Advertisement

ನೆರೆ ನೋವಿನ ನಡುವೆಯೂ ಫೈನಲ್‌ಗೆ ಏರಿದ ಸಾಜನ್‌

06:20 AM Aug 20, 2018 | Team Udayavani |

ಜಕಾರ್ತಾ: ಕೇರಳದಲ್ಲಿ ಮಳೆ, ನೆರೆ ಅಟ್ಟಹಾಸಗೈದಿದೆ. ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಇದಕ್ಕೆ ಈಜುಪಟು ಸಾಜನ್‌ ಪ್ರಕಾಶ್‌ ಕುಟುಂಬವೂ ಹೊರತಾಗಿಲ್ಲ. ಸಾಜನ್‌ ದೂರದ ಜಕಾರ್ತಾದಲ್ಲಿ ಈಜುಕೊಳದಲ್ಲಿದ್ದರೆ, ಇತ್ತ ಕೇರಳದಲ್ಲಿ ಅವರ ಕುಟುಂಬ ನೆರೆ ನೀರಿನ ಹೊಡೆತಕ್ಕೆ ತತ್ತರಿಸಿದೆ. ಈ ನೋವು, ಆಘಾತದ ನಡುವೆಯೇ ಏಶ್ಯನ್‌ ಗೇಮ್ಸ್‌ನಲ್ಲಿ ಸಾಜನ್‌ ಪ್ರಕಾಶ್‌ ದಾಖಲೆ ನಿರ್ಮಿಸಿದ್ದಾರೆ.

Advertisement

ಈಜು 200 ಮೀ. ಬಟರ್‌ಫ್ಲೈ ವಿಭಾಗದಲ್ಲಿ 1986ರ ಬಳಿಕ ಮೊದಲ ಸಲ ಫೈನಲ್‌ಗೇರಿದ ಭಾರತೀಯನೆಂಬ ಸಾಧನೆ ಮಾಡಿದ್ದಾರೆ ಸಾಜನ್‌. ಅಂದು ಕಜಾನ್‌ ಸಿಂಗ್‌ ಫೈನಲ್‌ ಪ್ರವೇಶಿಸಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದರು.ಸಾಜನ್‌ ಕುಟುಂಬ ನೆಲೆಸಿರುವ ಇಡುಕ್ಕಿ ಜಿಲ್ಲೆಯಲ್ಲಿ ವ್ಯಾಪಕ ಹಾನಿಯಾಗಿದೆ. ಕುಟುಂಬ ಸಂಕಷ್ಟದಲ್ಲಿರುವುದನ್ನು ತಿಳಿದರೂ ಕ್ರೀಡಾಸ್ಫೂರ್ತಿ ಮೆರೆದ ಸಾಜನ್‌ ಫೈನಲ್‌ನಲ್ಲಿ 5ನೇ ಸ್ಥಾನ (1 ನಿಮಿಷ, 57.75 ಸೆಕೆಂಡ್ಸ್‌)ಪಡೆಯುವಲ್ಲಿ ಯಶಸ್ವಿಯಾದರು.

ಸಾಜನ್‌ ಕುಟುಂಬದ ಸುಳಿವಿಲ್ಲ!
ಕುಟುಂಬದ ಸದಸ್ಯರೆಲ್ಲ ಎಲ್ಲಿದ್ದಾರೆ, ಹೇಗಿದ್ದಾರೆ ಎನ್ನುವ ಮಾಹಿತಿ ಇಲ್ಲದೆ ಸಾಜನ್‌ ಪ್ರಕಾಶ್‌ ಕಂಗಾಲಾಗಿದ್ದಾರೆ. ಫೈನಲ್‌ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಾಜನ್‌, “ನಮ್ಮ ಮನೆಯವರು ಎಲ್ಲಿದ್ದಾರೆ ಎನ್ನುವ ಮಾಹಿತಿ ನನಗೆ ಸಿಕ್ಕಿಲ್ಲ. ಅವರೆಲ್ಲ ಸುರಕ್ಷಿತರಾಗಿ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇನೆ. ಆದಷ್ಟು ಬೇಗ ಅವರನ್ನು ಸೇರುವುದನ್ನು ಎದುರು ನೋಡುತ್ತಿದ್ದೇನೆ’ ಎಂದರು.

ರಾಜ್ಯದ ಶ್ರೀಹರಿಗೆ ನಿರಾಸೆ
ಬೆಂಗಳೂರಿನ ಈಜು ಪಟು ಶ್ರೀಹರಿ ನಟರಾಜ್‌ ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ ಈಜು ಕೂಟದಲ್ಲಿ ಫೈನಲ್‌ ಪ್ರವೇಶಿಸಿದ್ದರು. ಅಲ್ಲಿ 56.19 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿ 8ನೇ ಸ್ಥಾನ ಪಡೆದು ನಿರಾಸೆ ಅನುಭವಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next