Advertisement
ಇದನ್ನೂ ಓದಿ:Kadaba: ನಾಪತ್ತೆಯಾಗಿದ್ದ ವ್ಯಕ್ತಿ ಅಸ್ವಸ್ಥರಾಗಿ ಪತ್ತೆ; ಮಂಗಳೂರಿನ ಆಸ್ಪತ್ರೆಯಲ್ಲಿ ಮೃತ್ಯು
Related Articles
Advertisement
ಮಗುವಿನ ಶವವನ್ನು ಪ್ಯಾಕ್ ಮಾಡಿ ಕೊಟ್ಟಿದ್ದು, ನಂತರ ನಾವು ಶವ ಸಂಸ್ಕಾರ ಮಾಡಲು ಸ್ಮಶಾನಕ್ಕೆ ತೆರಳಿದ್ದೇವು. ನಾವು ಸಿಲ್ಚಾರ್ ನ ಸ್ಮಶಾನಕ್ಕೆ ಹೋಗಿ ಅಂತಿಮ ವಿಧಿವಿಧಾನ ನಡೆಸಲು ಪ್ಯಾಕ್ ಅನ್ನು ತೆರೆದಾಗ…ನನ್ನ ಮಗು ಅಳಲು ಪ್ರಾರಂಭಿಸಿತ್ತು. ಕೂಡಲೇ ಮಗುವನ್ನು ಆಸ್ಪತ್ರೆಗೆ ತಂದು ದಾಖಲಿಸಿದ್ದು, ಇದೀಗ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ದಾಸ್ ವಿವರಿಸಿದ್ದಾರೆ.
ಈ ವಿಷಯ ಹಬ್ಬುತ್ತಿದ್ದಂತೆಯೇ ಸಿಲ್ಚಾರ್ ನ ಖಾಸಗಿ ಆಸ್ಪತ್ರೆಯ ವಿರುದ್ಧ ಪ್ರತಿಭಟನೆ ನಡೆಸಿ, ಬೇಜವಾಬ್ದಾರಿ ವೈದ್ಯರು ಮತ್ತು ಸಿಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ. ನಿರ್ಲಕ್ಷ್ಯಕದ ವಿರುದ್ಧ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ಎಫ್ ಐಆರ್ ದಾಖಲಾಗಿರುವುದಾಗಿ ವರದಿ ತಿಳಿಸಿದೆ.