Advertisement

ಅಸ್ಸಾಂ ಜನರ ನಿದ್ದೆಗೆಡಿಸಿದ್ದ ಆನೆ “ಬಿನ್‌ ಲಾದನ್‌’ಇನ್ನಿಲ್ಲ

09:56 AM Nov 18, 2019 | Team Udayavani |

ಗುವಾಹಟಿ: ಮದವೇರಿ ದಾಂದಲೆ ಎಬ್ಬಿಸಿ, ಸ್ಥಳೀಯರ ಆತಂಕಕ್ಕೆ ಕಾರಣವಾಗಿ, ಕೊನೆಗೂ ಸೆರೆಸಿಕ್ಕಿದ್ದ ಅಸ್ಸಾಂನ ಆನೆ “ಬಿನ್‌ ಲಾದನ್‌’ ಭಾನುವಾರ ಬೆಳಗ್ಗೆ ಕೊನೆಯುಸಿರೆಳೆದಿದೆ. ನ.11ರಂದು ಗೋಲ್‌ಪಾರಾ ಜಿಲ್ಲೆಯಲ್ಲಿ ಅರಿವಳಿಕೆ ಚುಚ್ಚುಮದ್ದು ನೀಡಿ, ಬಿನ್‌ ಲಾದನ್‌ ಹೆಸರಿನ 35 ವರ್ಷದ ಸಲಗವನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದಿದ್ದರು. ನಂತರ ಅದನ್ನು ಒರಾಂಗ್‌ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸಲಾಗಿತ್ತು.

Advertisement

ಸೆರೆಸಿಕ್ಕ ನಂತರ ಸ್ಥಳೀಯರು ಈ ಆನೆಗೆ “ಕೃಷ್ಣ’ ಎಂದು ಹೆಸರಿಟ್ಟಿದ್ದರು. ಆರಂಭದಲ್ಲಿ ಆನೆಯನ್ನು ದಟ್ಟಾರಣ್ಯದಲ್ಲಿ ಬಿಡಲು ಯೋಚಿಸಲಾಗಿತ್ತು. ಆದರೆ, ಸ್ಥಳೀಯರ ವಿರೋಧದ ಹಿನ್ನೆಲೆಯಲ್ಲಿ ಅದನ್ನು ವಶದಲ್ಲಿರಿಸಿಕೊಳ್ಳಲು ನಿರ್ಧರಿಸಲಾಯಿತು. 6-7 ವರ್ಷದ ಆನೆಗಳನ್ನಷ್ಟೇ ಸಾಮಾನ್ಯವಾಗಿ ವಶದಲ್ಲಿ ಇರಿಸಲಾಗುತ್ತದೆ. ಇದಕ್ಕೆ 35 ವರ್ಷಗಳಾಗಿರುವ ಕಾರಣ ಸೆರೆಯಲ್ಲಿಡುವ ನಿರ್ಧಾರದ ಕುರಿತು ವನ್ಯಜೀವಿ ಹೋರಾಟಗಾರರು ತೀವ್ರ ಕಳವಳ ವ್ಯಕ್ತಪಡಿಸಿದ್ದರು.

ಇದೀಗ ಭಾನುವಾರ ಬೆಳಗ್ಗೆ 5.30ರ ಸುಮಾರಿಗೆ ಆನೆ ಅಸುನೀಗಿದೆ. ಮರಣೋತ್ತರ ಪರೀಕ್ಷೆ ವರದಿ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next