ಗುವಾಹಟಿ: ಎಂಟನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯನ್ನು ಅತ್ಯಾಚಾರವೆಸಗಿ ಬಳಿಕ ಆಕೆಯನ್ನು ಕೊಲೆಗೈದು ಶವವನ್ನು ನದಿಗೆ ಎಸೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ರಿಕ್ಷಾ ಚಾಲಕನೋರ್ವನನ್ನು ವಶಕ್ಕೆ ಪಡೆದಿರುವ ಘಟನೆಯೊಂದು ಬೆಳಕಿಗೆ ಬಂದಿದೆ.
ಘಟನೆ ನಡೆದಿರುವುದು ಗುವಾಹಟಿಯಲ್ಲಿರುವ ಕಮ್ರೂಪ್ ಜಿಲ್ಲೆಯಲ್ಲಿ.
ಪೊಲೀಸರ ಮಾಹಿತಿಯ ಪ್ರಕಾರ, ಮೃತ ಬಾಲಕಿ ಕಳೆದ ಸೋಮವಾರ ತನ್ನ ತಂದೆಯ ಮೊಬೈಲ್ ಫೋನಿಗೆ ರಿಚಾರ್ಜ್ ಮಾಡಿ ಬರುವುದಾಗಿ ಮನೆಯಿಂದ ತೆರಳಿದ ವಳು ಮನೆಗೆ ವಾಪಸ್ಸಾಗದೇ ನಾಪತ್ತೆಯಾಗಿದ್ದಳು ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಆದರೆ ನಾಪತ್ತೆಯಾಗಿದ್ದ ಬಾಲಕಿಯ ಸುಳಿವು ಮಾತ್ರ ಸಿಗಲೇ ಇಲ್ಲ ಘಟನೆ ನಡೆದು ಐದನೇ ದಿನಕ್ಕೆ ಶವ ಸೋನಾಪುರದ ದಿಗರು ನದಿಯಲ್ಲಿ ಪತ್ತೆಯಾಗಿದೆ.
ಬಾಲಕಿಯ ಮೃತ ದೇಹ ಪತ್ತೆಯಾಗುತ್ತಿದ್ದಂತೆ ಗ್ರಾಮಸ್ಥರು ಸೇರಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ. ಇದೊಂದು ಕೊಲೆ ಕೂಡಲೇ ಆರೋಪಿಯನ್ನು ಪತ್ತೆ ಹಚ್ಚುವಂತೆ ಪ್ರತಿಭಟನೆ ನಡೆಸಿದ್ದಾರೆ. ಘಟನೆ ಕುರಿತು ಕಾರ್ಯ ಪ್ರವೃತ್ತರಾದ ಸೋನಾಪುರ ಪೊಲೀಸರು ಓರ್ವ ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ ಈ ವೇಳೆ ರಿಕ್ಷಾ ಚಾಲಕ ಬಾಲಕಿಯನ್ನು ಅತ್ಯಾಚಾರವೆಸಗಿದ್ದು ಬಳಿಕ ಆಕೆಯನ್ನು ಹತ್ಯೆಗೈದು ದಿಗರು ನದಿಗೆ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಸದ್ಯ ಪೊಲೀಸರು ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: 66 ಶಾಸಕರಲ್ಲಿ ವಿರೋಧ ಪಕ್ಷದ ನಾಯಕನಾಗುವ ಅರ್ಹತೆ ಒಬ್ಬನಿಗೂ ಇಲ್ಲವೇ?: ಕಾಂಗ್ರೆಸ್ ಟೀಕೆ