Advertisement
ಕೇಂದ್ರದಿಂದ ರಾಜ್ಯಕ್ಕಾದ ಅನ್ಯಾಯಗಳ ಬಗ್ಗೆ ಚರ್ಚಿಸಲು ಬಹಿರಂಗ ಸವಾಲು ಹಾಕಿದ್ದ ಸಚಿವರು, ಜಾಗೃತ ಕರ್ನಾಟಕ, ರೈತ ಸಂಘ ಮತ್ತು ಕನ್ನಡಪಡ ಸಂಘಟನೆಗಳು ಗಾಂಧಿ ಭವನದಲ್ಲಿ ಆಯೋಜಿಸಿದ್ದ ಜಿಎಸ್‌ಟಿ, ಸೆಸ್, ತೆರಿಗೆ, ಬರ ಪರಿಹಾರ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯ ಎಂಬ ಬಹಿರಂಗ ಸಭೆಯಲ್ಲೇ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೂ ಒಂದು ಕುರ್ಚಿಯನ್ನು ಹಾಕಿ ಕಾದು ಕುಳಿತಿದ್ದರು. ಅಷ್ಟರಲ್ಲಿ ಅವರು ಪ್ರತ್ಯೇಕ ಪತ್ರಿಕಾಗೋಷ್ಠಿ ಮೂಲಕ ಕೇಂದ್ರ ಕೊಟ್ಟ ತೆರಿಗೆ ಪಾಲಿನ ವಿವರಣೆ ನೀಡಿದ್ದರಿಂದ ಕೃಷ್ಣ ಬೈರೇಗೌಡ ಒಂಟಿಯಾಗಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.
Related Articles
Advertisement
ಕಾರ್ಯಕ್ರಮದ ಆಯೋಜಕರು ಮಾತನಾಡಿ, ನಿರ್ಮಲಾ ಸೀತಾರಾಮನ್ ಅವರಿಗೆ ಇ-ಮೇಲ್ ಮೂಲಕ ಚರ್ಚೆಗೆ ಆಹ್ವಾನಿಸಲಾಗಿದೆ. ಇಬ್ಬರಿಗೂ ಪ್ರತ್ಯೇಕ ಕುರ್ಚಿ ಹಾಕಲಾಗಿದೆ ಎಂದರು. ಆದರೆ ನಿರ್ಮಲಾ ಸೀತಾರಾಮನ್ ಅವರು ನಗರಕ್ಕೆ ಬಂದರೂ ಸಂವಾದಕ್ಕೆ ಬಂದಿರಲಿಲ್ಲ. ಅವರಿಗೆ ಹಾಕಲಾಗಿದ್ದ ಕುರ್ಚಿಯನ್ನು ಹಾಗೆಯೇ ಕೊನೆ ತನಕ ಬಿಡಲಾಗಿತ್ತು.
ಕಾರ್ಯಕ್ರಮದಲ್ಲಿ ರೈತ ಮುಖಂಡ ಬಡಗಲಾಪುರ ನಾಗೇಂದ್ರ, ಸಾಮಾಜಿಕ ಕಾರ್ಯಕರ್ತ ವಾಸು, ಪಿಚ್ಚಳ್ಳಿ ಶ್ರೀನಿವಾಸ್, ನಿಕೇತ್ ರಾಜ್ ಮೌರ್ಯ ಮುಂತಾದವರಿದ್ದರು.
ನನಗೆ ರಾಜ್ಯದ ಹಿತದೃಷ್ಟಿಯೇ ನನಗೆ ಮುಖ್ಯ. ಇದರಲ್ಲಿ ರಾಜಕೀಯ ಇಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಚರ್ಚೆಗೆ ಬರಲಿದ್ದಾರೆ ಎಂದು ಭಾವಿಸಿದ್ದೆ . ಅವರ ಮತ್ತು ನನ್ನ ಮಧ್ಯೆ ಉತ್ತಮ ವಿಶ್ವಾಸವಿದೆ. ಇಲ್ಲಿ ವೈಯಕ್ತಿಕ ವಾದ- ವ್ಯಾಜ್ಯ ಇಲ್ಲ. ರಾಜ್ಯದ ಜನರ ಹಿತದೃಷ್ಟಿಯೇ ನನಗೆ ಮುಖ್ಯ.– ಕೃಷ್ಣಬೈರೇಗೌಡ, ಕಂದಾಯ ಸಚಿವ