Advertisement
ದೇಗುಲದಲ್ಲಿ ಆಶ್ಲೇಷಾ ಬಲಿ ಸೇವೆ ಪ್ರತಿದಿನ ಬೆಳಗ್ಗೆ 6.30ರಿಂದ 8 ಮತ್ತು 8.30ರಿಂದ 10 ಗಂಟೆ – ಎರಡು ಹಂತಗಳಲ್ಲಿ ಜರಗುತ್ತಿತ್ತು. ಅಧಿಕ ಭಕ್ತರು ಇದ್ದಾಗ ಮೂರು ಸಲ ಆಗುತ್ತಿತ್ತು. ಸೇವಾರ್ಥಿಗಳ ಸಂಖ್ಯೆ ವೃದ್ಧಿಸಿ, ಭಕ್ತರಿಗೆ ಅನನುಕೂಲ ಆಗುತ್ತಿದ್ದುದನ್ನು ಗಮನಿಸಿದ ಆಡಳಿತ ಮಂಡಳಿ ಅಷ್ಟಮಂಗಲ ಪ್ರಶ್ನೆಚಿಂತನೆ ಇರಿಸಿತ್ತು. ಪ್ರಶ್ನೆಯಲ್ಲಿ ಒಪ್ಪಿಗೆ ದೊರಕಿದ ಬಳಿಕ ಸಂಜೆ ವೇಳೆ ನಡೆಸಲು ನಿರ್ಧರಿಸಿತ್ತು. ಬುಧವಾರ ಬೆಳಗ್ಗೆ ದೇಗುಲದಲ್ಲಿ ದ್ರವ್ಯಕಲಶ ನಡೆಸಿ, ಸಂಜೆ ದೇಗುಲದ ವತಿಯಿಂದ ಆಶ್ಲೇಷಾ ಬಲಿ ಪೂಜೆ ನೆರವೇರಿಸಲಾಗಿತ್ತು. ಈ ಸೇವೆಗೆ ಮುಂಗಡ ಬುಕ್ಕಿಂಗ್ ಇರುವುದಿಲ್ಲ. ಬೆಳಗ್ಗೆ ಮೂರು ಮತ್ತು ಸಂಜೆ ಒಂದು ಹಂತದಲ್ಲಿ ಸೇವೆ ನಡೆಯಲಿದೆ. ಸಾಯಂಕಾಲದ ಆಶ್ಲೇಷಾ ಸೇವೆಗೆ ಭಕ್ತರು ಮಧ್ಯಾಹ್ನ 12.30ರಿಂದ 4.30ರ ತನಕ ಸೇವಾ ರಶೀದಿ ಪಡೆಯಬಹುದು. ಬುಧವಾರ ಬೆಳಗ್ಗೆಯ ಸೇವೆಗಳಲ್ಲಿ 220 ಆಶ್ಲೇಷಾ ಬಲಿ ಪೂಜೆಗಳು ನಡೆದಿವೆ. Advertisement
ಕುಕ್ಕೆಯಲ್ಲಿ 56 ಭಕ್ತರಿಂದ ಸಂಜೆಯ ಆಶ್ಲೇಷಾ ಬಲಿ
02:00 AM Jul 06, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.