Advertisement
ನಂಜನಗೂಡಿನ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರದ ಯೋಜನೆಯಡಿ ಸುಮಾರು 7 ಕೋಟಿ ರೂ., ವೆಚ್ಚದಲ್ಲಿ ನಿರ್ಮಿತವಾದ ಅತ್ಯಾಧುನಿಕ ತಾಯಿ ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ಕಟ್ಟಡದ ಉದ್ಘಾಟನೆಯಾಗಿ ನವಮಾಸ ತುಂಬುವ ವೇಳೆಗಾದರೂ ಹೆರಿಗೆ ಆರಂಭಿಸಿ ಎಂದರು.
Related Articles
Advertisement
ರಸ್ತೆ ಅವ್ಯವಸ್ಥೆ ಸಚಿವರ ಗಮನಕ್ಕೆ ನೀವೇ ತನ್ನಿ: ನಂಜನಗೂಡು ಪಟ್ಟಣದ ರಸ್ತೆ ಅವ್ಯವಸ್ಥೆ ಕುರಿತು ಸುದ್ದಿಗಾರರು ಸಂಸದರ ಗಮನ ಸೆಳೆದಾಗ ಕಾಮಗಾರಿ ಲೋಕೋಪಯೋಗಿ ಇಲಾಖೆ ನೇರ ಉಸ್ತುವಾರಿಯಲ್ಲಿ ನಡೆಯುತ್ತಿರುವುದರಿಂದ ನಿಮ್ಮವರೇ ಆಗಿರುವ ಡಾ.ಎಚ್.ಸಿ.ಮಹದೇವಪ್ಪ ಅವರ ಗಮನಕ್ಕೆ ತನ್ನಿ ಎಂದು ಸಂಸದರು ಜಾರಕೆ ಉತ್ತರ ನೀಡಿದರು. ಶಾಸಕ ಕಳಲೆ ಕೇಶವಮೂರ್ತಿ, ಮುಖಂಡರಾದ ಗುಂಡ್ಲುಪೇಟೆ ನಂಜಪ್ಪ, ಪುರಸಭಾ ಮಾಜಿ ಅಧ್ಯಕ್ಷ ಶ್ರೀಧರ್, ಗಂಗಾಧರ್ ಮತ್ತಿತರರಿದ್ದರು.
* ಕಟ್ಟಡ ಉದ್ಘಾಟನೆಯಾಗಿ 7 ತಿಂಗಳಾದರೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಲ್ಲ ಎಂದು ಸಂಸದರ ಗಮನಕ್ಕೆ ಬಂದಾಗ, ತಕ್ಷಣ ನಗರಸಭೆ ಆಯುಕ್ತ ವಿಜಯರನ್ನು ಸ್ಥಳಕ್ಕೆ ಕರೆಸಿಕೊಂಡ ಅವರು ತಕ್ಷಣ ಆಸ್ಪತ್ರೆಗೆ ನೀರಿನ ಸಂಪರ್ಕ ಒದಗಿಸುವಂತೆ ಸೂಚಿಸಿದರು.
ಸಚಿವರೊಂದಿಗೆ ಚರ್ಚಿಸುವೆಲಾಂಡ್ರಿ ಸೌಲಭ್ಯವೂ ಇಲ್ಲ, ಹೆರಿಗೆ ಪ್ರಾರಂಭವಾದರೆ ಬಟ್ಟೆ ಒಗೆದು ಸ್ವತ್ಛ ಮಾಡುವ ಸೌಲಭ್ಯಬೇಕು ಎಂದು ಸಿಬ್ಬಂದಿ ಅಲವತ್ತುಕೊಂಡರು. ಹೀಗಾಗಿ ಸದ್ಯ ಹೊರರೋಗಿಗಳ ವಿಭಾಗ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಸೌಲಭ್ಯ ಕಲ್ಪಿಸಿದ ನಂತರವೇ ಹೆರಿಗೆ ಎಂಬ ಅಭಿಪ್ರಾಯ ಕೇಳಿಬಂತು. ಅಲ್ಲಿಯವರಿಗೆ ತಾಯಿ ಮಕ್ಕಳ ಆಸ್ಪತ್ರೆ ಗರ್ಭಿಣಿಯರು, ಬಾಣಂತಿಯರ ಆಸ್ಪತ್ರೆಯಾಗಿ ಮಾತ್ರ ಕಾರ್ಯ ನಿರ್ವಹಿಸಬಹುದು ಎಂಬುದನ್ನು ವೈದ್ಯರು ಸ್ಪಷ್ಟಪಡಿಸಿದರು. ನಂತರ ಮಾತನಾಡಿದ ಸಂಸದರು, ತಾವು ಕೊರತೆಗಳ ಕುರಿತು ಆರೋಗ್ಯ ಇಲಾಖೆ ಸಚಿವರು, ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.