕ್ಕೂ ಸಮರ್ಥಿಸ ಲಾಗದು. ಬಿಜೆಪಿಯು ಅಧಿಕಾರಿ ಪರವಾಗಿರುತ್ತದೆ. ಅವಶ್ಯವಿದ್ದರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು. ನಗರಸಭಾ ಸದಸ್ಯನ ವಿರುದ್ಧ ಪಕ್ಷ ಕ್ರಮ ಕೈಗೊಳ್ಳ ಲಿದೆ’ ಎಂದು ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ಜಿಲ್ಲಾ ಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next