Advertisement
ಮಹಿಳೆಯರ 40-44ರ ವಯೋಮಿತಿಯ ವಿಭಾಗದ ಶಾಟ್‌ಪುಟ್, ಡಿಸ್ಕಸ್‌ತ್ರೋ, ರಿಲೇಯಲ್ಲಿ 4*400 ರಿಲೇಯಲ್ಲಿ ಬೆಳ್ಳಿಯ ಪದಕ, 4*100 ರಿಲೇಯಲ್ಲಿ ಚಿನ್ನದ ಪದಕ ಹಾಗೂ ಜಾವಲಿಯನ್ ಎಸೆತದಲ್ಲಿ ಕಂಚಿನ ಪದಕದೊಂದಿಗೆ ಒಟ್ಟು 5 ಪದಕಗಳನ್ನು ಪಡೆದ ಸಾಧನೆ ಮಾಡಿದ್ದಾರೆ.ಮೂಲತಃ ಪೊಸ್ರಾಲ್ ಕೊಟ್ರಪಾಡಿ ದಿ| ಶಂಕರ ಶೆಟ್ಟಿ ಮತ್ತು ತಾಳಿಪಾಡಿ ಪಾದೆಮನೆ ಕುಶಾಲ ಶೆಟ್ಟಿ ದಂಪತಿಯ ಪುತ್ರಿಯಾಗಿರುವ ಇವರು ವೈಎಂಸಿಎ ರಾಜ್ಯಮಟ್ಟದ 42ನೇ ಆಥ್ಲೆಟಿಕ್ ಮೀಟ್ -2017 ರಲ್ಲಿ ಕೂಡಾ ದಾಖಲೆಯೊಂದಿಗೆ ಎರಡು ಚಿನ್ನ, ಮಾಸ್ಟರ್ಸ್ ಸ್ಟೇಟ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್-2017ರಲ್ಲಿ ಮೂರೂ ಚಿನ್ನದ ಪದಕ ಪಡೆದಿದ್ದರು. ಹಾಗೆಯೇ ಆಸ್ಟ್ರೇಲಿಯದಲ್ಲಿ ನಡೆದ ಆಸ್ಟ್ರೇಲಿಯನ್ ಮಾಸ್ಟರ್ ಗೇಮ್ಸ್- 2015ರಲ್ಲಿ ಭಾರತವನ್ನು ಪ್ರತಿನಿಧಿಸಿ ಒಂದು ಚಿನ್ನ, 2 ಬೆಳ್ಳಿಯೊಂದಿಗೆ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಅದೇ ರೀತಿ 2013-14ನೇ ಸಾಲಿನಲ್ಲಿ ಜರಗಿದ ಮಾಸ್ಟರ್ಸ್ ನ್ಯಾಶನಲ್ ಅಥ್ಲೆಟಿಕ್ ಮೀಟ್‌ನಲ್ಲಿ 6 ಚಿನ್ನ, 2015ರಲ್ಲಿ ಜರಗಿದ ಸ್ಟೇಟ್ ಮರ್ಕಂಟೈಲ್ ಅಥ್ಲೆಟಿಕ್ ಮೀಟ್‌ನಲ್ಲಿ 4 ಚಿನ್ನದ ಪದಕ, 2013 ರ ರನ್ ಇಂಡಿಯಾ ರನ್ 10 ಕಿ. ಮೀ. ಮ್ಯಾರಥಾನ್‌ನಲ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ. ಬಂಟರ ಸಂಘ ಮುಂಬಯಿ ಇದರ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವೈದ್ಯಕೀಯ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸು ತ್ತಿದ್ದಾರೆ. ಸಹೋದರಿಯರಾದ ಸುಜಾತಾ ಮತ್ತು ಬಬಿತಾ ಶೆಟ್ಟಿ ಮತ್ತು ಪತಿ ಉದಯ ಕರೇಲಿಯರವರ ಪ್ರೋತ್ಸಾಹವೇ ತನ್ನ ಸಾಧನೆಗೆ ಪ್ರೇರಣೆ ಎನ್ನುವ ಇವರು, ಕ್ಯಾಥೆಡ್ರಲ್ ಮತ್ತು ಜಾನ್‌ಕೊನೊನ್ ಸ್ಕೂಲ್ ´‚ೊàರ್ಟ್ ಮುಂಬಯಿಯಲ್ಲಿ 13 ವರ್ಷಗಳ ಕಾಲ ಕ್ರೀಡಾ ಮಾರ್ಗದರ್ಶಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಯುನಿಕ್ಯೂ ನ್ಪೋರ್ಟ್ಸ್ ಅಕಾಡೆಮಿ ಎಂಬ ನ್ಪೋರ್ಟ್ಸ್ ಅಕಾಡೆಮಿಯನ್ನು ಸ್ಥಾಪಿಸಿದ್ದಾರೆ. ಇಲ್ಲಿ ಕ್ರೀಡಾಳುಗಳಿಗೆ ಕ್ರೀಡಾ ಮಾಹಿತಿಯೊಂದಿಗೆ ತರಬೇತಿಯನ್ನು ಕೂಡಾ ನೀಡಲಾಗುತ್ತಿದ್ದು, ವಿಶೇಷವಾಗಿ ಮಕ್ಕಳಿಗೆ ದೈಹಿಕ ಶಿಕ್ಷಣವನ್ನು ನೀಡಲಾಗುತ್ತಿದೆ.