Advertisement
“19ನೇ ಏಷ್ಯಾಡ್ ಮುಕ್ತಾಯವಾಗಿದೆ ಎಂದು ಘೋಷಿಸುತ್ತಿದ್ದೇನೆ. ಏಷ್ಯಾ ಒಲಿಂಪಿಕ್ ಕೌನ್ಸಿಲ್‌ನ ಸಂಪ್ರದಾಯದಂತೆ ಏಷ್ಯಾದ ಯುವಕರು, ಜಪಾನಿನ ನಗೋಯ ಆಯಿcಯಲ್ಲಿ ನಡೆಯುವ 20ನೇ ಕೂಟದಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡುತ್ತಿದ್ದೇನೆ. ಏಷ್ಯಾ ಮತ್ತು ವಿಶ್ವ ಹ್ಯಾಂಗ್‌ಝೂವನ್ನು ಪ್ರೀತಿಸುತ್ತದೆ. ನೀವು ಅತ್ಯದ್ಭುತ ಆತಿಥೇಯರಾದಿರಿ. ಇದನ್ನು ಒಸಿಎ ಎಂದಿಗೂ ಮರೆಯುವುದಿಲ್ಲ. ಚೀನ ಸರಕಾರಕ್ಕೆ, ಚೀಮ ಒಲಿಂಪಿಕ್ ಸಮಿತಿಗೆ, ಹ್ಯಾಂಗ್‌ಝೂ ಜನರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ. ನಿಮ್ಮೆಲ್ಲರಿಂದ ಈ ಕೂಟ ಹಿಂದೆಂದೂ ಕಾಣದ ಯಶಸ್ಸನ್ನು ನೋಡಿದೆ’ ಎಂದು ರಣಧೀರ್ ಸಿಂಗ್ ಹೇಳಿದರು. ಈ ವೇಳೆ ಚೀನದ ಪ್ರಧಾನಿ ಲೀ ಖೀಯಾಂಗ್, ಇತರ ಗಣ್ಯರು ಇದ್ದರು.
ಏಷ್ಯಾಡ್‌ನ ಮುಕ್ತಾಯ ಸಮಾರಂಭ ವರ್ಣರಂಜಿತವಾಗಿತ್ತು. ಚೀನ ತನ್ನ ತಾಂತ್ರಿಕ ಶಕ್ತಿಯನ್ನು ಇಲ್ಲಿ ತೆರೆದಿಟ್ಟಿತು. ಉದ್ಘಾಟನ ಸಮಾರಂಭದಲ್ಲೂ ಚೀನದ ತಾಂತ್ರಿಕ ಶಕ್ತಿಯೇ ಮೇಲುಗೈ ಸಾಧಿಸಿತ್ತು. ಮುಕ್ತಾಯ ಸಮಾರಂಭದಲ್ಲಿ “ಬಿಗ್ ಲೋಟಸ್ ಫುಟ್‌ಬಾಲ್ ಮೈದಾನ’ವನ್ನೇ ತೋಟದಂತೆ ಪರಿವರ್ತಿಸಲಾಗಿತ್ತು. ಇದರಲ್ಲಿ ಡಿಜಿಟಲ್ ತಂತ್ರಜ್ಞಾನ, ಕಲೆ, ಪರಿಸರವನ್ನು ಸುಂದರವಾಗಿ, ಸಂತುಲಿತವಾಗಿ ಸಂಯೋಜಿಸಲಾಗಿತ್ತು.
Related Articles
Advertisement
ಟಫ್ìನಲ್ಲಿ ಒಂದು ಬಲೆಯನ್ನು ಸೃಷ್ಟಿಸಲಾಗಿತ್ತು. ಇದರಲ್ಲಿ ಹೊಳೆಯುವ 40,000 ಸಣ್ಣ ಬೆಳಕಿನ ಕೇಂದ್ರಗಳನ್ನು ಗುರುತಿಸಿ, ಅವನ್ನು ಬೆಸ ಸಂಖ್ಯೆಯಲ್ಲಿ ನೇಯಲಾಗಿತ್ತು. ಇವೆಲ್ಲ ಸೇರಿ ಇಡೀ ಅಂಕಣವನ್ನೇ ವರ್ಣಫಲಕವನ್ನಾಗಿ ಪರಿವರ್ತಿಸಿದಂತೆ ಕಂಡುಬಂತು. ಅಲ್ಲಿ ತಾರೆಗಳು ತುಂಬಿದ ಆಗಸ, ಹೂಗಳು, ನೀರಿನ ಅಲೆಗಳು ಕಾಣಿಸಿಕೊಳ್ಳುತ್ತಿದ್ದವು.
ವೇದಿಕೆಯಲ್ಲಿ ನೆನಪುಗಳ ನದಿಯೇ ಹರಿಯಿತು. ಸ್ವಯಂಸೇವಕರು ಹಾಕಿದ ಪರಿಶ್ರಮ, ಚಿಂತನಾಪೂರ್ಣ ಸೇವೆಗಳನ್ನು ನೆನಪಿಸಿಕೊಳ್ಳಲಾಯಿತು. ಅಂತಿಮವಾಗಿ ಎಲ್ಲ ಸ್ವಯಂಸೇವಕರನ್ನು ಆ್ಯತ್ಲೀಟ್‌ಗಳನ್ನು ಕೂಡಿಕೊಳ್ಳಲು ಕರೆಯಲಾಯಿತು. ಇದು ಸಮಾರಂಭದ ಅಂತಿಮ ಭಾಗವಾಗಿ ನಡೆಯಿತು.19ನೇ ಏಷ್ಯಾಡ್ ಮುಕ್ತಾಯವಾದ ಸಂಕೇತವಾಗಿ ವರ್ಚುವಲ್ ಮೂಲಕ ಜ್ಯೋತಿ ಹಿಡಿದುಕೊಂಡಿದ್ದ ದೈತ್ಯ ವ್ಯಕ್ತಿ, ಗೇಮ್ಸ್ ಜ್ಯೋತಿಯನ್ನು ನಂದಿಸಿದ. ಹಾಗೆಯೇ ಮನಮಿಡಿಯುವಂತೆ ನಿಧಾನಕ್ಕೆ ಕಣ್ಮರೆಯಾಗಿ ಹೋದ. ಇಲ್ಲಿ ನಂದಿದ ಬೆಳಕು 2026ರಲ್ಲಿ ಜಪಾನಿನ ನಗೋಯ ಆಯಿcಯಲ್ಲಿ ಹತ್ತಿಕೊಳ್ಳಲಿದೆ.