ಮಸ್ಕತ್ (ಒಮನ್): ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಕೂಟದಲ್ಲಿ ಭಾರತ ಆತಿಥೇಯ ಒಮನ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ 11-0 ಗೋಲು ಅಂತರದ ಪ್ರಚಂಡ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಹಾಲಿ ಚಾಂಪಿಯನ್ ಭಾರತ ಕೂಟದಲ್ಲಿ ಶುಭಾರಂಭ ಮಾಡಿದೆ. ಎರಡನೇ ಮುಖಾಮುಖೀಯಲ್ಲಿ ಭಾರತ ಶನಿವಾರ ಪಾಕಿಸ್ಥಾನದ ಸವಾಲನ್ನು ಎದುರಿಸಲಿದೆ.
ಸಿಡಿದೆದ್ದ ಭಾರತ
ಕೂಟದಲ್ಲಿ ಅತ್ಯಂತ ದುರ್ಬಲ ತಂಡವಾಗಿರುವ ಒಮನ್ ವಿರುದ್ಧ ಭಾರತ ಪೂರ್ಣ ಪ್ರಾಬಲ್ಯ ಸಾಧಿಸಿತು. ಸುಲ್ತಾನ್ ಕ್ವಾಬೊಸ್ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಸ್ಟ್ರೈಕರ್ ದಿಲ್‌ಪ್ರೀತ್ ಸಿಂಗ್ ಹ್ಯಾಟ್ರಿಕ್ ಗೋಲು ಬಾರಿಸಿದ್ದರಿಂದ ಭಾರತ ಭಾರೀ ಮುನ್ನಡೆ ಪಡೆಯಲು ಸಾಧ್ಯವಾಯಿತು.
ಭಾರತ ಪರ ಲಲಿತ್ ಉಪಾಧ್ಯಾಯ (17ನೇ ನಿಮಿಷ), ಹರ್ಮನ್‌ಪ್ರೀತ್ (22ನೇ ನಿಮಿಷ), ನೀಲಕಂಠ ಶರ್ಮ (23ನೇ ನಿಮಿಷ), ಮನ್‌ದೀಪ್ ಸಿಂಗ್ (30ನೇ ನಿಮಿಷ), ಗುರ್ಜತ್ ಸಿಂಗ್ (37ನೇ ನಿಮಿಷ) ಗೋಲು ದಾಖಲಿಸಿದ್ದರಿಂದ ಭಾರತ 5-0 ಮುನ್ನಡೆ ಪಡೆದುಕೊಂಡಿತ್ತು. ಆ ಬಳಿಕ ದಿಲ್‌ಪ್ರೀತ್ (41ನೇ ನಿಮಿಷ, 55ನೇ ನಿಮಿಷ, 57ನೇ ನಿಮಿಷ) ಹ್ಯಾಟ್ರಿಕ್ ಗೋಲು ಸಿಡಿಸಿ ಅಬ್ಬರಿಸಿದರೆ ಆಕಾಶ್ ದೀಪ್ (48ನೇ ನಿಮಿಷ), ವರುಣ್ ಕುಮಾರ್ (49ನೇ ನಿಮಿಷ), ಚೆಂಗ್ಲೆಸನಾ (53ನೇ ನಿಮಿಷ) ಗೋಲಿನ ಮಳೆಗರೆದರು. ಪರಿಣಾಮ ಭಾರತ ಭಾರೀ ಅಂತರದ ಗೋಲು ದಾಖಲಿಸಿ ಸುಲಭವಾಗಿ ಗೆಲುವು ತನ್ನದಾಗಿಸಿಕೊಂಡಿತು.
ಕೂಟದ ನಿಜವಾದ ಸ್ಪರ್ಧೆ ಚಎಂದು ಮುಖ್ಯ ಕೋಚ್ ಹರೇಂದ್ರ ಸಿಂಗ್ ಹೇಳಿ ದ್ದಾರೆ. ಏಶ್ಯನ್ ಗೇಮ್ಸ್‌ನಲ್ಲಿ ಸೆಮಿಯಲ್ಲಿ ಸೋತ ಬಳಿಕ ಕೆಲವು ದಿನ ಆಟಗಾರರ ಮನಸ್ಸು ಒಳ್ಳೆಯ ಸ್ಥಿತಿಯಲ್ಲಿ ರಲಿಲ್ಲ. ಏಶ್ಯನ್ ಗೇಮ್ಸ್‌ನ ಚಿನ್ನ ಗೆಲ್ಲದ ನಿರಾಶೆ ಇನ್ನೂ ಆಟಗಾರರ ಮನಸ್ಸಿ ನಲ್ಲಿದೆ. ಆದರೆ ಹಿಂದಿನ ನಿರ್ವಹಣೆಯನ್ನು ಅಲೋಚಿ ಸುವುದು ಒಳ್ಳೆಯದಲ್ಲ. ಪಾಕ್ ವಿರುದ್ಧದ ಹೋರಾಟಕ್ಕೆ ನಾವು ಪೂರ್ಣ ರೀತಿಯಲ್ಲಿ ಸಿದ್ಧವಾಗಬೇಕಾಗಿದೆ ಎಂದು ಹರೇಂದ್ರ ಹಿಂಗ್ ತಿಳಿಸಿದ್ದಾರೆ.