Advertisement

ಏಷ್ಯಾಡ್:ಬೋಪಣ್ಣ-ದಿವಿಜ್‌ಗೆ ಬಂಗಾರ, ಕಂಚಿಗೆ ತೃಪ್ತಿಪಟ್ಟ ಹಿನಾ ಸಿಧು

12:28 PM Aug 24, 2018 | Team Udayavani |

ಪಾಲೆಂಬಾಗ್: ಜಕಾರ್ತದಲ್ಲಿ ನಡೆಯುತ್ತಿರುವ ಏಶ್ಯನ್ ಗೇಮ್ಸ್ ನ ಟೆನ್ನಿಸ್ ಪುರುಷರ ಡಬಲ್ಸ್ನಲ್ಲಿ ಭಾರತದ ರೋಹನ್ ಬೋಪಣ್ಣ ಮತ್ತು ದಿವಿಜ್ ಶರಣ್ ಬಂಗಾರದ ಪದಕದ ಪಡೆದಿದ್ದಾರೆ.

Advertisement

ಶುಕ್ರವಾರ ನಡೆದ ಪೈನಲ್ ಹಣಾಹಣಿಯಲ್ಲಿ ಬೋಪಣ್ಣ- ಶರಣ್ ಜೋಡಿ ಕಜಕಿಸ್ತಾನದ ಅಲೆಕ್ಸಾಂಡರ್ ಬಬ್ಲಿಕ್ ಮತ್ತು ಡೆನ್ನಿಸ್ ಜೋಡಿಯ ವಿರುದ್ದ6-3, 6-4 ಸೆಟ್ ಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಸೆಮಿ ಫೈನಲ್‌ನಲ್ಲಿ ಜಪಾನಿನ ಶೊ ಶಿಮಬುಕುರೊ – ಕೈಟೊ ವಿರುದ್ದ3 ಸೆಟ್‌ಗಳ ಹೋರಾಟ ನಡೆಸಿ ಜಯ ಗಳಿಸಿದ್ದ ಭಾರತೀಯ ಜೋಡಿ, ಫೈನಲ್‌ನಲ್ಲಿ ಸುಲಭದ ಗೆಲುವನ್ನೆ ಕಂಡರು. 

ಕಂಚಿಗೆ ತೃಪ್ತಿಪಟ್ಟ ಸಿಧು


10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಹಿನಾ ಸಿಂಧು ಕಂಚಿನ ಪದಕಕ್ಕೆ ಗುರಿ ಇಟ್ಟರು. ಇದೇ ವೇಳೆ ಭಾರತದ ಭರವಸೆಯ ಶೂಟರ್ ಮನು ಬಾಕರ್ 5 ನೇ ಸ್ಥಾನಕ್ಕೆ ತೃಪ್ತಿಪಟ್ಟರು. 

ಒಟ್ಟಾರೆ ಭಾರತ ಕೀಡಾಕೂಟದಲ್ಲಿ6 ಬಂಗಾರ, 4 ಬೆಳ್ಳಿ ಮತ್ತು 13 ಕಂಚಿನ ಪದಕಗಳು ಸೇರಿ ಒಟ್ಟು 23 ಪದಕಗಳೊಂದಿಗೆ 7 ನೇ ಸ್ಥಾನದಲ್ಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next