Advertisement
ಭಾರತದ ಇನ್ನೋರ್ವ ಬಾಕ್ಸರ್ ಲೊವಿÉನಾ ಬೊರ್ಗೊಹೈನ್ (69 ಕೆ.ಜಿ.) ಕೂಡ ಕಂಚು ಪಡೆದಿದ್ದಾರೆ. ಈ ನಾಲ್ವರು ಸೆಮಿಫೈನಲಿಗೇರುವ ಮೂಲಕ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿಗೊಂಡಿದ್ದರು. ಫೈನಲ್ ಹಂತಕ್ಕೇರಿರುವ ವಿಕಾಸ್‌ಕೃಷ್ಣನ್ ಅವರಿಂದ ಕಡಿಮೆಪಕ್ಷ ಬೆಳ್ಳಿಯ ಪದಕ ನಿರೀಕ್ಷಿಸಬಹುದು.
ಈ ನಾಲ್ವರಲ್ಲದೇ ಆಶಿಷ್ ಕುಮಾರ್, ಸತೀಶ್ ಕುಮಾರ್, ಪೂಜಾರಾಣಿ ಮತ್ತು ಸಿಮ್ರಾನ್‌ಜಿತ್ ಕೌರ್ ಅವರು ಕೂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಗಳಿಸಿದ್ದಾರೆ.
Related Articles
ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿಕೋಮ್ ಸೆಮಿಫೈನಲ್‌ನಲ್ಲಿ ಚೀನದ ಚಾಂಗ್ ಯುಯಾನ್ ಕೈಯಲ್ಲಿ 1-4 ಅಂತರದಿಂದ ಸೋತಿರುವುದು ನಿರಾಸೆ ತಂದಿದೆ. ಯುಯಾನ್ ಈ ಹಿಂದೆ ಯೂತ್ ಒಲಿಂಪಿಕ್ಸ್‌ನಲ್ಲಿ ಚಾಂಪಿಯನ್ ಆಗಿದ್ದರು. ವಿಶ್ವ ಬೆಳ್ಳಿ ವಿಜೇತ ಮತ್ತು ಅಗ್ರ ಶ್ರೇಯಾಂಕದ ಅಮಿತ್ ಪಂಘಲ್ ಅವರು ಚೀನದ ಜಿಯಾನ್‌ಗುವಾನ್ ಹು ಕೈಯಲ್ಲಿ 2-3 ಅಂತರದಿಂದ ಸೋತು ಕಂಚಿಗೆ ತೃಪ್ತಿಪಟ್ಟರು.
Advertisement