Advertisement
ಘಟನೆ ವಿವರ :ಅಸ್ಸಾಂ ನ ನಾಗೌನ್ ಜಿಲ್ಲೆಯಲ್ಲಿರುವ ದೇವಸ್ಥಾನವೊಂದರಲ್ಲಿ ಸೆಪ್ಟೆಂಬರ್ 12ರಂದು ಐದು ಮಂದಿಯ ತಂಡವೊಂದು ಇಲ್ಲಿನ ದೇವಸ್ಥಾನದಲ್ಲಿ ಮಾದಕ ವಸ್ತು ಸೇವನೆಯಲ್ಲಿ ತೊಡಗಿದ್ದರು ಈ ವೇಳೆ ಯಾರೋ ಅಕ್ರಮ ಚಟುವಟಿಕೆಯಲ್ಲಿ ಇರುವ ವಿಚಾರವನ್ನು ಪೊಲೀಸರಿಗೆ ತಿಳಿಸಿದ್ದಾರೆ, ಪೊಲೀಸರು ಮಾಹಿತಿ ತಿಳಿಯುತ್ತಿದ್ದಂತೆ ದೇವಸ್ಥಾನದ ಬಳಿಗೆ ತಂಡದೊಂದಿಗೆ ಆಗಮಿಸಿದ್ದಾರೆ ಆದರೆ ಇದನ್ನು ತಿಳಿದ ಯುವಕರ ತಂಡ ಪೊಲೀಸರಿಂದ ತಮ್ಮನ್ನು ರಕ್ಷಣೆ ಮಾಡಿಕೊಳ್ಳಲು ಅಲ್ಲಿಂದ ಕಾಲ್ಕಿತ್ತಿದ್ದಾರೆ, ಆದರೆ ಬೆನ್ನುಬಿಡದ ಪೊಲೀಸರು ಯುವಕ ಬೆನ್ನತ್ತಿದ್ದಾರೆ ಅಷ್ಟರಲ್ಲೇ ಯುವಕರಿಗೆ ಬದಿಯಲ್ಲಿ ನದಿಯೊಂದು ಕಂಡಿದೆ ತಮ್ಮ ರಕ್ಷಣೆಗಾಗಿ ಯುವಕರು ನದಿಗೆ ಜಿಗಿದಿದ್ದಾರೆ, ಆದರೆ ಐದು ಮಂದಿ ನದಿಗೆ ಜಿಗಿದರೂ ನದಿ ದಾಟಿದ್ದು ಮಾತ್ರ ನಾಲ್ಕೇ ಮಂದಿ ದೇಬಶಿಸ್ ದಾಸ್ ಎಂಬ ಯುವಕ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ, ಆದರೆ ಈ ನಾಲ್ಕು ಮಂದಿಗೆ ನಾಪತ್ತೆಯಾದ ದೇಬಶಿಸ್ ದಾಸ್ ನದಿಗೆ ಜಿಗಿದಿದ್ದಾನಾ ಇಲ್ಲವೋ ಎಂಬ ಅನುಮಾನ ಕಾಡುತಿತ್ತು, ಮರುದಿನ ಬೆಳಿಗ್ಗೆ ಆತನ ಹುಡುಕಾಟ ನಡೆದರೂ ಆತನ ಪತ್ತೆಯಾಗಿಲ್ಲ ಆದರೆ ಸೆಪ್ಟೆಂಬರ್ 14 ರಂದು ರಕ್ಷಣಾ ತಂಡವನ್ನು ಕರೆಸಿದ ಪೊಲೀಸರು ಅಸ್ಸಾಂ ನ ನಿಷಾರಿ ನದಿಯಲ್ಲಿ ಹುಡುಕಾಟ ನಡೆಸಿ ಮೃತದೇಹವನ್ನು ಮೇಲಕ್ಕೆತ್ತಿದ್ದಾರೆ.
Related Articles
Advertisement
ಪೊಲೀಸರು ಇದನ್ನು ಸಹಜ ಸಾವು ಎಂದು ಪ್ರಕರಣ ದಾಖಲಿಸಿಕೊಂಡರೆ ಗ್ರಾಮಸ್ಥರು ಇದರ ತನಿಖೆ ನಡೆಸಬೇಕು ಪೊಲೀಸರು ಯುವಕರಿಗೆ ಹಲ್ಲೆ ನಡೆಸಿದ್ದಾರೆ ಹಾಗಾಗಿ ಯುವಕನಿಗೆ ನದಿಯಲ್ಲಿ ಈಜಿ ದಡ ಸೇರಲು ಸಾಧ್ಯವಾಗಲಿಲ್ಲ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ.
ಏತನ್ಮಧ್ಯೆ, ಘಟನೆಯ ಬಗ್ಗೆ ಜಿಲ್ಲಾಡಳಿತ ತನಿಖೆ ನಡೆಸಬೇಕೆಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ದೇವಾಲಯದ ಒಳಗೆ ಯುವಕರನ್ನು ಪೊಲೀಸರ ತಂಡ ಥಳಿಸಿದೆ ಎಂದು ಸ್ಥಳೀಯ ನಿವಾಸಿ ಪಬನ್ ಹಜರಿಕಾ ಹೇಳಿದ್ದಾನೆ.