Advertisement

ಏಶ್ಯನ್‌ ಕುಸ್ತಿ ಸ್ಪರ್ಧೆ : ಸ್ವರ್ಣ ಉಳಿಸಿಕೊಂಡ ಭಾರತದ ಸರಿತಾ ಮೋರ್

11:05 PM Apr 15, 2021 | Team Udayavani |

ಹೊಸದಿಲ್ಲಿ : ಕಜಾಕ್‌ಸ್ಥಾನದ ಅಲ್ಮಾಟಿಯಲ್ಲಿ ನಡೆಯುತ್ತಿರುವ ಏಶ್ಯನ್‌ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ಸರಿತಾ ಮೋರ್‌ 59 ಕೆ.ಜಿ. ವಿಭಾಗದ ಚಿನ್ನದ ಪದಕ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಸೀಮಾ ಬಿಸ್ಲಾ (50 ಕೆ.ಜಿ.) ಮತ್ತು ಪೂಜಾ (76 ಕೆ.ಜಿ.) ಕಂಚಿನ ಪದಕಕ್ಕೆ ತೃಪ್ತರಾದರು.

Advertisement

ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ಕೂಟದಲ್ಲಿ ಚಿನ್ನ ಜಯಿಸಿದ್ದ ಸರಿತಾ, ಈ ಬಾರಿ ಮಂಗೋಲಿಯಾದ ಶೂವೊರ್‌ ಬಾಟರ್ಜಾವ್‌ ವಿರುದ್ಧ 1-7ರ ಹಿನ್ನಡೆಯ ಹೊರತಾಗಿಯೂ ಗೆದ್ದು ಬಂದದ್ದು ವಿಶೇಷವಾಗಿತ್ತು.

ಅಂತರ 10-7. ಕೂಟದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಶೂವೊªರ್‌ ವಿರುದ್ಧ 4-5 ಅಂತರದಿಂದ ಎಡವಿದ್ದ ಸರಿತಾ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

 

Advertisement

Udayavani is now on Telegram. Click here to join our channel and stay updated with the latest news.

Next