(26), ಮತ್ತು ಮೊಯಿದೀನ್ ಆದಿಲ್(20)ನನ್ನು ಪಣಂಬೂರು ಸಿಐ ರಫೀಕ್ ಹಾಗೂ ಸಿಬಂದಿ ಮತ್ತು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ, ಬಜಪೆ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಕೊಲೆಯತ್ನ ಕೃತ್ಯಕ್ಕೆ ಬಳಸಿದ ಕಾರು, ಹಾಗೂ ಕದ್ದ 7 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಶುಕ್ರವಾರ ರಾತ್ರಿ ಕುದುರೆಮುಖ ಕಂಪೆನಿ ಬಳಿ ಇರುವ ವೃತ್ತ ಸಮೀಪ ತಪಾಸಣೆ ನಿರತ ಪೊಲೀಸರನ್ನು ಕಂಡು ಸುರತ್ಕಲ್ ಕಡೆ ಬೈಕ್‌ನಲ್ಲಿದ್ದ ಹೋಗುತ್ತಿದ್ದ ಆರೋಪಿಗಳು ಪರಾರಿಯಾಗಲು ಯತ್ನಿಸಿದಾಗ ಬಂಧಿ ಸಲಾಯಿತು. ಬಂಟ್ವಾಳ, ಮಂಗಳೂರು ನಗರ ಉತ್ತರ, ದಕ್ಷಿಣ, ಸುರತ್ಕಲ್ ಠಾಣೆಗಳಲ್ಲಿ ಒಟ್ಟು 7 ಪ್ರಕರಣ ದಾಖಲಾಗಿದ್ದು 25,000 ರೂ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪಣಂಬೂರು 3, ಮಂಗಳೂರು ದಕ್ಷಿಣ 10, ಸುರತ್ಕಲ್ 2, ಬಕೆ 2, ಮಂಗಳೂರು ಉತ್ತರ 3 ಹೀಗೆ 20ಕ್ಕೂ ಮಿಕ್ಕಿ ಕೇಸು ದಾಖಲಾಗಿದ್ದು ಇದರಲ್ಲಿ 1 ತನಿಖೆ, 7 ಖುಲಾಸೆ, 1ರಲ್ಲಿ ಶಿಕ್ಷೆ, 11 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ. ತಲೆ ಮರೆಸಿಕೊಂಡ ಪರಿಣಾಮ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.