Advertisement

ಸಚಿವ ಸ್ಥಾನಕ್ಕೆ ಹೆಚ್ಚುತ್ತಲೇ ಇರುವ ಆಕಾಂಕ್ಷಿಗಳು 

11:03 PM Jul 31, 2021 | Team Udayavani |

ಬೆಂಗಳೂರು: ಸಂಪುಟ ವಿಸ್ತರಣೆ ವಿಳಂಬವಾದಷ್ಟು ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚುತ್ತಿದೆ. ಶನಿವಾರ ಹಲವು ಶಾಸಕರು ಸಂಪುಟ ಸೇರುವ ಆಕಾಂಕ್ಷೆ ಹಾಗೂ ನಿರೀಕ್ಷೆಯನ್ನು ಹೊರ ಹಾಕಿದ್ದಾರೆ.

Advertisement

ರಾಜ್ಯ ಸಂಪುಟದಲ್ಲಿ ಜಿಲ್ಲೆಗೊಂದು ಸಚಿವ ಸ್ಥಾನ ನೀಡುವಂತೆ  ಐವರು ಶಾಸಕರು ಒಟ್ಟಾಗಿ ಮನವಿ ಮಾಡಿ ದ್ದೇವೆ. ಆದರೆ ಇಂಥವರಿಗೇ ನೀಡಬೇಕು ಎಂದು ಕೇಳಿಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ಮಾಡುವುದಿಲ್ಲ . ಎಸ್‌.ವಿ.ರಾಮಚಂದ್ರ  ಜಗಳೂರು ಶಾಸಕ

ಸಂಪುಟದಲ್ಲಿ ಕೊಪ್ಪಳ ಜಿಲ್ಲೆಗೆ ಆದ್ಯತೆ ನೀಡುವಾಗ ತನಗೆ ಸಚಿವ ಸ್ಥಾನ ಕಲ್ಪಿಸುವಂತೆ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಲಾಗಿದೆ. ಇಬ್ಬರೂ ಉತ್ತಮ ಸ್ಪಂದನೆ ನೀಡಿದ್ದು, ಸಚಿವ ಸ್ಥಾನ ಸಿಗುವ ಭರವಸೆ ಇದೆ . ಪರಣ್ಣ ಮುನವಳ್ಳಿ , ಗಂಗಾವತಿ ಶಾಸಕ

ನಾನು ಪಕ್ಷದಲ್ಲಿ ನಿಷ್ಠೆ, ಬದ್ಧತೆ ಇಟ್ಟುಕೊಂಡು ಬಂದವನು. ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡಿಲ್ಲ, ಮಾಡುವುದೂ ಇಲ್ಲ. ಆದರೂ ಈ ಬಾರಿ  ಸಚಿವನಾಗುತ್ತೇನೆ . -ಆರಗ ಜ್ಞಾನೇಂದ್ರ , ತೀರ್ಥಹಳ್ಳಿ  ಶಾಸಕ

ಸಚಿವ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುವೆ: ರವೀಂದ್ರನಾಥ್‌:

Advertisement

ದಾವಣಗೆರೆ: ಬಸವರಾಜ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟದಲ್ಲಿ ಜಿಲ್ಲೆಗೊಂದು ಸಚಿವ ಸ್ಥಾನ ಸಿಗುವುದು ಖಚಿತವಾಗಿದ್ದು, ಅದು ತನಗೆ ಸಿಕ್ಕಿದರೆ ಸಮರ್ಥವಾಗಿ ನಿಭಾಯಿಸುವುದಾಗಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌.ಎ. ರವೀಂದ್ರನಾಥ್‌ ಹೇಳಿದರು.

ತಾಲೂಕಿನ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಗೊಂದು ಸಚಿವ ಸ್ಥಾನ ನೀಡುವಂತೆ ಜಿಲ್ಲೆಯ ಐವರು ಶಾಸಕರು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ  ಮನವಿ ಮಾಡಿದ್ದೇವೆ ಎಂದರು.

ವರಿಷ್ಠರು ಯಾವ ಮಾನದಂಡ ಅನುಸರಿಸುತ್ತಾರೋ ಗೊತ್ತಿಲ್ಲ. ಹಿರಿತನದಲ್ಲಿ  ನೋಡಿದರೆ  ನಾನೇ ಮೊದಲಿಗ ಎಂದು ಅವರು ಹೇಳಿದರು.

ನಾನೂ ಸಚಿವಾಕಾಂಕ್ಷಿ: ಐಹೊಳೆ

ಚಿಕ್ಕೋಡಿ:  ಗೋವಿಂದ ಕಾರಜೋಳರಿಗೆ ಡಿಸಿಎಂ ಸ್ಥಾನ ನೀಡಬೇಕು ಹಾಗೂ ಮೂರನೇ ಬಾರಿಗೆ ಆಯ್ಕೆಯಾಗಿರುವ ತನಗೆ ಸಚಿವ ಸ್ಥಾನ ನೀಡಬೇಕೆಂದು ರಾಯಬಾಗ್‌ ಶಾಸಕ ದುರ್ಯೋಧನ ಐಹೊಳೆ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next