Advertisement

Shocking;ರೇ*ಪ್ ಹೇಗೆ ನಡೆಯುತ್ತದೆ ಎನ್ನುವ ಅನುಭವ ಕಂಗನಾಗಿದೆ: ಸಿಮ್ರಂಜಿತ್ ಸಿಂಗ್ ವಿವಾದ

06:20 PM Aug 29, 2024 | Team Udayavani |

ಅಮೃತಸರ: ರೈತರ ಕುರಿತು ಸಂಸದೆ ಕಂಗನಾ ರಣಾವತ್ ಹೇಳಿಕೆ ಖಂಡಿಸಿ ಪಂಜಾಬ್‌ ನಲ್ಲಿ ಆಪ್‌ ಸೇರಿ ವಿಪಕ್ಷಗಳು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಬಿಜೆಪಿ ಅವರನ್ನು ಪಕ್ಷ ದಿಂದ ಉಚ್ಚಾಟಿಸಬೇಕೆಂದು ಒತ್ತಾಯಿಸಿವೆ. ಪ್ರತಿಭಟನೆ ವೇಳೆ ಶಿರೋಮಣಿ ಅಕಾಲಿ ದಳದ ನಾಯಕ, ಮಾಜಿ ಸಂಸದ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ಶಿರೋಮಣಿ ಅಕಾಲಿದಳದ (ಅಮೃತಸರ) ಮುಖ್ಯಸ್ಥ, ಪಂಜಾಬ್‌ನ ಮಾಜಿ ಸಂಸದ ಸಿಮ್ರಂಜಿತ್ ಸಿಂಗ್ ಮಾನ್ ಅತ್ಯಂತ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಕಂಗನಾಗೆ “ಅತ್ಯಾಚಾರದ ಸಾಕಷ್ಟು ಅನುಭವವಿದೆ” ಎಂದು ಹೇಳಿದ್ದಾರೆ.

ಸಿಮ್ರಂಜಿತ್ ಸಿಂಗ್ ಮಾನ್ “ಅತ್ಯಾಚಾರ ಹೇಗೆ ನಡೆಯುತ್ತದೆ ಎಂದು ನೀವು ಕಂಗನಾ ರಣಾವತ್ ಅವರನ್ನು ಕೇಳಬಹುದು, ಅತ್ಯಾಚಾರ ಹೇಗೆ ಸಂಭವಿಸುತ್ತದೆ ಎಂಬುದನ್ನು ಅವರು ವಿವರಿಸಬಹುದು. ಆಕೆಗೆ ಅತ್ಯಾಚಾರದ ಸಾಕಷ್ಟು ಅನುಭವವಿದೆ” ಎಂದು ಹೇಳಿದ್ದಾರೆ”ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

”ಭಾರತದ ನಾಯಕತ್ವ ಬಲವಾಗಿರದಿದ್ದರೆ ಬಾಂಗ್ಲಾದೇಶದಂತಹ ಪರಿಸ್ಥಿತಿಗೆ ರೈತರ ಆಂದೋಲನವು ಕಾರಣವಾಗಬಹುದು” ಎಂದು ಕಂಗನಾ ಇತ್ತೀಚಿನ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಹೇಳಿಕೆಯನ್ನು ಬಿಜೆಪಿ ವಿರೋಧಿಸಿ ಸಂಸದೆಗೆ ಎಚ್ಚರಿಕೆ ನೀಡಿತ್ತು.ಆ ಬಳಿಕವೂ ವಿಪಕ್ಷಗಳು ಕಂಗನಾ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.