Advertisement

2018ರ ಗಣರಾಜ್ಯೋತ್ಸವಕ್ಕೆ ಆಸಿಯಾನ್‌ ಮುಖಂಡರು

02:40 AM Jul 09, 2017 | Team Udayavani |

ಹೊಸದಿಲ್ಲಿ: ಮುಂಬರುವ 2018ರ ಗಣರಾಜ್ಯೋತ್ಸವಕ್ಕೆ 10 ಆಸಿಯಾನ್‌ ರಾಷ್ಟ್ರಗಳನ್ನು ಆಹ್ವಾನಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

Advertisement

ಸರಕಾರದ “ಆ್ಯಕ್ಟ್ ಈಸ್ಟ್‌’ ನೀತಿಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎನ್ನಲಾಗಿದ್ದು, ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್‌, ಮಲೇಷ್ಯಾ, ಮ್ಯಾನ್ಮಾರ್‌, ಫಿಲಿಪ್ಪೀನ್ಸ್‌, ಸಿಂಗಾಪುರ, ಥಾಯ್ಲೆಂಡ್‌ ಮತ್ತು ವಿಯೆಟ್ನಾಂ ರಾಷ್ಟ್ರಗಳ ನಾಯಕರನ್ನು ಒಂದೇ ವೇದಿಕೆಯಡಿ ಸೇರಿಸುವುದು ಮತ್ತು ಈ ದೇಶಗಳೊಂದಿಗಿನ ಸಂಬಂಧ ಉತ್ತಮ ಪಡಿಸಿಕೊಳ್ಳುವುದು ಕೇಂದ್ರ ಸರಕಾರದ ಉದ್ದೇಶವಾಗಿದೆ.

2014ರಲ್ಲಿ ನಡೆದ ಭಾರತ-ಆಸಿಯಾನ್‌ ಶೃಂಗದಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಪೂರ್ವ ಏಷ್ಯಾ ರಾಷ್ಟ್ರಗಳೊಂದಿಗಿನ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ “ಆ್ಯಕ್ಟ್ ಈಸ್ಟ್‌ ಪಾಲಿಸಿ’ ಘೋಷಿಸಿದ್ದರು. ಅದರ ಮುಂದುವರಿದ ಭಾಗವಾಗಿ ಆಸಿಯಾನ್‌ ಮುಖಂಡರನ್ನು ಆಹ್ವಾನಿಸಲು ನಿರ್ಧರಿಸಲಾಗಿದೆ. ನೆರೆರಾಷ್ಟ್ರ ಚೀನಗೆ ಸೆಡ್ಡು ಹೊಡೆಯುವುದು ಕೂಡ ಕೇಂದ್ರ ಸರಕಾರದ ಈ ನಿರ್ಧಾರದ ಹಿಂದಿನ ಯೋಜನೆ ಎಂದೂ ಹೇಳಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next