Advertisement
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಸೆಂಥಿಲ್ ವಿರುದ್ಧ ಏನನ್ನೂ ಮಾತನಾಡದವರು ಈಗ ಅವರು ಸರಿ ಇಲ್ಲ ಎನ್ನುತ್ತಿದ್ದಾರೆ. ಕೇಂದ್ರ ಸರಕಾರ, ಅದರ ನೀತಿಯನ್ನು ಪ್ರಶ್ನಿಸಿದವರನ್ನೆಲ್ಲ ದೇಶದ್ರೋಹಿಗಳು ಎಂಬಂತೆ ಪರಿಗಣಿಸಲಾಗುತ್ತಿದೆ. ಇದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ರಾಜ್ಯದಲ್ಲಿ ಪ್ರವಾಹ ಪೀಡಿತರ ಪ್ರದೇಶಗಳ ಸಮೀಕ್ಷೆಗೆ ಮನಸ್ಸು ಮಾಡದ ಪ್ರಧಾನಿ, ಕೇಂದ್ರದಿಂದ ಕನಿಷ್ಠ ನೆರವನ್ನೂ ಬಿಡುಗಡೆ ಮಾಡಿಲ್ಲ. ಶನಿವಾರ ಪ್ರಧಾನಿ ಬೆಂಗಳೂರು ಭೇಟಿ ವೇಳೆ ನೆರೆ ಸಂತ್ರಸ್ತರಿಗೆ ಅನುದಾನ ಕೋರುವುದಾಗಿ ಮುಖ್ಯಮಂತ್ರಿ ಹೇಳಿದ್ದರೂ ಹಾಗೆ ಮಾಡಿಲ್ಲ ಎಂದರು.
ಪ್ರಧಾನಿ ಮೋದಿಗೆ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಜನರ ಒಳಿತಿನ ಚಿಂತೆ ಇಲ್ಲ. ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಬ್ಬರೂ ಒಂದೇ ರೀತಿಯವರು. ಇಬ್ಬರೂ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ. ಅದಕ್ಕಾಗಿಯೇ ಇಬ್ಬರು ಪರಸ್ಪರ ಆರೋಪ ಮಾಡಿಕೊಳ್ಳುತ್ತಿದ್ದಾರೆ ಎಂದು ರಮಾನಾಥ ರೈ ಹೇಳಿದರು.