Advertisement
ಕೂಟದ ಕೊನೆಯ ದಿನವಾದ ರವಿವಾರ 82 ಕೆಜಿ ವಿಭಾಗದ ಫೈನಲ್‌ನಲ್ಲಿ ಹರ್‌ಪ್ರೀತ್ ಸಿಂಗ್ ಬೆಳ್ಳಿ ಗೆದ್ದರೆ, 60 ಕೆಜಿ ಸ್ಪರ್ಧೆಯಲ್ಲಿ ಗ್ಯಾನೇಂದರ್ ಕಂಚಿನ ಪದಕ ಗೆದ್ದರು.
Related Articles
ಒಟ್ಟು 16 ಪದಕಗಳನ್ನು ಗೆದ್ದಿರುವ ಭಾರತ ಈ ಕೂಟದಲ್ಲಿ 8ನೇ ಸ್ಥಾನ ಪಡೆದಿದೆ. 11 ಚಿನ್ನ, 6 ಕಂಚಿನ ಪದಕ ಗೆದ್ದ ಇರಾನ್ ಅಗ್ರಸ್ಥಾನಿಯಾಗಿದೆ. ಚೀನ ದ್ವಿತೀಯ (5 ಚಿನ್ನ, 5 ಬೆಳ್ಳಿ, 6 ಕಂಚು), ಜಪಾನ್ ತೃತೀಯ (4 ಚಿನ್ನ, 7 ಬೆಳ್ಳಿ, 6 ಕಂಚು) ಸ್ಥಾನ ಪಡೆದಿದೆ.
Advertisement
ಕೈತಪ್ಪಿದ 3 ಪದಕ72 ಕೆಜಿ ವಿಭಾಗದ 3ನೇ ಮತ್ತು 4ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಯೋಗೇಶ್ ಕಿರ್ಗಿಸ್ಥಾನದ ರುಶ್ಲಾನ್ ಸರೇವ್ ವಿರುದ್ಧ ಸೋತರು. ಉಳಿದಂತೆ ರವಿವಾರದ ಸ್ಪರ್ಧೆಯಲ್ಲಿದ್ದ ಭಾರತದ ಮತ್ತಿಬ್ಬರು ಕುಸ್ತಿಪಟುಗಳಲ್ಲಿ ರವೀಂದರ್ 67 ಕೆಜಿ ವಿಭಾಗದ ಅರ್ಹತಾ ಬೌಟ್‌ನಲ್ಲಿ ಪರಾಭವಗೊಂಡರೆ, ಹರ್‌ದೀಪ್ 97 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಬೌಟ್‌ನಲ್ಲಿ ಸೋತರು.