Advertisement

ಕಾವೇರಿ ನೀರಿನ ವಿಚಾರದಲ್ಲಿ ತಜ್ಞರು ಹೇಳಿದಂತೆ ಕೇಳುವೆ

11:47 AM Mar 11, 2018 | Team Udayavani |

ಮೈಸೂರು: ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಷಯದಲ್ಲಿ ನಾರಿಮನ್‌ ಮತ್ತು ತಂಡ ಏನು ಹೇಳುತ್ತದೆ
ಅದನ್ನೇ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಶಾರದಾದೇವಿ ನಗರ ನಿವಾಸದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ ಆದೇಶ
ದಂತೆ ಆರು ವಾರದಲ್ಲಿ ಸ್ಕೀಂ ಅಡಿಯಲ್ಲಿ ಸಮಿತಿ ರಚನೆ ಮಾಡಬೇಕೆಂದು ಕೇಂದ್ರ ಸರ್ಕಾರ ಹೇಳಿದೆ. ಹೀಗಾಗಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಬಗ್ಗೆ ನಾರಿಮನ್‌ ಮತ್ತು ಲೀಗಲ್‌ ತಂಡ ಏನು ಹೇಳುತ್ತದೆಯೋ ಅದನ್ನೇ
ಕೇಳುತ್ತೇನೆ ಎಂದು ಸ್ಪಷ್ಟಪಡಿಸಿದರು. 

ಬಿಜೆಪಿಯಿಂದ ಹಿಂದುಳಿದ ವರ್ಗಗಳ ಹಾಸ್ಟೆಲ್‌ ಅವ್ಯವಹಾರದ ಕುರಿತು ವರದಿ ಬಿಡುಗಡೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮ ಕಾಲದಲ್ಲಿ ಹಾಸ್ಟೆಲ್‌ಗ‌ಳು ಅಭಿವೃದ್ಧಿ ಕಂಡಷ್ಟು ಬೇರೆ ಯಾವ ಸರ್ಕಾರದ ಅವಧಿಯಲ್ಲೂ ಆಗಿಲ್ಲ ಎಂದರು. 

ಇದೇ ವೇಳೆ ಐಎಫ್ಎಸ್‌ ಅಧಿಕಾರಿ ಮಣಿಕಂಠನ್‌ ಕುಟುಂಬಕ್ಕೆ ಪರಿಹಾರ ನೀಡುವ ವಿಚಾರದ ಬಗ್ಗೆ ಮಾತನಾಡಿದ ಅವರು, ಪರಿಹಾರದ ಬಗ್ಗೆ ಮನೆಯವರನ್ನು ಸಂಪರ್ಕಸಿ, ಕುಟುಂಬಸ್ಥರಲ್ಲಿ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗ ನೀಡುವ ಬಗ್ಗೆ ಚಿಂತಿಸಲಾಗುತ್ತಿದೆ ಎಂದು ತಿಳಿಸಿದರು

ಕಟ್ಟಡ ಉದ್ಘಾಟನೆ ಮತ್ತೆ ಮುಂದೂಡಿಕೆ 
ಮೈಸೂರು: ನಗರ ಪೊಲೀಸ್‌ ಆಯುಕ್ತರ ಕಚೇರಿಯ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಎರಡನೇ ಬಾರಿಗೆ ಮುಂದೂಡಲ್ಪಟ್ಟಿತು. ಮಾ.6ಕ್ಕೆ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭ ನಿಗದಿಯಾಗಿತ್ತು. ಸಿಎಂ
ಅವರು, ಮಾ.5ರ ರಾತ್ರಿಯೇ ದೆಹಲಿಗೆ ತೆರಳಿದ್ದರಿಂದ 6ರಂದು ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮ ಮಾ.10ಕ್ಕೆ
ಮುಂದೂಡಲಾಗಿತ್ತು. ನಿಗದಿಯಂತೆ ಶನಿವಾರ ಎಲ್ಲಾ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು
ಸಿಎಂ ನೆರವೇರಿಸಿದರು. ಸಂಜೆ 6ಗಂಟೆಗೆ ನಿಗದಿಯಾಗಿದ್ದ ಉದ್ಘಾಟನಾ ಸಮಾರಂಭಕ್ಕೆ ಎಲ್ಲಾ ಸಿದ್ಧತೆಯಾಗಿದ್ದು, ರಾತ್ರಿ 8ಗಂಟೆಗೆ ಸಿಎಂ ತುರ್ತಾಗಿ ಬೆಂಗಳೂರಿಗೆ ತೆರಳುತ್ತಿರುವುದರಿಂದ ಉದ್ಘಾಟನಾ ಸಮಾರಂಭ ಮುಂದೂಡಲಾಗಿದೆ ಎಂದು ಪ್ರಕಟಿಸಲಾಯಿತು.

Advertisement

ಎಚ್ಡಿಕೆ ಕೇಳಿ ಆಡಳಿತ ನಡೆಸಬೇಕಾ?
ಕುಮಾರಸ್ವಾಮಿ ರಾಜಕೀಯಕ್ಕೆ ಬರುವುದಕ್ಕೆ ಮುಂಚೆಯೇ ನಾನು ಮಂತ್ರಿಯಾಗಿದ್ದೆ, ಎಚ್‌ಡಿಕೆ ಕೇಳಿ ಆಡಳಿತ ನಡೆಸ 
ಬೇಕಾದ ಅಗತ್ಯ ನನಗಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next