ಹೊಳೆಹೊನ್ನೂರು: ಪಟ್ಟಣ ಠಾಣೆಯಲ್ಲಿ ಅರಕೆರೆ ಪವನ್ ಎಂಬವನ ಮೇಲೆ ಹಲ್ಲೆ ನಡೆದಿದೆ ಎಂದು ಎಫ್ಐಆರ್ ದಾಖಲಾಗಿದೆ.
ಸಮೀಪದ ಅರಕೆರೆ ಗ್ರಾಮದ ಯುವಕ ಪವನ್ ಕಳೆದ ಕೆಲವು ವರ್ಷಗಳಿಂದ ನಾಗರಾಜ್ ಪಾಟೇಲ್ ರವರ ಮಗಳಾದ ರಂಜಿತಾ (ಹೆಸರು ಬದಲಾವಣೆ ಮಾಡಲಾಗಿದೆ) ಎಂಬವರನ್ನು ಪ್ರೀತಿಸುತ್ತಿದ್ದು, ಕಳೆದ ಕೆಲವು ತಿಂಗಳ ಹಿಂದೆ ಮನೆಯವರಿಗೆಲ್ಲ ಗೊತ್ತಾಗಿ ಇಬ್ಬರು ಪರಸ್ಪರ ದೂರವಾಗಿದ್ದರು.
ಆ.25ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಗ್ರಾಮದ ಗಂಗಪ್ಪ ಹೊಟೇಲ್ ಬಳಿ ಪವನ್ ಸ್ನೇಹಿತರಾದ ದರ್ಶನ್, ಸಂಪತ್ ನೊಂದಿಗೆ ಬೈಕ್ ಹೋಗುತ್ತಿದ್ದಾಗ ನಂದೀಶ್, ಸಂದೀಪ ಹಾಗೂ ವಿವೇಕ್ ಬೈಕ್ ಅಡ್ಡಗಟ್ಟಿ ನಿಲ್ಲಿಸಿ, ಏನೂ ರಂಜಿತಾಳನ್ನು ಪ್ರೀತಿಸುತ್ತೀಯ ಎಂದು ಬೆದರಿಕೆ ಹಾಕಿದ್ದಾರೆ.
ನಂತರ ರಂಜಿತಾಳ ಮನೆಗೆ ಕರೆದುಕೊಂಡು ಹೋಗಿ ಮುಂಬಾಗಿಲ ಚಿಲಕ ಹಾಕಿ ಸ್ನೇಹಿತರಾದ ದರ್ಶನ್ ಹಾಗೂ ಸಂಪತ್ ಬಿಡಿಸಿದರೂ ಬಿಡದ ಅವರು ಮನೆಯ ಹಾಲ್ ನಲ್ಲಿ ನಂದೀಶ್, ಸಂದೀಪ, ವಿವೇಕ್ ಹಾಗೂ ಹುಡುಗಿಯ ತಂದೆ ನಾಗರಾಜ್ ಪಾಟೇಲ್ ಸೇರಿಕೊಂಡು ದೊಣ್ಣೆಯಿಂದ ಮೈ-ಕೈಗೆ, ಹಾಗೂ ಬೆನ್ನಿಗೆ ಹೊಡೆದಿದ್ದಾರೆ.
ನಂತರ ಬಂದ ಮಹೇಂದ್ರ ಹಾಗೂ ಸ್ವರೂಪ ಎಂಬವರು ಸಹ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾರೆ ಎಂದು ನಂದೀಶ್, ಸಂದೀಪ, ವಿವೇಕ್, ನಾಗರಾಜ್ ಪಾಟೇಲ್, ಮಹೇಂದ್ರ, ಸ್ವರೂಪ್ ಹುಡಿಗಿಯ ತಾಯಿ ಅವಾಚ್ಯಗಳಿಂದ ನಿಂದಿಸಿದ್ದಾಳೆಂದು ಎಫ್ ಐಆರ್ ದಾಖಲಾಗಿದೆ.
ಪವನ್ ನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.